ಜಿಲ್ಲೆ

ಹುಬ್ಬಳ್ಳಿಯಲ್ಲಿ ಸಂಭ್ರಮದ ಮಹಿಳಾ ದಿನಾಚರಣೆ, ವಿಜಯವಾಣಿಯಿಂದ ಆಯೋಜನೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ತೋಳನಕೆರೆ ಮುಂದಿನ ರಸ್ತೆಯಲ್ಲಿ ವಿಜಯವಾಣಿ ವತಿಯಿಂದ ಆಯೋಜಿಸಲಾದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಭಾನುವಾರ ಬೆಳಗ್ಗೆ ಅದ್ದೂರಿ ಚಾಲನೆ ನೀಡಲಾಯಿತು.

ಬೆಳಗ್ಗೆ ೬ ಕ್ಕೆ ಮಂತ್ರ ಘೋಷ, ಯತಿಶ್ವರ ಸ್ತುತಿಯೊಂದಿಗೆ ಅಗ್ನಿಹೋತ್ರ ಆರಂಭಿಸಿದ ಪತಂಜಲಿ ಯೋಗ ಸಮಿತಿ ಕಾರ್ಯಕರ್ತರು, ಸಂಪೂರ್ಣ ವಾತಾವರಣ ಶುದ್ದೀಕರಣ ಮಾಡಿದರು.

ನಂತರ ಎಸ್ ಪಿವೈ ಎಸ್ ಎಸ್ ಕಾರ್ಯಕರ್ತರು ವಿವಿಧ ಯೋಗಾಸನಗಳ ಮೂಲಕ ಗಮನ ಸೆಳೆದರು.

ನಂತರ ಝುಂಬಾ ಡ್ಯಾನ್ಸ್ ನಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡರು.

ನಂತರದಲ್ಲಿ ವಿವಿಧ ಮನೋರಂಜನೆ ಆಟಗಳು ನಡೆದವು.