ಜಿಲ್ಲೆ

ಗ್ರಾಹಕರ ಮನಗೆದ್ದ ಅಮೃತ್ ಟೆಕ್ಸ್‌ಟೈಲ್ಸ್- ರೆಡಿಮೆಡ್ಸ್ :ಸುಮಂತ್ ಕುಮಾರ್ ಮೆಚ್ಚುಗೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಯಾವುದೇ ಉದ್ಯಮಗಳು ಯಶಸ್ಸು ಆಗಬೇಕಾದರೆ ನಿರಂತರ ಶ್ರಮದೊಂದಿಗೆ ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳನ್ನು ನೀಡುವ ಜತೆಗೆ ನಗುಮೊಗದ ಸೇವೆ ಅಗತ್ಯ. ಈ ಎರಡನ್ನೂ ಗ್ರಾಹಕರಿಗೆ ನೀಡುವ ಮೂಲಕ ಉಜಿರೆ ಅಮೃತ್ ಟೆಕ್ಸ್‌ಟೈಲ್ಸ್- ರೆಡಿಮೆಡ್ಸ್ ಗ್ರಾಹಕರ ಮನ ಗೆದ್ದಿದೆ ಎಂದು ಗುರುವಾಯನಕೆರೆ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಹೇಳಿದರು.

ರಾಜ್ಯದ ನಂ.1 ಪತ್ರಿಕೆ ವಿಜಯವಾಣಿ ದಸರಾ, ದೀಪಾವಳಿ ಪ್ರಯುಕ್ತ ಗ್ರಾಹಕರಿಗೆ ಮತ್ತು ಮಳಿಗೆದಾರರಿಗೆ ಆಯೋಜಿಸಿರುವ ಅದೃಷ್ಟ ನಿಮ್ಮದು ಕೊಡುಗೆ ನಮ್ಮದು ‘ವಿಜಯವಾಣಿ- ವಿಜಯೋತ್ಸವ-2025’ ಕೂಪನನ್ನು ಉಜಿರೆ ಅಮೃತ್ ಟೆಕ್ಸ್‌ಟೈಲ್ಸ್- ರೆಡಿಮೆಡ್ಸ್‌ನಲ್ಲಿ ಮಂಗಳವಾರ ಬಿಡುಗಡೆಗೊಳಿಸಿ ಮಾತನಾಡಿದರು.

ದ.ಕ., ಉಡುಪಿ ಜಿಲ್ಲಾ ತೋಟಗಾರಿಕಾ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘದ ನಿರ್ದೇಶಕ ರತ್ನರಾಜ್ ಜೈನ್ ಪೇರಂದಬೈಲ್ ಮಾತನಾಡಿದರು. ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಸುಮಂತ್ ಕುಮಾರ್ ಜೈನ್ ಮತ್ತು ಸಹಕಾರಿ ಕ್ಷೇತ್ರದ ಸಾಧಕ ರತ್ನರಾಜ್ ಜೈನ್ ಪೇರಂದಬೈಲ್ ಅವರನ್ನು ಗೌರವಿಸಲಾಯಿತು. ದಂತ ವೈದ್ಯೆ ದೀಪಾಲಿ ಡೋಂಗ್ರೆ, ಉದ್ಯಮಿಗಳಾದ ಪದ್ಮನಾಭ ಶೆಟ್ಟಿಗಾರ್, ನವೀನ್‌ಚಂದ್ರ, ಅಮೃತಾ ಭಟ್, ಪ್ರದೀಪ್ ಜೈನ್, ಸಂದೇಶ್ ಜೈನ್, ಶಾಂತಿ ಪ್ರಸಾದ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಮಾಲೀಕರಾದ ಪ್ರಶಾಂತ್ ಜೈನ್, ಸ್ಮಿತಾ ಜೈನ್ ಸ್ವಾಗತಿಸಿದರು. ವಿಜಯವಾಣಿ ವರದಿಗಾರ ಮನೋಹರ್ ಬಳಂಜ ಪ್ರಸ್ತಾವನೆಗೈದರು. ನಿವೃತ್ತ ಶಿಕ್ಷಕ ಸೋಮಶೇಖರ್ ಶೆಟ್ಟಿ ನಿರೂಪಿಸಿದರು.

ವ್ಯವಹಾರದಲ್ಲಿ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದನ್ನು ವಿಆರ್‌ಎಲ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ.ವಿಜಯ ಸಂಕೇಶ್ವರ್ ಅವರನ್ನು ನೋಡಿ ಕಲಿಯಬೇಕು. ಇಂದು ವಿಜಯವಾಣಿ ಪತ್ರಿಕೆಯನ್ನು ಉತ್ತಮ ವರದಿ, ಉತ್ತಮ ಲೇಖನಗಳನ್ನು ಪ್ರಕಟಿಸಿ ರಾಜ್ಯದ ಓದುಗರ ಮನಗೆಲ್ಲುವ ಮೂಲಕ ರಾಜ್ಯದ ನಂ.1 ಪತ್ರಿಕೆಯನ್ನಾಗಿಸಿದ್ದಾರೆ. ಸಾರಿಗೆ ಕ್ಷೇತ್ರದಲ್ಲಿ ಕೂಡ ದೇಶದಾದ್ಯಂತ ಉತ್ತಮ ಸೇವೆ ನೀಡುತ್ತಿದ್ದಾರೆ. ಸುಮಂತ್ ಕುಮಾರ್ ಜೈನ್ ಗುರುವಾಯನಕೆರೆ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ

ಬಹುಮಾನ ಗೆಲ್ಲುವ ಅವಕಾಶ

ಗ್ರಾಹಕರಿಗೆ ಎರಡು ಸಾವಿರಕ್ಕೂ ಮೇಲ್ಪಟ್ಟ ಖರೀದಿಗೆ ಒಂದು ಕೂಪನ್ ನೀಡಲಾಗುತ್ತಿದ್ದು, ಇದರಲ್ಲಿ ಬಂಪರ್ ಬಹುಮಾನ ಕಾರ್, ಬೈಕ್, ಟಿವಿ, ಚಿನ್ನದ ನಾಣ್ಯ ಸಹಿತ ಎರಡುವರೆ ಸಾವಿರ ಬಹುಮಾನ ಗೆಲ್ಲುವ ಅವಕಾಶ ಇದೆ. ಬಹುಮಾನಗಳು- ಕಾರ್- 7, ಬೈಕ್- 10, ಟಿವಿ- 10, ರೆಫ್ರಿಜರೇಟರ್ಸ್- 10, ವಾಶಿಂಗ್ ಮಷಿನ್- 10, ಚಿನ್ನದ ನಾಣ್ಯ- 125, ಸೇಫ್ ಲಾಕರ್- 10, ಬೆಳ್ಳಿ ನಾಣ್ಯ- 250, ವೆಟ್ ಗೈಂಡರ್- 20, ಟ್ರಾಲಿ ಬ್ಯಾಗ್- 20, ಇಲೆಕ್ಟ್ರಿಕಲ್ ಕೆಟಲ್- 350, ಇಂಡಕ್ಷನ್ ಸ್ಟವ್- 90, ಹಾಟ್ ಪ್ಲಾಸ್ಕ್- 300, ಪ್ರಸರ್ ಕುಕ್ಕರ್- 400, ಪೆಡರಲ್ ಪ್ಯಾನ್- 260, ಕಾಪರ್ ಬಾಟಲ್- 470, ಸ್ಮಾರ್ಟ್ ವಾಚ್- 30 ಬಹುಮಾನಗಳಿವೆ.