ಜಿಲ್ಲೆ

ಮಕ್ಕಳ ಅಧ್ಯಯನಕ್ಕೆ ವಿಜಯವಾಣಿ ವಿದ್ಯಾರ್ಥಿ ಮಿತ್ರ ಸಹಕಾರಿ

ಅಕ್ಕಿಆಲೂರ: ಹಳ್ಳಿಗಳ ವಿದ್ಯಾರ್ಥಿಗಳಿಗೆ ಎಲ್ಲ ರಂಗದ ಮಾಹಿತಿ ಮತ್ತು ಅಧ್ಯಯನಕ್ಕೆ ‘ವಿಜಯವಾಣಿ’ ವಿದ್ಯಾರ್ಥಿ ಮಿತ್ರ ಉತ್ತಮ ಗ್ರಂಥವಾಗಿದೆ ಎಂದು ಉದ್ಯಮಿ ಬಸವರಾಜ ಅಯ್ಯಣ್ಣನವರ ಹೇಳಿದರು.

ಸ್ಥಳೀಯ ಭಗತ್ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಿಗೆ ಗುರುವಾರ ‘ವಿಜಯವಾಣಿ’ ವಿದ್ಯಾರ್ಥಿ ಮಿತ್ರ ವಿತರಿಸಿ ಅವರು ಮಾತನಾಡಿದರು.

ಕೇವಲ 1 ರೂಪಾಯಿಗೆ ಇಡೀ ಜಗತ್ತಿನ ಮಾಹಿತಿ ಹೊತ್ತು ತರುವ ವಿದ್ಯಾರ್ಥಿ ಮಿತ್ರ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕವಾಗಿದೆ.

ರಾಜಕೀಯ, ಆರ್ಥಿಕ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ಪ್ರಚಲಿತ ವಿದ್ಯಮಾನಗಳನ್ನು ವಸ್ತುನಿಷ್ಠವಾಗಿ ನಿರೂಪಿಸಲು ವಿದ್ಯಾರ್ಥಿ ಮಿತ್ರದ ಕಾರ್ಯ ಶ್ಲಾಘನೀಯ. ಸಾಧನೆ ನಮ್ಮ ಮುಖ್ಯ ಗುರಿಯಾಗಬೇಕು. ಸಾಧನೆ ಮಾಡಿದ ಪ್ರತಿಯೊಬ್ಬರೂ ಬಡತನ, ಅವಮಾನ ಅನುಭವಿಸಿದ್ದಾರೆ. ನಿಮ್ಮಲ್ಲಿನ ಕೀಳರಿಮೆ ಬಿಟ್ಟು ಆತ್ಮವಿಶ್ವಾಸದಿಂದ ಹೆಜ್ಜೆ ಇಡಬೇಕು. ಪದವಿ ಜತೆಗೆ ಮಾನವೀಯತೆ ಮತ್ತು ದಯೆ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಭಗತ್ ಸಮೂಹ ಸಂಸ್ಥೆಯ ಅಧ್ಯಕ್ಷ ಸತೀಶ ಎಂ.ಬಿ. ಮಾತನಾಡಿದರು. ಉದ್ಯಮಿ ಬಸವರಾಜ ಅಯ್ಯಣ್ಣನವರ ಅವರನ್ನು ಸನ್ಮಾನಿಸಲಾಯಿತು. ರಾಜೇಶ್ವರಿ ಮಳಿಯಣ್ಣನವರ, ದೀಪಾ ಎನ್., ಭುವನೇಶ್ವರಿ ಲಂಬಿ, ಅಸ್ಮಾ ತಳಕಲ್ಲ, ಜ್ಯೋತಿ ಬೋವೆರ್, ಸಾಯಿ ಪೂಜಾ, ಶಿಲ್ಪಾ ಜಿ.ಬಿ., ದೀಪಾ ಜೋಗಿಹಳ್ಳಿ, ಅಲ್ತಾಫ್, ರತನ್ ಕಾಶಪ್ಪನವರ, ಪುಷ್ಪಾ ಕಡೂರು, ಪುನೀತಕುಮಾರ ವಡ್ಡರ ಉಪಸ್ಥಿತರಿದ್ದರು.