ಜಿಲ್ಲೆ

ಕೃಷಿಕರಲ್ಲಿ ಹಿಂಗಾರು ಮುನ್ನೆಚ್ಚರಿಕೆ ಅತ್ಯಗತ್ಯ

reportermys

ಸಣ್ಣುವಂಡ ಕಿಶೋರ್ ನಾಚಪ್ಪ ಗೋಣಿಕೊಪ್ಪ
ಅಕ್ಟೋಬರ್ ತಿಂಗಳೊಂದಿಗೆ ಹಿಂಗಾರು ಪ್ರಾರಂಭಗೊಂಡಿರುವುದರಿಂದ ರೈತರು ಸಕಾಲದಲ್ಲಿ ಬೆಳೆಗಳಿಗೆ ಬೇಕಾದ ಮುಂಜಾಗೃತ ಕ್ರಮ ತೆಗೆದುಕೊಳ್ಳಬೇಕೆಂದು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ತಜ್ಞರು ಸಲಹೆ ನೀಡಿದ್ದಾರೆ.

ಕನ್ನಡದ ನಂಬರ್ ೧ ದಿನಪತ್ರಿಕೆ ವಿಜಯವಾಣಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ತೋಟಗಾರಿಕೆ ಮತ್ತು ಭತ್ತದ ಬೆಳೆಯಲ್ಲಿ ತಕ್ಷಣ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು. ಫಸಲು ಬಲಿಯುವ ಸಮಯವಾಗಿರುವುದರಿಂದ ರೋಗ ನಿಯಂತ್ರಣ, ಸಮಯ ಅರಿತು ಆಯಾ ಬೆಳೆಗಳಿಗೆ ಲಘು ಪೋಶಕಾಂಶ ನೀಡಲು ಮುಂದಾಗಬೇಕೆಂದರು.

ಕಿತ್ತಳೆಯಲ್ಲಿ ನೊಣ ನಿಯಂತ್ರಿಸಬೇಕಿದೆ. ಕಿತ್ತಳೆ ಹಣ್ಣಿಗೆ ನೊಣದ ಬಾಧೆ ಹೆಚ್ಚಿರುತ್ತದೆ. ಲಿಂಗಾರ್ಷಕ ಬಲೆ ಹಾಕುವುದರಿಂದ ನಿಯಂತ್ರಣ ಸಾಧ್ಯವಿದೆ. ನೊಣಗಳು ಹಣ್ಣಿನ ಮೇಲೆ ಗಾಯ ಮಾಡಿ ತಿನ್ನಲು ಆಗದಂತೆ ಘಾಸಿಗೊಳಿಸುತ್ತದೆ. ಇದರ ನಿಯಂತ್ರಣ ಕೂಡ ಅವಶ್ಯವಾಗಿದೆ. ೧ ಎಕರೆಗೆ ೫ ಕಡೆಗಳಲ್ಲಿ ಲಿಂಗಾರ್ಷಕ ಬಲೆ ಹಾಕುವುದರಿಂದ ಹೆಚ್ಚು ಪ್ರಯೋಜನಕ್ಕೆ ಬರುತ್ತದೆ. ಮಿಥೈಲ್ ಯುಜಿನಾಲ್ ಹೊಂದಿರುವ ಟ್ರ್ಯಾಪ್ ಹಾಕಬೇಕಿದೆ.

ಅರೆಬಿಕಾ ಕಾಫಿ ಬೆಳೆಯ ಕಾಂಡ ಉಜ್ಜಬೇಕು. ಅರೆಬಿಕಾ ಕಾಫಿಗೆ ಎಲೆ ತುಕ್ಕು ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ೧ ಎಂಎಲ್ ಎಕ್ಸಕ್ಲೊನೋಜೋಲ್ ಅನ್ನು ಪ್ರತಿ ಲೀಟರ್ ನೀರಿಗೆ ಸಿಂಪಡಣೆ ಮಾಡಬೇಕಿದೆ. ಕಾಂಡದಲ್ಲಿ ಕಾಣುವ ಕಾಂಡ ರೋಗ ನಿಯಂತ್ರಣ ಕೂಡ ಮುಖ್ಯ. ಕಾಂಡವನ್ನು ಗೋಣಿಚೀಲ ಅಥವಾ ತೆಂಗಿನ ನಾರಿನಿಂದ ಉಜ್ಜುವುದರಿಂದ ಕಾಂಡದಲ್ಲಿ ಕೀಟಗಳು ಉಳಿಯದಂತೆ ನಿಯಂತ್ರಿಸ ಬಹುದು. ರೋಬಸ್ಟಾ ಕಾಫಿ ಬೆಳೆಗೆ ಮೈಕ್ರೋ ನ್ಯೂಟಿನ್ ಸ್ಪ್ರೇ ಮಾಡಬಹುದಾಗಿದೆ ಎಂಬ ಸಲಹೆ ನೀಡಿದರು.

ಕಾಫಿಗೆ ಮುಂಜಾಗೃತವಾಗಿ ಮೋಹಕ ಬಲೆ ಹಾಕಬೇಕು. ಕಾಫಿಯಲ್ಲಿ ಬೆರಿಬೋರರ್ (ಕಾುಕೊರಕ) ಕಾಯಿಲೆ ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಮುಂಜಾಗೃತೆಯಾಗಿ ಬೆರಿಬೋರರ್ ಟ್ರ್ಯಾಪ್ ನೇತು ಹಾಕುವುದು ಹೆಚ್ಚು ಪರಿಣಾಮಕಾರಿಯಾಗಲಿದೆ. ಕಾಫಿ ಮಂಡಳಿ ಯಿಂದ ಪಡೆದುಕೊಂಡು ಎಕರೆಗೆ ೨೫ ಟ್ರ್ಯಾಪ್ ಹಾಕಬಹುದು. ಕಾಯಿ ಕೊರಕ ಹರಡುವುದರನ್ನು ಸಂಪೂರ್ಣವಾಗಿ ನಿಯಂತ್ರಿಬಹು ದಾಗಿದೆ.

ಅಡಕೆ ಬೆಳೆಗೆ ಗೊಬ್ಬರ: ಬೆಳೆಗೆ ಹಿಂಗಾರು ಗೊಬ್ಬರ ನೀಡಬಹುದು. ೧೦೦ ಗ್ರಾಂ ಯೂರಿಯಾ, ೪೦ ಗ್ರಾಂ ಡಿಎಪಿ, ೧೨೦ ಗ್ರಾಂ ಪೊಟಾಷ್ ನೀಡಬಹುದು. ಎಲೆ ಚುಕ್ಕೆ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುವುದರಿಂದ ಕಾರ್ಬಡೈಸಿಮ್ ಜತೆಗೆ ಮೈಕ್ಟೊಸೆಮ್ ಶಿಲೀಂಧ್ರ ನಾಶಕ (ಸ್ಪ್ರಿಟ್) ಅನ್ನು ೨ ಗ್ರಾಮ್‌ನೊಂದಿಗೆ ೧ ಲೀಟರ್ ನೀರಿಗೆ ುಶ್ರಣ ಸಿಂಪಡಣೆ ಮಾಡಬಹುದಾಗಿದೆ ಎಂಬ ಸಲಹೆ ವ್ಯಕ್ತವಾಯಿತು.

ಸೂಕ್ಷ್ಮತೆ ಇರಲಿ: ಭತ್ತ ಕದಿರು ಗರ್ಭಾವಸ್ಥೆಯಲ್ಲಿದ್ದರೆ ಗದ್ದೆಯಲ್ಲಿ ನಡೆದಾಡುವುದು ತೊಂದರೆಯಾಗಲಿದೆ. ಸೂಕ್ಷ್ಮವಾಗಿ ನಿಭಾುಸಬೇಕಿದೆ. ಮಳೆ ಬಿದ್ದರೆ ಪರಾಗಸ್ಪರ್ಶ ಮತ್ತು ಗರ್ಭಾವಸ್ತೆಯಲ್ಲಿರುವ ಬೆಳೆಗೆ ಸಮಸ್ಯೆಯಾಗಲಿದೆ. ಇದು ಇದರ ನಿಯಂತ್ರಣ ಕಷ್ಟ ಸಾಧ್ಯ. ನ್ಯಾನೋ ಯೂರಿಯಾ ಅಥವಾ ಯೂರಿಯಾ ಸಿಂಪಡಣೆ ಮಾಡಬಹುದು. ತಡವಾಗಿ ನಾಟಿ ಮಾಡಿದವರು ನೈಟ್ರೋಜನ್, ಪೊಟಾಶ್ ೩೦ ಕೆಜಿ ಪ್ರಮಾಣದಲ್ಲಿ ನೀಡಬಹುದಾಗಿದೆ. ದೊಡ್ಡ ಮಟ್ಟದಲ್ಲಿ ಕಳೆ ಇದ್ದರೆ ಕಳೆ ನಾಶಕ ಸಿಂಪಡಣೆ ಪ್ರಯೋಜನಕ್ಕೆ ಬರುವುದಿಲ್ಲ ೨-೩ ಎಲೆಗಳ ಕಳೆ ಇದ್ದರಷ್ಟೆ ಕಳೆ ನಾಶಕ ಸಿಂಪಡಣೆ ಮಾಡಬಹುದು. ಬೆಳೆ ಎತ್ತರದಲ್ಲಿರುವುದರಿಂದ ದ್ರಾವಣ ಸರಿಯಾದ ಪ್ರಮಾಣದಲ್ಲಿ ಕಳೆಗೆ ದೊರೆಯದಂತಾಗುತ್ತದೆ ಎಂದು ತಿಳಿಸಿದರು.

ಕರಿಮೆಣಸು ನೆಲದ ತೇವಾಂಶ ಕಾಪಾಡಬೇಕು: ೧ ಕೆ.ಜಿ. ಪೆಪ್ಪರ್ ಸ್ಪ್ರೇ ಲಘು ಪೋಶಕಾಂಶ ಮತ್ತು ೧ ಕೆ.ಜಿ. ೧೯ ಸರಾಸರಿ ಹೊಂದಿರುವ ರಾಸಾಯನಿಕ ಗೊಬ್ಬರವನ್ನು ೨೦೦ ಲೀಟರ್ ನೀರಿಗೆ ಸಿಂಪಡಣೆ ಮಾಡಬಹುದಾಗಿದೆ. ನೆಲಕ್ಕೆ ೪ ಕೆ.ಜಿ. ಅರ್ಕಾ ಸೂಕ್ಷ್ಮಾಣು ಜೀವಾಣುವನ್ನು ೨೦೦ ಲೀ. ನೀರಿಗೆ ಮಿಶ್ರಣ ಮಾಡಿ ಹಾಕಬಹುದಾಗಿದೆ. ಕೀಟ ಹಾವಳಿ ಇದ್ದರೆ ಅರ್ಧ ುಲಿ ಇುಡೊಕ್ಲಿಪಿಡ್ ಅನ್ನು ಅಂಟು ದ್ರಾವಣದೊಂದಿಗೆ ೨೦೦ ಲೀ. ನೀರಿಗೆ ಹಾಕಿ ಸಿಂಪಡಣೆ ಮಾಡಬಹುದು.

**
ಕರಿಮೆಣಸು ಬೆಳೆಯಲ್ಲಿ ತೇವಾಂಶ ನಿಯಂತ್ರಿಸುವುದು ಸೂಕ್ತ. ತರಗೆಲೆಗಳನ್ನು ಬುಡಕ್ಕೆ ಮಲ್ಚಿಂಗ್ ಮಾಡುವುದರಿಂದ ಪರಿಣಾಮಕಾರಿ ಯಾಗಿ ತೇವಾಂಶ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ. ಇದರ ಜತೆಗೆ ಬಳ್ಳಿಯ ಬುಡದಿಂದ ೩-೪ ಅಡಿ ದೂರದ ಮಣ್ಣನ್ನು ತೆಗೆದು ಮೆಣಸಿನ ಬುಡಕ್ಕೆ ಹಾಕುವುದು ಉತ್ತಮ ಬಳ್ಳಿಗೆ ಬೇರಿಗೆ ಗಾಯವಾಗದಂತೆ ನೋಡಿಕೊಳ್ಳಬೇಕಿದೆ. ಡಾ.ಬಿ. ಪ್ರಭಾಕರ್, ತೋಟಗಾರಿಕಾ ಬೆಳೆ ವಿಷಯ ತಜ್ಞರು, ಕೆವಿಕೆ, ಗೋಣಿಕೊಪ್ಪ

**
ಭತ್ತ ಬೆಳೆಗೆ ಬೆಂಕಿ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಟ್ರಿಫ್ರೋಕ್ಸಿಸ್ರೊಬಿನ್ ಜತೆಗೆ ಟೆಬುಕೊನೊಸೊಲ್ (ನೇಟಿವೊ) ೦.೫ ಗ್ರಾಂ ಅನ್ನು ೧ ಲೀಟರ್ ನೀರಿಗೆ ಸಿಂಪಡಣೆ ಮಾಡಬಹುದಾಗಿದೆ. ಕಳೆ ನಾಶಕವಾಗಿ ಮೆಟ್ಸುಲ್ಪುರೊನ್ ಮಿಥೈಲ್ ಜತೆಗೆ ಕ್ಲೋರೊಮುರನ್ ಇಥೈಲ್ (ಪಿುಕ್ಸ್) ೮ ಗ್ರಾಂ ಅನ್ನು ೧೦೦ ಲೀ. ನೀರಿಗೆ ಸಿಂಪಡಣೆ ಮಾಡಬಹುದಾಗಿದೆ. ಭೂಮಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇರುವಂತೆ ಸಿಂಪಡಣೆ ಸಂದರ್ಭ ನೋಡಿಕೊಳ್ಳಬೇಕಿದೆ. ಡಾ.ಕೆ.ವಿ. ವೀರೇಂದ್ರಕುಮಾರ್, ಸಸ್ಯ ಸಂರಕ್ಷಣಾ ತಜ್ಞ, ಕೆವಿಕೆ, ಗೋಣಿಕೊಪ್ಪ.

**
ಮುಂದಿನ ೧೦ ದಿನ ಅಲ್ಲಲ್ಲಿ ೨೦-೩೦ ಸೆಂಟ್ ಮಳೆಯಾಗುವ ಮುನ್ಸೂಚನೆ ಇದೆ. ಇದರಿಂದಾಗಿ ಬೆಳೆಗಳಿಗೆ ಹೆಚ್ಚು ತೊಂದರೆಯಾಗಲಿದ್ದು, ಭತ್ತ ಬೆಳೆಗೆ ಮಳೆ ಬಂದರೆ ಇಳುವರಿ ಕುಂಠಿತವಾಗಬಹುದು. ಮಳೆ ಕ್ಷೀಣ ಇರುವುದರಿಂದ ಕರಿಮೆಣಸು ಗಿಡವನ್ನು ತೋಟಕ್ಕೆ ನೆಡಲು ಸಕಾಲವಾಗಿದೆ. ಬಹುತೇಕ ಗಿಡ ಉಳಿಸಿಕೊಳ್ಳಬಹುದಾಗಿದೆ. ಡಾ.ಎಂ.ಎನ್. ಹರೀಶ್, ತಜ್ಞ, ಕೃಷಿ ಹವಾಮಾನ ಘಟಕ, ಕೆವಿಕೆ, ಗೋಣಿಕೊಪ್ಪ.

**
ಹಿಂಗಾರು ಆರಂಭವಾಗಿರುವುದರಿಂದ ತೋಟಗಾರಿಕಾ ಬೆಳೆಗೆ ಮಳೆಯ ಅವಶ್ಯಕತೆ ಇರುತ್ತದೆ. ಆದರೆ, ಭತ್ತ ಸಮಯಕ್ಕೆ ಸರಿಯಾಗಿ ನಾಟಿ ಮಾಡಿದ ಬೆಳೆ ಗರ್ಭಾವಸ್ಥೆ ಕಾಣಬಹುದು. ಈಗ ಮಳೆ ಬಿದ್ದರೆ ಫಲಸು ನಷ್ಟ ಸಾಧ್ಯತೆ ಹೆಚ್ಚು. ರೋಗದ ಮುನ್ಸೂಚನೆ ಅರಿತು ತೊಡಗಿಕೊಳ್ಳ ಬೇಕಿದೆ. ಅನಾವಶ್ಯಕ ಗದ್ದೆಯಲ್ಲಿ ನಡೆದಾಡುವುದು ಕೂಡ ಫಸಲಿಗೆ ತೊಂದರೆಯಾಗಲಿದೆ. ಡಾ.ಕೆ.ಎ. ದೇವಯ್ಯ, ಪ್ರಭಾರ ಮುಖ್ಯಸ್ಥರು, ಕೆವಿಕೆ, ಗೋಣಿಕೊಪ್ಪ.