ಮೈಸೂರು ಅಥ್ಲೆಟಿಕ್ಸ್ ಕ್ಲಬ್‌ನ 2023-24ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಛಾಯಾಗ್ರಾಹಕ ಕೆ.ಎಚ್. ಚಂದ್ರು ಆಯ್ಕೆಯಾಗಿದ್ದಾರೆ.
ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ಜ.18ರಂದು ಸಂಜೆ 5ಕ್ಕೆ ಮೈಸೂರು ವಿ.ವಿ. ಓವೆಲ್ ಮೈದಾನ ಸಮೀಪದ ಲಯನ್ಸ್ ಸಭಾಂಗಣದಲ್ಲಿ ನಡೆಯಲಿದೆ.
2023-24ನೇ ಸಾಲಿನ ವರದಿಗಾರಿಕೆಗೆ ಪತ್ರಕರ್ತ ಎಚ್.ಎಸ್. ದಿನೇಶ್‌ಕುಮಾರ್, ಉತ್ತಮ ಕ್ರೀಡಾ ಪ್ರೋತ್ಸಾಹಕ ಗೌರವಕ್ಕೆ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಪಾತ್ರರಾಗಿದ್ದಾರೆ. 2022-23ನೇ ಸಾಲಿನ ಉತ್ತಮ ಕ್ರೀಡಾ ವರದಿಗಾರಿಕೆಗೆ ಕ್ರೀಡಾ ವರದಿಗಾರ ಸಿ. ಮೋಹನ್‌ಕುಮಾರ್ ಹಾಗೂ ಅರೆಕಾಲಿಕ ಛಾಯಾಗ್ರಾಹಕ ಹಂಪಾ ನಾಗರಾಜು ಆಯ್ಕೆ ಆಗಿದ್ದಾರೆ.
2022-23ನೇ ಸಾಲಿನ ಉತ್ತಮ ಅಥ್ಲೀಟ್ ಆಗಿ ವಿ. ಅಂಬಿಕಾ ಹಾಗೂ 2023-24ನೇ ಸಾಲಿನ ಉತ್ತಮ ಅಥ್ಲೀಟ್ ಆಗಿ ಕಾಶ್ವಿ ಅಗ್ರಹಾರ ಹಾಗೂ ಲಕ್ಷೃ ಆಯ್ಕೆ ಆಗಿದ್ದಾರೆ. ಇವರೆಲ್ಲರಿಗೂ ತಲಾ 5 ಸಾವಿರ ರೂ. ನಗದು ಹಾಗೂ ಸ್ಮರಣಿಕೆಯೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪ್ರತಿಭಾನ್ವಿತ ಅಥ್ಲೀಟ್‌ಗಳಾಗಿ ಎಂ.ಎ. ವರ್ಷಾ, ಪಿ. ಚಿರಂತ್, ರಾಹುಲ್ ನಾಯಕ್, ಎಸ್.ಕೆ. ರೇಯಾ, ಎಂ.ಕೆ. ಚಿಕ್ಕಮ್ಮ, ಎಂ. ಸಂಜನಾ ರೆಡ್ಡಿ, ತೇಜಸ್ವಿನಿ ಹಾಗೂ ವಿಶೇಷ ಪುರಸ್ಕಾರಕ್ಕೆ ಹರ್ಷಿತ ಗೌಡ ಅವರನ್ನು ಆಯ್ಕೆ ಮಾಡಲಾಗಿದ್ದು, ತಲಾ 1 ಸಾವಿರ ರೂ.ನಗದು ಪುರಸ್ಕಾರ ನೀಡಲಾಗುವುದು.
ಕಾರ್ಯಕ್ರಮವನ್ನು ಪತ್ರಕರ್ತ ಗಿರೀಶ ದೊಡ್ಡಮನಿ ಉದ್ಘಾಟಿಸಲಿದ್ದಾರೆ. ಅಗ್ನಿಶಾಮಕ ಸೇವೆಗಳ ಇಲಾಖೆ ನಿರ್ದೇಶಕ ಟಿ.ಎನ್. ಶಿವಶಂಕರ್, ಮಾಡರ್ನ್ ಜ್ಯುವೆಲರ್ಸ್‌ನ ಕೆ.ಸಿ. ಪ್ರತಾಪಸಿಂಗ್ ರಾಜಪುರೋಹಿತ್ ಹಾಗೂ ಮೈಸೂರು ವಿ.ವಿ.ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಸಿ. ವೆಂಕಟೇಶ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಕ್ಲಬ್‌ನ ಪ್ರಭಾರ ಅಧ್ಯಕ್ಷ ಸಿ. ಕೃಷ್ಣ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕ್ಲಬ್‌ನ ಕಾರ್ಯದರ್ಶಿ ಎಂ. ಯೋಗೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.