ಹುಬ್ಬಳ್ಳಿ: ಕನ್ನಡದ ನಂಬರ್ ಒನ್ ದಿನಪತ್ರಿಕೆ "ವಿಜಯವಾಣಿ' ಹಾಗೂ "ದಿಗ್ವಿಜಯ' ಸುದ್ದಿವಾಹಿನಿ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹುಬ್ಬಳ್ಳಿಯ ಕನಕದಾಸ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ನಗರದ ವಿವಿಧ ಕಾಲೇಜುಗಳ ವಿದ್ಯಾಥಿರ್ಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಕನಕದಾಸ ಮಹಾವಿದ್ಯಾಲಯ, ಪಿ.ಸಿ.ಜಾಬೀನ ಮಹಾವಿದ್ಯಾಲಯ, ಎಸ್.ಕೆ.ಕೊತಂಬ್ರಿ ಮಹಾವಿದ್ಯಾಲಯ, ಕಾಡಸಿದ್ದೇಶ್ವರ ಕಲಾ ಮಹಾವಿದ್ಯಾಲಯ, ಚೇತನ ಮಹಾವಿದ್ಯಾಲಯ, ಮಹಿಳಾ ಪಾಲಿಟೆಕ್ನಿಕ್, ಜೆಜಿ ಕಾಮರ್ಸ್, ಮತ್ತಿತರ ಕಾಲೇಜುಗಳ ವಿದ್ಯಾಥಿರ್ಗಳು ಸ್ಪರ್ಧೆಯಲ್ಲಿ ಭಾಗವಹಿಸಿ, ಉತ್ಸಾಹದಿಂದ ಪ್ರಬಂಧ ಬರೆದರು.
ಟಾರ್ಗೆಟ್ 2047- ಸ್ವಾತಂತ್ರ್ಯ. ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಭಾರತ, ಸ್ವಾತಂತ್ರ್ಯದ ಶತಮಾನೋತ್ಸವ ಅಂದರೆ ಮುಂದಿನ 25 ವರ್ಷಗಳಲ್ಲಿ ಸಾಧಿಸಬೇಕಿರುವುದು ಏನು ? ಇದರಲ್ಲಿ ಯುವ ಜನರ ಪಾತ್ರವೇನು ? ಎಂಬುದರ ಬಗ್ಗೆ ಪ್ರಬಂಧ ಬರೆಯಲು ತಿಳಿಸಲಾಗಿತ್ತು. ಪ್ರಬಂಧ ಸ್ಪರ್ಧೆ ವಿಜೇತರಿಗೆ ಆಗಸ್ಟ್ 15ರಂದು ನಡೆಯುವ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ನಗದು ಬಹುಮಾನ ನೀಡಲಾಗುವುದು. ಪ್ರಥಮ ಬಹುಮಾನ 5,000 ರೂ., ದ್ವೀತಿಯ ಬಹುಮಾನ 3,000 ರೂ. ಹಾಗೂ ತೃತೀಯ ಬಹುಮಾನ 2,000 ರೂ. ನಗದು ಬಹುಮಾನ ನೀಡಲಾಗುವುದು.