ಜಿಲ್ಲೆ

ಉನ್ನತ ಸಾಧನೆ ಮಾಡಿದ ಅಶ್ವಿನಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ವಿಜಯವಾಣಿ ಪ್ರತಿಭಾ ಪುರಸ್ಕಾರ

ಬೆಂಗಳೂರು: 2024-25ನೇ ಸಾಲಿನ 10ನೇ ತರಗತಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ವಿಜಯವಾಣಿ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಲಗ್ಗೆರೆಯ ಅಶ್ವಿನಿ ಸಮೂಹ ಶಿಕ್ಷಣ ಸಂಸ್ಥೆಯ ಕುವೆಂಪು ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ರಾಜೀವ್ ಗಾಂಧಿ ಪಬ್ಲಿಕ್ ಸ್ಕೂಲ್‌ನ ಶೇ.80ಕ್ಕಿಂತ ಮೇಲ್ಪಟ್ಟ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದ ಒಟ್ಟು 18 ವಿದ್ಯಾರ್ಥಿಗಳಿಗೆ ವಿಜಯವಾಣಿ ಪ್ರಧಾನ ಸಂಪಾದಕ ಕೆ.ಎನ್.ಚನ್ನೇಗೌಡ, ಸರ್ಕ್ಯೂಲೇಷನ ವಿಭಾಗದ ಪ್ರಧಾನ ವ್ಯವಸ್ಥಾಪಕ ವಿದ್ಯಾಧರ ಪೂಜಾರ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಇದೇ ವೇಳೆ ಮಕ್ಕಳ ಶೈಕ್ಷಣಿಕ ಸಾಧನೆಗೆ ಕಾರಣೀಭೂತರಾದ ಸಂಸ್ಥೆಯ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿಸಲಾಯಿತು. ವಿದ್ಯಾರ್ಥಿಗಳ ಸಾಧನೆ ಕುರಿತು ಲಗ್ಗೆರೆ ಬಾಲಗಂಗಾಧರ ತಿಲಕ್ ಪ್ರೌಢಶಾಲೆ ಅಧ್ಯಕ್ಷ ಗಂಗಾಭೈರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಯ ಅಧ್ಯಕ್ಷ ಕೆ.ವೆಂಕಟೇಶ್, ಕಾರ್ಯದರ್ಶಿ ಕೆ.ಎ.ಯುವರಾಜು, ಸದಸ್ಯರಾದ ಮಲ್ಲೇಶ್ ಕುಮಾರ್, ಮಂಜುಳಾ ನಾರಾಯಣಸ್ವಾಮಿ, ಶಿಕ್ಷಕರಾದ ವೀರಭದ್ರಪ್ಪ ಮತ್ತಿತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರತಿಭಾ ಪುರಸ್ಕೃತ ವಿದ್ಯಾರ್ಥಿಗಳು

ಆರ್.ಕಾವ್ಯ ಶೇ. 98.56, ರಜತ್ ಯಾದವ್ ಶೇ. 91.20, ವರ್ಷಿತ ಕೆ.ಎನ್. ಶೇ. 90.40, ಭಾವನ ಕೆ.ಆರ್. ಶೇ. 90.08, ಪುಷ್ಪಲತ ಶೇ. 89.90, ಭೂಮಿಕ ಶೇ. 88.88, ಬಿ.ಶ್ರುತಿ ಶೇ. 87.80, ಕೆ.ಎ.ಧನಲಕ್ಷ್ಮಿ ಶೇ. 86.80, ವಿ.ಜ್ಯೋತಿ ಶೇ. 86.40, ನೈತಿಕ್ ಮಿಶ್ರಾ ಶೇ. 85.12, ಕವಿತ ಶೇ. 84.48, ಎಲ್.ನವ್ಯ ಶೇ. 82.08, ಎ.ಮನೀಶ್ ಬಿಸ್ಟ್ ಶೇ. 81.76, ಎಸ್.ಯಶಸ್ ಶೇ. 81.60, ಜಯಶ್ರೀ ಶೇ. 81.40, ಗಗನ ಶೇ. 80.64, ಎಸ್.ಸಮೃದ್ಧಿ ಶೇ. 80.48, ಎಚ್.ವಿದ್ಯಾರಕ್ಷಿತ ಶೇ.80. "ವಿದ್ಯಾರ್ಥಿಗಳ ಭವಿಷ್ಯಕ್ಕೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಅಡಿಪಾಯವಾಗಿದ್ದು, ಇಲ್ಲಿ ಕಲಿಯುವ ಪಠ್ಯ ಮುಂದೆ ಐಎಎಸ್, ಐಪಿಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗೆ ಕೂಡಾ ಸಹಕಾರಿಯಾಗುತ್ತದೆ. ಅಶ್ವಿನಿ ಶಿಕ್ಷಣ ಸಂಸ್ಥೆಯು ಉತ್ತಮ ಸೇವೆ ಒದಗಿಸುತ್ತಿದ್ದು, ಮುಂದಿನ ವರ್ಷ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಶಾಲೆ, ಶಿಕ್ಷಕರು, ಪೋಷಕರಿಗೆ ಗೌರವ ತರುವಂತಾಗಲಿ." -ಕೆ.ಎನ್.ಚನ್ನೇಗೌಡ, ಪ್ರಧಾನ ಸಂಪಾದಕ, ವಿಜಯವಾಣಿ

"ಪ್ರತಿಯೊಂದು ಆರಂಭಕ್ಕೂ ಒಂದು ಅಂತ್ಯವಿದೆ. ಪ್ರತಿಯೊಂದು ಅಂತ್ಯಕ್ಕೂ ಮತ್ತೊಂದು ಆರಂಭವಿದೆ. ಈ ಧ್ಯೇಯವನ್ನು ಇರಿಸಿಕೊಂಡರೆ ಎಲ್ಲರೂ ಸಾಧನೆಯನ್ನು ಮಾಡಲು ಸಾಧ್ಯ. ನನ್ನ ಸಾಧನೆಗೆ ಬೆಂಬಲಿಸಿದ ಪೋಷಕರು, ಶಿಕ್ಷಕರು ಹಾಗೂ ನಮ್ಮ ಸಾಧನೆಯನ್ನು ಗುರುತಿಸಿದ ವಿಜಯವಾಣಿ ಪತ್ರಿಕೆಗೆ ಧನ್ಯವಾದಗಳು."  - ಆರ್.ಕಾವ್ಯ, ಪ್ರಥಮ ರಾಂಕ್ ವಿದ್ಯಾರ್ಥಿನಿ