ರಾಯಚೂರಿನ ರಾಘಪ್ಪಬಾವಿ ಹತ್ತಿರವಿರುವ ಜಾನೇಕಲ್ ವಿಜಯರುದ್ರ ಸ್ವಾಮಿ ಮಠದಲ್ಲಿನ ದೇವಸ್ಥಾನ ಜೀರ್ಣೋದ್ಧಾರ ಲೋಕಾರ್ಪಣೆ ಸಂದರ್ಭದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹೋಮಕ್ಕೆ ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಪೂರ್ಣಾಹುತಿ ಸಲ್ಲಿಸಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಜೆ.ಎಂ.ಶರಣಯ್ಯಸ್ವಾಮಿ, ಬಡಾವಣೆ ಮುಖಂಡರಾದ ವಿನೋದರೆಡ್ಡಿ, ಬಸಲಿಂಗಯ್ಯಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ, ಬಸ್ಸಯ್ಯ ಸ್ವಾಮಿ, ವೆಂಕಟೇಶ ಗಣಮೂರು ಇದ್ದರು. 
ಜಿಲ್ಲೆ

ವಿಜಯರುದ್ರ ಸ್ವಾಮಿ ದೇವಸ್ಥಾನ ಜೀಣೋದ್ದಾರ

ರಾಯಚೂರು: ನಗರದ ರಾಘಪ್ಪ ಬಾವಿ ಹತ್ತಿರವಿರುವ ಜಾನೇಕಲ್ ವಿಜಯರುದ್ರ ಸ್ವಾಮಿ ಮಠದಲ್ಲಿನ ಜೀಣೋದ್ಧಾರಗೊಂಡ ದೇವಸ್ಥಾನವನ್ನು ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಹಾಗೂ ಸೋಮವಾರ ಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ ಸೋಮವಾರ ಉದ್ಘಾಟನೆಗೊಳಿಸಿದರು.
ಈ ಸಂದರ್ಭದಲ್ಲಿ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪುರಾತನವಾದ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸುವ ಮೂಲಕ ಮಠದ ಸದಸ್ಯರು ಜನರ ದರ್ಶನಕ್ಕೆ ಅನುಕೂಲ ಕಲ್ಪಿಸಿದ್ದು, ಜೀವೈಕ್ಯವಾಗಿರುವ ಮಹನೀಯರ ಗದ್ದುಗೆಗಳನ್ನು ಪುನರ್ ಪ್ರತಿಷ್ಠಾಪನೆ ಮಾಡಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ವ್ನಿೇಶ್ವರ, ನಾಗದೇವತೆ, ನಂದಿ ಪ್ರತಿಷ್ಠಾಪನೆ ನೆರವೇರಿಸಲಾಯಿತು. ನಂತರ ಶಿಲಾಮೂರ್ತಿಗಳಿಗೆ ಮಂತ್ರೋಪದೇಶ, ಹೋಮ ನಡೆಸಿ ಪೂರ್ಣಾಹುತಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಜೆ.ಎಂ.ಶರಣಯ್ಯಸ್ವಾಮಿ, ನಗರಸಭೆ ಸದಸ್ಯ ಶ್ರೀನಿವಾಸರೆಡ್ಡಿ, ಬಡಾವಣೆ ಮುಖಂಡರಾದ ವಿನೋದರೆಡ್ಡಿ, ಬಸಲಿಂಗಯ್ಯಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ, ಬಸ್ಸಯ್ಯ ಸ್ವಾಮಿ, ವೆಂಕಟೇಶ ಗಣಮೂರು ಉಪಸ್ಥಿತರಿದ್ದರು.