ಇಂಡಿ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕರ್ನಾಟಕ ರಾಜ್ಯ (6-8) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕ ಘಟಕದ ಪದಾಧಿಕಾರಿಗಳು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನೂತನ ಬಿಇಒ ಸುರೇಂದ್ರ ಕಾಂಬಳೆ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಎ.ಸಿ. ಹುಣಸಗಿ, ಎ.ಜಿ. ಚೌಧರಿ, ಚಂದ್ರಶೇಖರ ಹಕಾರಿ, ಆರ್.ಸಿ. ವಠಾರ ಇತರರಿದ್ದರು. 
ವಿಜಯಪುರ

ಸೇವಾ ಸೌಲಭ್ಯ ಮಂಜೂರು ಮಾಡಲು ಕ್ರಮ

ನೂತನ ಬಿಇಒ ಸುರೇಂದ್ರ ಕಾಂಬಳೆ ಭರವಸೆ ಶಿಕ್ಷಕರ ಸಂಘದಿಂದ ಮನವಿ

ಇಂಡಿ: ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕರ್ನಾಟಕ ರಾಜ್ಯ (6-8) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನೂತನ ಬಿಇಒ ಸುರೇಂದ್ರ ಕಾಂಬಳೆ ಅವರಿಗೆ ಶನಿವಾರ ಮನವಿ ಪತ್ರ ಸಲ್ಲಿಸಿದರು.

ಜಿಪಿಟಿ ಶಿಕ್ಷಕರಿಗಾಗಿ ಒಂದು ದಿನದ ಗುರುಸ್ಪಂದನ ಕಾರ್ಯಕ್ರಮ ಆಯೋಜಿಸಿ, ಶಿಕ್ಷಕರಿಗೆ ತಮ್ಮ ಸೇವಾ ಪುಸ್ತಕ ಪರಿಶೀಲಿಸಲು ಹಾಗೂ ಸೇವಾ ದಾಖಲೆಗಳಲ್ಲಿನ ಸಮಸ್ಯೆ ಸರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡುವುದು. ಬೇಸಿಗೆ ರಜಾ ಅವಧಿಯಲ್ಲಿ ಜನಗಣತಿ ಕಾರ್ಯ ನಿರ್ವಹಿಸಿದ ಶಿಕ್ಷಕರಿಗೆ ನಿಯಮಾನುಸಾರ ಗಳಿಕೆ ರಜೆ ಮಂಜೂರು ಮಾಡುವ ಪ್ರಕ್ರಿಯೆಯನ್ನು ಶೀಘ್ರವಾಗಿ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಬಿಇಒ ಸುರೇಂದ್ರ ಕಾಂಬಳೆ, ಶಿಕ್ಷಕರ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಲು ಹಾಗೂ ಅರ್ಹ ಶಿಕ್ಷಕರಿಗೆ ದೊರೆಯಬೇಕಾದ ಸೇವಾ ಸೌಲಭ್ಯಗಳನ್ನು ವಿಳಂಬವಿಲ್ಲದೆ ಮಂಜೂರು ಮಾಡಲು ಕ್ರಮ ವಹಿಸುತ್ತೇನೆ ಎಂದು ತಿಳಿಸಿದರು.

ಶಿಕ್ಷಣ ಸಂಯೋಜಕ ಎ.ಸಿ. ಹುಣಸಗಿ, ಎ.ಜಿ. ಚೌಧರಿ, ಜಿಪಿಟಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಹಕಾರಿ, ತಾಲೂಕು ಎಸ್‌ಸಿ/ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಆರ್.ಸಿ. ವಠಾರ, ಜಿಪಿಟಿ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಭುಲಿಂಗ ಕವಟಗಿ, ಖಜಾಂಚಿ ಸಿದ್ಧರಾಮ ದಾಬೆ, ಉಪಾಧ್ಯಕ್ಷ ಎನ್.ಸಿ. ಪುಟಾಣಿ, ಜಿಪಿಟಿ ಶಿಕ್ಷಕರ ಸೊಸೈಟಿ ಅಧ್ಯಕ್ಷ ಶಶಿಕುಮಾರ ವಡ್ಡರ, ಶಿಕ್ಷಕರಾದ ಸಂತೋಷ ಬಂಡೆ, ಪ್ರಭು ನಾದ, ಹನಮಂತರಾಯ ಪೂಜಾರಿ, ಎಚ್.ಸಿ. ಇಂಗಳಗಿ ಇತರರಿದ್ದರು.