ಸಿಂದಗಿ ನಗರದ ಅನುಗ್ರಹ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಸಮ್ಮೇಳನ-ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶಾಸಕ ಅಶೋಕ ಮನಗೂಳಿ ಉದ್ಘಾಟಿಸಿದರು. ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಮಾಜಿ ಶಾಸಕ ರಮೇಶ ಭೂಸನೂರ, ರಾಮಚಂದ್ರ ಮಹಾಸ್ವಾಮಿಗಳು, ಕಾಳಹಸ್ತೇಂದ್ರ ಮಹಾಸ್ವಾಮಿಗಳು ಮತ್ತಿತರರಿದ್ದರು.  
ವಿಜಯಪುರ

ಸಮುದಾಯ ಭವನಕ್ಕೆ 10 ಗುಂಟೆ ಜಮೀನು

ಶಾಸಕ ಎ.ಎಂ. ಮನಗೂಳಿ ಭರವಸೆ ವಿಶ್ವಕರ್ಮ ಸಮ್ಮೇಳನ

ಸಿಂದಗಿ: ನಗರದ ವಿಶ್ವಕರ್ಮ ಸಮಾಜದ ಬೇಡಿಕೆಯಂತೆ ಸಮುದಾಯ ಭವನಕ್ಕೆ 20 ಗುಂಟೆ ಜಮೀನು ಬದಲಾಗಿ, 10 ಗುಂಟೆ ಜಮೀನು ಮಂಜೂರು ಮಾಡಿಸುವುದಾಗಿ ಶಾಸಕ ಎ.ಎಂ. ಮನಗೂಳಿ ಭರವಸೆ ನೀಡಿದರು.

ಗುರುವಾರ ಇಲ್ಲಿನ ಅನುಗ್ರಹ ಕಲ್ಯಾಣ ಮಂಟಪದಲ್ಲಿ ತಾಲೂಕು ವಿಶ್ವಕರ್ಮ ಸಮ್ಮೇಳನ-ಪ್ರತಿಭಾ ಪುರಸ್ಕಾರ ಮತ್ತು ವಿಶ್ವಕರ್ಮ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಗರದಲ್ಲಿ ವಿಶ್ವಕರ್ಮ ಸಮಾಜ ಭವನ ನಿರ್ಮಾಣಕ್ಕಾಗಿ 20 ಗುಂಟೆ ಜಮೀನು ಬೇಡಿದ್ದೀರಿ. 20 ಗುಂಟೆ ಜಾಗದ ಬದಲಾಗಿ 10 ಗುಂಟೆ ಜಮೀನು ಮಂಜೂರು ಮಾಡಿಸಿ, ಅದರ ನಿರ್ಮಾಣಕ್ಕೆ ಅನುದಾನ ಒದಗಿಸುವುದಾಗಿ ಭರವಸೆ ನೀಡಿ, ಸಮಾಜದ ವಿಶ್ವಕರ್ಮ ಅಭಿವೃದ್ಧಿ ನಿಗಮದಡಿ ಸಹಾಯಧನ, ಸೌಲಭ್ಯಗಳಿಗಾಗಿ ಸಲ್ಲಿಸಿರುವ ಅರ್ಜಿಯ ನಕಲನ್ನು ನನಗೆ ನೀಡಿದರೆ, ಅದನ್ನು ಮಂಜೂರಿ ಮಾಡುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.

ಮಾಜಿ ಶಾಸಕ ರಮೇಶ ಭೂಸನೂರ, ಸಣ್ಣ ಸಮಾಜಗಳು ಎಲ್ಲ ಹಕ್ಕುಗಳಿಗಾಗಿ ಹೋರಾಟ ಮಾಡುವುದು ಅನಿವಾರ್ಯ ಸರ್ಕಾರ ಈ ಸಮಾಜದ ಜನರ ಆರ್ಥಿಕ ಬಲವರ್ಧನೆಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.

ಶಹಾಪುರದ ಏಕದಂಡಿಗಿ ಮಠದ ಕಾಳಹಸ್ತೇಂದ್ರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ವಿಶ್ವಕರ್ಮ ಸಮಾಜ ದುಡಿಯುವ ಧರ್ಮವನ್ನು ಪಾಲಿಸುತ್ತಿದೆ. ವಿಶ್ವಕರ್ಮ ಜಯಂತಿ ಘೋಷಣೆಗಾಗಿ ಸರ್ಕಾರ ಬೇಡಿಕೆ ಸಲ್ಲಿಸಿ, ಮೈಸೂರಿನಿಂದ ಬೆಂಗಳೂರಿನವರೆಗೆ ದಿಂಡುರುಕಿ ಮೂಲಕ ಆಗ್ರಹಿಸಲಾಗಿತ್ತು. ಅದರಂತೆ ಅಂದಿನ ಸರ್ಕಾರ ಜಯಂತಿ ಆಚರಣೆಗೆ ಅಣಿಯಾಯಿತು ಎಂದರು. ಸಿರಸಗಿ-ವಸ್ತಾರಿಯ ಬ್ರಹ್ಮವಿದ್ಯಾಶ್ರಮದ ಬಸವರಾಜ ಬಡಿಗೇರ(ಬೋರಗಿ) ಅವರು ಪ್ರಾಸ್ತಾವಿಕ ಮಾತನಾಡಿದರು.

ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.80ಕ್ಕೂ ಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗು ವಿಶ್ರಾಂತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕಲಬುರ್ಗಿ ಜಿಲ್ಲೆಯ ಮಂದೇವಾಲ ಗ್ರಾಮದ ಶಿಲ್ಪ ಕಲಾಕಾರ ಚಿದಾನಂದ ನರಸಪ್ಪಬಡಿಗೇರ ಅವರಿಗೆ ವಿಶ್ವಕರ್ಮ ರತ್ನ ಪ್ರಶಸ್ತಿನಿ ನೀಡಿ ಗೌರವಿಸಲಾಯಿತು. ನಾದಮಯ ಯೂಟ್ಯೂಬ್ ರಚಿಸಿರುವ ಶ್ರೀ ಮೌನೇಶ್ವರ, ಭಗವಾನ ಶ್ರೀ ವಿಶ್ವಕರ್ಮರ ಗೀತೆಗಳ ಧ್ವನಿಸುರುಳಿ ಬಿಡುಗಡೆಗೊಳಿಸಲಾಯಿತು.

ರಾಜ್ಯ ವಿಶ್ವ ಬ್ರಾಹ್ಮಣ ಮಠಾಧಿಪತಿಗಳ ಹಾಗೂ ಪೀಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರ ಮಹಾಸ್ವಾಮಿಗಳು, ಅಖಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಡಾ. ಪ್ರಭುಸಾರಾಂಗದೇವ ಶಿವಾಚಾರ್ಯರು, ಸೇರಿ ಇತರರು ಸಾನ್ನಿಧ್ಯ ವಹಿಸಿದ್ದರು.

ಅಧ್ಯಕ್ಷ ಪಿ. ಸುಜ್ಞಾನಮೂರ್ತಿ, ಶಿವಾನಂದ ಬಡಿಗೇರ, ಶ್ರೀಶೈಲಗೌಡ ಬಿರಾದಾರ, ದೇವೇಂದ್ರ ದೇಸಾಯಿ ಕಲ್ಲೂರ ಮತ್ತಿತರರಿದ್ದರು.