ವಿಜಯಪುರ: ಪ್ರಸ್ತುತ ದಿನಗಳಲ್ಲಿ ಜಗತ್ತು ಕೃತಕ ಬುದ್ಧಿಮತ್ತೆ(ಎಐ)ಯೊಂದಿಗೆ ವೇಗವಾಗಿ ಸಾಗುತ್ತಿದೆ. ಅದರಿಂದಾಗಿ ಶಿಕ್ಷಣ, ಸಮಾಜ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಮಹತ್ತರ ಬದಲಾವಣೆಗಳಾಗುತ್ತಿದ್ದು, ವಿದ್ಯಾರ್ಥಿಗಳು ಬದಲಾವಣೆಗೆ ಅನುಗುಣವಾಗಿ ತಮ್ಮ ಜ್ಞಾನ ಮತ್ತು ಶೈಕ್ಷಣಿಕ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳುವಂತೆ ಬಿಎಲ್‌ಡಿಇ (ಡೀಮ್ಡ್ ವಿವಿ) ಕುಲಸಚಿವ ಆರ್.ವಿ. ಕುಲಕರ್ಣಿ ಸಲಹೆ ನೀಡಿದರು.
ನಗರದ ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹ ಡಾ. ಪಿ.ಜಿ. ಹಳಕಟ್ಟಿ ಕಾಲೇಜ್ ಆಫ್ ಇಂಜಿನಿಯರಿAಗ್ ಅಂಡ್ ಟೆಕ್ನಾಲಜಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಸಕ್ತ ಶೈಕ್ಷಣಿಕ ಸಾಲಿಗೆ ಪ್ರವೇಶ ಪಡೆದ ನೂತನ ವಿದ್ಯಾರ್ಥಿಗಳ ಸ್ವಾಗತಿಸುವ ಫ್ರೆಶರ್ಸ್ ಡೇ-2026 ಸಮಾರಂಭದಲ್ಲಿ ಅವರು ಮಾತನಾಡಿದರು.
ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಕಾಲಕಾಲಕ್ಕೆ ಪರಿಶೀಲಿಸಬೇಕು. ಬೋಧಕ ಸಿಬ್ಬಂದಿ ಹಾಗೂ ಪ್ರಾಂಶುಪಾಲರೊAದಿಗೆ ನಿರಂತರ ಸಂಪರ್ಕವನ್ನು ಹೊಂದಿರಬೇಕು. ವಿದ್ಯಾರ್ಥಿಗಳನ್ನು ಅವರ ವೃತ್ತಿ ಜೀವನದ ಗುರಿಗಳತ್ತ ಮತ್ತು ಸರ್ವತೋಮುಖ ಅಭಿವೃದ್ಧಿಯತ್ತ ಮುನ್ನಡೆಸುವಲ್ಲಿ ಶಿಕ್ಷಕರು ಹಾಗೂ ಪೋಷಕರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ತಿಳಿಸಿದರು.
ಪ್ರಾಚಾರ್ಯ ಮಂಜುನಾಥ್ ಪಿ. ಮಾತನಾಡಿ, ವಿದ್ಯಾರ್ಥಿ ಜೀವನವು ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಗೆ ಅತ್ಯಂತ ಮಹತ್ವದ ಹಂತವಾಗಿದೆ. ವಿದ್ಯಾರ್ಥಿಗಳನ್ನು ಪೋಷಿಸಲು ಮತ್ತು ಅವರನ್ನು ಯಶಸ್ವಿ ಇಂಜಿನಿಯರ್‌ಗಳನ್ನಾಗಿ ರೂಪಿಸಲು ಸಂಸ್ಥೆಯು ಒದಗಿಸಿರುವ ಅತ್ಯುತ್ತಮ ಮೂಲಸೌಕರ್ಯ, ಸೌಲಭ್ಯಗಳು ಮತ್ತು ಸಮರ್ಪಿತ ಬೋಧಕ ವರ್ಗದ ಬಗ್ಗೆ ಅವರು ವಿವರಿಸಿದರು.
2025ನೇ ಬ್ಯಾಚ್‌ನ ಶೈಕ್ಷಣಿಕ ವರ್ಷದಲ್ಲಿ ಸಾಧನೆಗೈದ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಉಪ ಪ್ರಾಚಾರ್ಯರಾದ ಲೀನಾ ರಾಘಾ, ಪ್ರದೀಪ್ ಮಾಳಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಮೇಶ ಮಲ್ಲಾಡಿ ಸ್ವಾಗತಿಸಿದರು. ಅಶ್ವಿನಿ ಅಂಗಡಿ ಪರಿಚಯಿಸಿದರು. ಆಶಾ ಪಾಟೀಲ ನಿರೂಪಿಸಿದರು. ವಿಶ್ವನಾಥ ಹಿರೇಮಠ ವಂದಿಸಿದರು.