ಇಂಡಿ: ತಾಲೂಕಿನ ತಡವಲಗಾ ಗ್ರಾಮದ ಜೋಡಗುಡಿ ಹತ್ತಿರ ಇಂಡಿ ತಾಲೂಕು ಬರಗಾಲವೆಂದು ಘೋಷಿಸಬೇಕು, ತಾಲೂಕಿನ ಎಲ್ಲ ಕೆರೆಗಳಿಗೆ ನೀರು ಹರಿಸಬೇಕು ಮತ್ತು ಸರಿಯಾದ ವಿದ್ಯುತ್ ನೀಡಬೇಕು ಎಂದು ಭಾರತೀಯ ಕಿಸಾನ ಸಂಘದ ಕಾರ್ಯಕರ್ತರು ಆಗ್ರಹಿಸಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಬುಧವಾರ ಎರಡನೇ ದಿಕ್ಕೆ ಕಾಲಿಟ್ಟಿದೆ.
ರೈತರು ನಡೆಸುತ್ತಿರುವ ಧರಣಿ ಸ್ಥಳದಲ್ಲೇ ಅಧಿಕಾರಿಗಳು ರಾತ್ರಿ 10 ಗಂಟೆವರೆಗೂ ರೈತರ ಮನವೋಲಿಸಲು ಪ್ರಯತ್ನಿಸಿದರೂ ಲ ನೀಡಲಿಲ್ಲ. ಸ್ಥಳಕ್ಕೆ ಕೃಷ್ಣಾ ಮೇಲ್ದಂಡೆ ಯೋಜನೆ ಮುಖ್ಯ ಅಭಿಯಂತ ಬರಬೇಕು ಮತ್ತು ನೀರು ಬಿಡುವ ಕುರಿತು ಲಿಖಿತ ರೂಪದಲ್ಲಿ ಬರೆದು ಕೊಡಬೇಕೆಂದು ಧರಣಿ ಮುಂದುವರಿಸುವುದಾಗಿ ಹೇಳಿದರು.
ಮಂಗಳವಾರ ಪ್ರತಿಭಟನಾ ಸ್ಥಳಕ್ಕೆ ಕಂದಾಯ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಡಿವೈಎಸ್‌ಪಿ ಸದಾಶಿವ ಕಟ್ಟಿಮನಿ, ಯುಕೆಪಿ ಅಧಿಕ್ಷಕ ಅಭಿಯಂತ ಗೋವಿಂದ ರಾಠೋಡ ರೈತರ ಮನವೋಲಿಕೆಗೆ ಪ್ರಯತ್ನಿಸಿದರು. ಭಾರತೀಯ ಕಿಸಾನ ಸಂಘದ ಉತ್ತರ ಪ್ರಾಂತ ಪ್ರಮುಖ ಗುರುನಾಥ ಬಗಲಿ, ಮಲ್ಲನಗೌಡ ಪಾಟೀಲ, ಈರಣ್ಣ ಗೋಟ್ಯಾಳ, ನಾಗಪ್ಪ ಮಕಣಿ, ಚನ್ನಪ್ಪ ಮಿರಗಿ, ಶಿವಲಿಂಗಪ್ಪ ಕಟ್ಟಿ, ಬಾಬು ಡೊಂಬರ, ಪ್ರಕಾಶ ಇಂಡಿ, ಶರಣಪ್ಪ ತಾರಾಪುರ, ಅಂಬಣ್ಣ ಪಂತೋಜಿ, ಆನಂದ ಹೊಟಕರ, ಧರೆಪ್ಪ ತೇಲಿ, ಶೇಖರ ಇಂಡಿ, ರವಿ ಮೇತ್ರಿ, ಶಂಕ್ರೆಪ್ಪ ರೂಗಿ ಇತರರಿದ್ದರು.