ಎಸ್‌ಐಆರ್ ಹೋರಾಟ ಸಮಿತಿ ಹಾಗೂ ಮತ ಕಾವಲು ಸಮಿತಿಯ ವತಿಯಿಂದ ಎಸ್‌ಐಆರ್ ಪ್ರಕ್ರಿಯೆ ವಿರೋಧಿಸಿ ವಿಜಯಪುರ ನಗರದಲ್ಲಿ ತಿರಂಗಾ ಯಾತ್ರೆ ನಡೆಯಿತು. ಚನ್ನು ಕಟ್ಟಿಮನಿ, ಅಕ್ರಮ ಮಾಶಾಳ್ಕರ, ಮೀನಾಕ್ಷಿ ಸಿಂಗೆ ಮತ್ತಿತರರಿದ್ದಾರೆ. 
ವಿಜಯಪುರ

ಅರ್ಹ ಮತದಾರರ ಹಿತ ಕಾಪಾಡಲಿ

ವಿವಿಧ ಸಂಘಟನೆಗಳಿಂದ ತಿರಂಗಾ ಯಾತ್ರೆ

ವಿಜಯಪುರ: ಎಸ್‌ಐಆರ್ ಹೋರಾಟ ಸಮಿತಿ ಹಾಗೂ ಮತ ಕಾವಲು ಸಮಿತಿಯ ವತಿಯಿಂದ ಎಸ್‌ಐಆರ್ ಪ್ರಕ್ರಿಯೆ ವಿರೋಧಿಸಿ, ಅರ್ಹ ಮತದಾರರ ಹಕ್ಕುಗಳ ರಕ್ಷಣೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಸಂರಕ್ಷಣೆಯ ನಿಟ್ಟಿನಲ್ಲಿ ಶುಕ್ರವಾರ ತಿರಂಗಾ ಯಾತ್ರೆ ನಡೆಯಿತು.

ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭಗೊಂಡ ತಿರಂಗಾ ಯಾತ್ರೆಯು ಗಾಂಧಿ ಚೌಕ್ ಮಾರ್ಗವಾಗಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಸಾಗುವ ಮೂಲಕ ಯಾತ್ರೆಯು ಸಂಪನ್ನಗೊಂಡಿತು. ತಿರಂಗಾ ಯಾತ್ರೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ತಮ್ಮ ಬೆಂಬಲ ಸೂಚಿಸಿದರು.ಮತದಾರರ ಪಟ್ಟಿಗೆ ಸಂಬಂಧಿಸಿದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅರ್ಹ ಮತದಾರರ ಹೆಸರುಗಳು ಅನ್ಯಾಯವಾಗಿ ಕೈಬಿಡಬಾರದು. ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ತನ್ನ ಮತದಾನದ ಹಕ್ಕನ್ನು ಚಲಾಯಿಸುವ ಅವಕಾಶ ಖಚಿತವಾಗಬೇಕು. ಮತದಾನದ ಹಕ್ಕು ಪ್ರಜಾಪ್ರಭುತ್ವದ ಪ್ರಮುಖ ಆಧಾರ ಸ್ತಂಭವಾಗಿದ್ದು, ಹೀಗಾಗಿ, ಮತದಾರರ ಪಟ್ಟಿಯ ಪರಿಷ್ಕರಣೆ ಪಾರದರ್ಶಕವಾಗಿ, ನ್ಯಾಯಸಮ್ಮತವಾಗಿ ಹಾಗೂ ಅರ್ಹ ಮತದಾರರ ಹಿತವನ್ನು ಕಾಪಾಡುವ ರೀತಿಯಲ್ಲಿ ನಡೆಯಬೇಕು ಎಂದು ತಿರಂಗಾ ಯಾತ್ರೆಯ ಮೂಲಕ ಆಗ್ರಹಿಸಲಾಯಿತು.

ಮೀನಾಕ್ಷಿ ಸಿಂಗೆ, ಮುತ್ತು ಭೋವಿ, ಸಿಸ್ಟರ್ ಪ್ರಿಯಾಂಕಾ, ಸಿಸ್ಟರ್ ಅಸಂತಾ ಪಾಟೀಲ, ತೇಜಸ್ವಿನಿ ಹಳ್ಳದಕೇರಿ, ಅಬ್ದುಲ್ ಖದೀರ್, ಚನ್ನು ಕಟ್ಟಿಮನಿ, ಶ್ರೀನಾಥ ಪೂಜಾರಿ, ಸಿದ್ಧಲಿಂಗ ಬಾಗೇವಾಡಿ, ಸುರೇಶ ಬಿಜಾಪುರ, ಯಾಜ್ ಕಲಾದಗಿ, ಪ್ರಭುಗೌಡ ಪಾಟೀಲ, ಭೋಗೇಶ ಸೋಲಾಪುರ, ಅಕ್ರಮ ಮಾಶಾಳ್ಕರ, ಜಗದೇವ ಸೂರ್ಯವಂಶಿ, ದಸ್ತಗೀರ ಉಕ್ಕಲಿ, ಸಿದ್ದರೆಡ್ಡಿ, ವಿದ್ಯಾವತಿ ಅಂಕಲಗಿ, ಸೋಮು ರಣದೇವಿ, ನಿಲಾಂಬಿಕಾ ಬಿರಾದಾರ, ಶಂಕರ ಚಲುವಾದಿ, ಲಕ್ಷ್ಮಣ ಹಂದ್ರಾಳ, ಸುರೇಶ ಜೀಬಿ, ಸುರೇಖಾ ರಜಪೂತ, ನರೇಂದ್ರ ನಂದಿಕೋಲ, ಬಸಯ್ಯ ಸ್ಥಾವರಮಠ ಮತ್ತಿತರರಿದ್ದರು.