9ಕ್ಕೆ ಚಿತ್ರದುರ್ಗದಲ್ಲಿ ಯಡಿಯೂರಪ್ಪ ಅಭಿಮಾನೋತ್ಸವ 
ವಿಜಯಪುರ

9ಕ್ಕೆ ಚಿತ್ರದುರ್ಗದಲ್ಲಿ ಯಡಿಯೂರಪ್ಪ ಅಭಿಮಾನೋತ್ಸವ

ಮುದ್ದೇಬಿಹಾಳ: ಬಿ.ಎಸ್.ಯಡಿಯೂರಪ್ಪ ರಾಜಕೀಯ ಜೀವನದಲ್ಲಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೇ 9ರಂದು ಬೆಳಗ್ಗೆ 11ಕ್ಕೆ ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಬೃಹತ್ ಯಡಿಯೂರಪ್ಪ ಅಭಿಮಾನೋತ್ಸವ ಹಮ್ಮಿಕೊಳ್ಳಲಾಗಿದೆ.
ಈ ಸಮಾವೇಶಕ್ಕೆ ರಾಜ್ಯಾದ್ಯಂತ 15 ರಿಂದ 20 ಲಕ್ಷ ಅಭಿಮಾನಿಗಳು ಸೇರುವ ನಿರೀಕ್ಷೆಯಿದೆ ಎಂದು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ದಾಸೋಹ ನಿಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಪುರಸಭೆ ಅಧ್ಯಕ್ಷರಾಗಿ, ಶಾಸಕರಾಗಿ, ಮುಖ್ಯಮಂತ್ರಿಯಾಗಿ ಸುದೀರ್ಘ ಕಾಲ ಜನ ಸೇವೆ ಮಾಡಿದ್ದಾರೆ. ರೈತರಿಗೆ ಬೆಲೆ ಸಿಗದಿz್ದÁಗ ಏಕಾಂಗಿಯಾಗಿ ಹೋರಾಡಿ ಪಾದಯಾತ್ರೆ ಮೂಲಕ ವಿಧಾನಸೌಧಕ್ಕೆ ರೈತರ ಧ್ವನಿ ತಲುಪಿಸಿದ ಮಹಾನ್ ನಾಯಕರಾಗಿದ್ದಾರೆ. ಇಂತಹ ನಾಯಕನ ಗೌರವಾರ್ಥವಾಗಿ ಎಂದು ಮಠಾಧಿಶರು ಹಾಗೂ ಪಕ್ಷಾತೀತವಾಗಿ ಅಭಿಮಾನಿಗಳು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಯಡಿಯೂರಪ್ಪÀ ಮುಖ್ಯಮಂತ್ರಿ ಅವಽಯಲ್ಲಿ ಭಾಗ್ಯಲಕ್ಷ್ಮೀ ಬಾಂಡ್, ಶೂನ್ಯ ಬಡ್ಡಿ ದರದಲ್ಲಿ ಸಾಲ, ನೇಕಾರರಿಗೆ ವಿದ್ಯುತ್ ಸಬ್ಸಿಡಿ ಹಾಗೂ ವಿಜಯಪುರ ಜಿಲ್ಲೆಯ 124 ಕೆರೆ ತುಂಬಿಸುವ ಯೋಜನೆ ಮತ್ತು ಚಿಮ್ಮಲಗಿ ಏತನೀರಾವರಿ ಯೋಜನೆಗಳಿಗೆ ಸಾವಿರಾರು ಕೋಟಿ ಅನುದಾನ ನೀಡಲಾಗಿದೆ. ಮುದ್ದೇಬಿಹಾಳ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯ ಜನರು ಈ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ ಎಂದು ತಿಳಿಸಿದರು.
ಪ್ರಭು ಕಡಿ, ಎಂ.ಎಸ್. ಪಾಟೀಲ, ಮಲೆಕೇದ್ರಗೌಡ ಪಾಟೀಲ, ಕೆಂಚಪ್ಪ ಬಿರಾದಾರ, ಚನ್ನಬಸಪ್ಪ ಚೆನ್ನಿಗಾವಿ ಶೆಟ್ರು, ಮಲ್ಲಯ್ಯ ಬಿರಾದಾರ, ಗೀರಿಶಗೌಡ ಪಾಟೀಲ, ಮದನಸ್ವಾಮಿ ಹಿರೇಮಠ, ಮುತ್ತುಣ್ಣ ಹುಗಿ, ಪ್ರೇಮಸಿಂಗ್ ರಾಠೋಡ, ಸೋಮಗೌಡ ಬಿರಾದಾರ, ಮಹಾಂತಗೌಡ ಗಂಗನಗೌಡರ, ವಿರೇಶ ಪಾಟೀಲ, ಎಸ್.ಎಸ್. ಶಿವಣಗಿ, ಸಿದ್ದರಾಜ ಹೊಳಿ, ಸಂಗನಗೌಡ ಪಾಟೀಲ, ಸಂಗಮ್ಮ ದೇವರಳ್ಳಿ, ಗೌರಮ್ಮ ಹುನಗುಂದ, ರೇಖಾ ಕೊಂಡಗೂಳಿ ಮತ್ತಿತರರಿದ್ದರು.
ಮುದ್ದೇಬಿಹಾಳ ಪಟ್ಟಣದ ದಾಸೋಹ ನಿಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷÀ ಹಾಗೂ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿದರು. ಪ್ರಭು ಕಡಿ, ಎಂ.ಎಸ್. ಪಾಟೀಲ, ಮಲೆಕೇದ್ರಗೌಡ ಪಾಟೀಲ, ಕೆಂಚಪ್ಪ ಬಿರಾದಾರ, ಚನ್ನಬಸಪ್ಪ ಚೆನ್ನಿಗಾವಿ ಶೆಟ್ರು ಮತ್ತಿತರರಿದ್ದರು.