ಬಬಲೇಶ್ವರ ತಾಲೂಕಿನ ಬೋಳಚಿಕ್ಕಲಗಿ ಗ್ರಾಮದ ಆರ್‌ಎಂಎಸ್ ಪ್ರೌಢಶಾಲೆಯಲ್ಲಿ ನಿರ್ಮಿಸಲಾದ ಶಾಲೆಯ ನೂತನ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವ ಎಂ.ಬಿ. ಪಾಟೀಲರು ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್‌ಗಳನ್ನು ವಿತರಿಸಿದರು. ರಿಷಿ ಆನಂದ, ರಮೇಶ ರಾವ್ ಮತ್ತಿತರರಿದ್ದಾರೆ. 
ವಿಜಯಪುರ

ಹಳ್ಳಿಯ ಮಕ್ಕಳಿಗೂ ಜಾಗತಿಕ ಮಟ್ಟದ ಶಿಕ್ಷಣ

ವಿಜಯಪುರ:

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಿ ಅವರ ಕನಸುಗಳಿಗೆ ರೆಕ್ಕೆ ನೀಡುವುದು ಅತ್ಯಂತ ಶ್ರೇಷ್ಠ ಸೇವೆಯಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದರು.

ಬಬಲೇಶ್ವರ ತಾಲೂಕಿನ ಬೋಳಚಿಕ್ಕಲಗಿ ಗ್ರಾಮದ ಆರ್‌ಎಂಎಸ್ ಪ್ರೌಢಶಾಲೆಯಲ್ಲಿ ಟೊಯೊಟಾ ಕಿರ್ಲೋಸ್ಕರ್ ಕಂಪನಿಯ ಸಿಎಸ್‌ಆರ್ ಅನುದಾನದಲ್ಲಿ 2.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಶಾಲೆಯ ನೂತನ ಕೊಠಡಿಗಳು ಮತ್ತು ಕ್ರೀಡಾ ಸಲಕರಣೆಗಳನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗೆ ಹೊಸ ರೂಪ ನೀಡಿ ಮಕ್ಕಳ ಶೈಕ್ಷಣಿಕ ಹಾದಿ ಮತ್ತಷ್ಟು ಸುಗಮ ಪಡಿಸಲಾಗುತ್ತಿದೆ. ಹಳ್ಳಿಯ ಮಕ್ಕಳಿಗೂ ಜಾಗತಿಕ ಮಟ್ಟದ ಶಿಕ್ಷಣ ಒದಗಿಸಲಾಗುತ್ತಿದೆ. ನಮ್ಮ ಹಳ್ಳಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳಿಗಿಂತ ಯಾವುದೇ ರೀತಿಯಲ್ಲಿ ಕಡಿಮೆಯಿಲ್ಲದ ಅತ್ಯುತ್ತಮ, ಆಹ್ಲಾದಕರ ಕಲಿಕಾ ವಾತಾವರಣ ಸಿಗಬೇಕೆಂಬುದು ನನ್ನ ಬಲವಾದ ಆಸೆಯಾಗಿದೆ ಎಂದು ತಿಳಿಸಿದರು.
ಗ್ರಾಮೀಣ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್‌ಗಳು ಮತ್ತು ಸುಸಜ್ಜಿತ ಮೂಲಸೌಕರ್ಯಗಳು ದೊರೆತಾಗ ಈ ಪುಟ್ಟ ಕಣ್ಣುಗಳಲ್ಲಿ ಹೊಳೆಯುವ ಕನಸುಗಳಿಗೆ ಹೊಸ ರೆಕ್ಕೆಗಳು ಸಿಗಲಿವೆ. ಗುಣಮಟ್ಟದ ಶಿಕ್ಷಣ ಮತ್ತು ಆಧುನಿಕ ಸೌಲಭ್ಯಗಳೊಂದಿಗೆ ನಮ್ಮ ಗ್ರಾಮೀಣ ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ ದೊರೆತಲ್ಲಿ ಅವರು ಜಗತ್ತೇ ಮೆಚ್ಚುವಂತಹ ಸಾಧನೆಗಳನ್ನು ಮಾಡಲಿz್ದÁರೆ ಎಂಬ ದೃಢ ವಿಶ್ವಾಸವಿದೆ ಎಂದು ಎಂ.ಬಿ. ಪಾಟೀಲ ತಿಳಿಸಿದರು.
ಜಿ.ಪಂ. ಸಿಇಒ ರಿಷಿ ಆನಂದ ಮಾತನಾಡಿ, ಟೊಯೊಟಾ ಕಂಪನಿಯ ಉಪಾಧ್ಯಕ್ಷ ರಮೇಶ ರಾವ್ ಮಾತನಾಡಿದರು.
ಎಂ.ಬಿ. ಪಾಟೀಲ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗ್ ವಿತರಿಸಲಾಯಿತು.
ಮುಖಂಡರಾದ ಈರಗೊಂಡ ಬಿರಾದಾರ, ಮುತ್ತಪ್ಪ ಶಿವಣ್ಣವರ, ಬಸಪ್ಪ ಸಜ್ಜನ, ಸಯ್ಯದ್ ಅತ್ತಾರ, ಗುರಲಿಂಗಪ್ಪ ಅಂಗಡಿ, ರಾಚಪ್ಪ ಅಂಗಡಿ, ರಾಮಲಿಂಗ ಕೂಕಟನೂರ, ಮಲ್ಲಿಕಾರ್ಜುನ ಅಂಗಡಿ, ಲಾಲಸಾಬ ಮುಳವಾಡ, ಮುತ್ತಪ್ಪ ವಾಣಿ, ಇಮ್ತಿಯಾಜ ಜಮಾದಾರ, ಶಿವಾಜಿ ಮಾದರ, ಶ್ರೀಶೈಲ ಕೂಕಟನೂರ, ಸಂತೋಷ ಕುಲಕರ್ಣಿ, ವಿಜಯಪುರ ಗ್ರಾಮೀಣ ಕ್ಷೇತ್ರ ಶಿಕ್ಷಣಾಽಕಾರಿ ಬಸವರಾಜ ತಳವಾರ, ಪಿಡಿಒ ರಾಜಶೇಖರ ಗಾಯಕವಾಡ ಮತ್ತಿತರರಿದ್ದರು.