ಪೊಟೋ-ಮಥರ್ ಮಿಲ್ಕ್ ಬ್ಯಾಂಕ್ ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿರುವ ತಾಯಿ ಎದೆ ಹಾಲಿನ ಕೇಂದ್ರ. 
ವಿಜಯಪುರ

ನವಜಾತ ಶಿಶುಗಳ ಕಾಮಧೇನು `ಮಿಲ್ಕ್ ಬ್ಯಾಂಕ್'

* ಮಲ್ಲಮ್ಮ ಪೂಜಾರಿ, ವಿಜಯಪುರ
ತಾಯಿ ಹಾಲು ಅಮೃತಕ್ಕೆ ಸಮ. ನವಜಾತ ಶಿಶುಗಳ ಪಾಲಿಗೆ ಅತ್ಯಂತ ಪೌಷ್ಟಿಕ ಆಹಾರ. ಎಷ್ಟೋ ಮಕ್ಕಳು ವಿವಿಧ ಕಾರಣಗಳಿಂದ ತಾಯಿ ಹಾಲಿನಿಂದ ವಂಚಿತರಾಗುತ್ತಾರೆ. ಅದರಿಂದ ಅಪೌಷ್ಟಿಕತೆಗೂ ಒಳಗಾಗುತ್ತಾರೆ. ಇದನ್ನು ತಪ್ಪಿಸಲೆಂದೇ ಕಾಯಕಲ್ಪ ಪ್ರಶಸ್ತಿ ವಿಜೇತ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಆರಂಭಿಸಿರುವ ತಾಯಂದಿರ ಹಾಲಿನ ಬ್ಯಾಂಕ್ ಯಶಸ್ವಿಯಾಗಿ ನಡೆಯುತ್ತಿದ್ದು, ನವಜಾತ ಶಿಶುಗಳ ಪಾಲಿಗೆ `ಕಾಮಧೇನು'ವಾಗಿದೆ.
ಬೆಂಗಳೂರಿನ ಆಶ್ರಯ ಹಸ್ತಾ ಟ್ರಸ್ಟ್ ಸಹಯೋಗದಲ್ಲಿ, ದಾನಿಗಳಾದ ಕೆ. ದಿನೇಶ ಅವರ ಸಹಕಾರದೊಂದಿಗೆ ವಿಜಯಪುರ ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಗುವಿನ ಆರೈಕೆ ಕೇಂದ್ರದಲ್ಲಿ 1.40 ಕೋಟಿ ರೂ. ವೆಚ್ಚದಲ್ಲಿ 2025 ನವೆಂಬರ್ 8ರಂದು ತಾಯಂದಿರ ಹಾಲಿನ ಬ್ಯಾಂಕ್‌ನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರು ಉದ್ಘಾಟಿಸಿದರು. ಸದ್ಯ ಈ ಮಿಲ್ಕ್ ಬ್ಯಾಂಕ್‌ನ ನಿರ್ವಹಣೆಯನ್ನು ಸುಶೇನಾ ಫೌಂಡೇಶನ್ ನೋಡಿಕೊಳ್ಳುತ್ತಿದೆ.
* ಏನಿದು ಮಿಲ್ಕ್ ಬ್ಯಾಂಕ್?
ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಅನುಕೂಲಕ್ಕಾಗಿ 2017ರಲ್ಲಿ ಹೈದ್ರಾಬಾದ್‌ನ ನೀಲೋಫರ್ ಆಸ್ಪತ್ರೆಯಲ್ಲಿ ಸ್ಥಾಪನೆಗೊಂಡ ಮಿಲ್ಕ್ ಬ್ಯಾಂಕ್ ಪರಿಕಲ್ಪನೆ, ತದನಂತರ ದೇಶದ ವಿವಿಧ ಕಡೆಗಳಲ್ಲಿ ಆರಂಭವಾಯಿತು. ಉತ್ತರ ಕರ್ನಾಟಕದಲ್ಲಿಯೇ ಪ್ರಥಮವಾಗಿ ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ಮಿಲ್ಕ್ ಬ್ಯಾಂಕ್ ಸ್ಥಾಪಿಸಲಾಯಿತು. ಅದರಿಂದ ಕರ್ನಾಟಕ- ಮಹಾರಾಷ್ಟ್ರ
ನಗರದ ಅನೇಕ ಜಿಲ್ಲೆಗಳ ಬಾಣಂತಿಯರು ಮತ್ತು ಅವರ ಮಕ್ಕಳಿಗೆ ಬಹಳ ಅನುಕೂಲವಾಗಿದೆ.
* ದಾನಿ ತಾಯಿ ಹಾಲಿನ ಉಪಯೋಗ
ಅನಾರೋಗ್ಯ ಮತ್ತಿತರ ಕಾರಣಗಳಿಂದಾಗಿ ತಾಯಂದಿರು ಮಕ್ಕಳಿಗೆ ತಾಯಿ ಹಾಲು ನೀಡಲು ಸಾಧ್ಯವಾಗದಂಥ ಸ್ಥಿತಿಯಲ್ಲಿದ್ದಾಗ ಅವರ ಮಕ್ಕಳಿಗೆ ಎದೆ ಹಾಲು ಉಣಿಸಲು ಈ ಬ್ಯಾಂಕ್ ಉಪಯುಕ್ತವಾಗಿದೆ. ಇದರಿಂದಾಗಿ ನವಜಾತ ಶಿಶುಗಳ ಮರಣ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗಲು ಸಹಕಾರಿಯಾಗಿದೆ. ಪ್ರತಿಶತ ಶೇ. 20ರಷ್ಟು ಮಕ್ಕಳಿಗೆ ದಾನಿ ತಾಯಿಯ ಹಾಲಿನ ಅವಶ್ಯಕತೆ ಇದೆ ಎಂದು ಅಂಕಿ-ಅAಶಗಳು ಹೇಳುತ್ತವೆ.
* ತಾಯಂದಿರ ಮನವೊಲಿಕೆ
ತಾಯಿ ಹಾಲು ಸಂಗ್ರಹ ಮಾಡಲು ಆಸ್ಪತ್ರೆಯಲ್ಲಿ ಹೆರಿಗೆಯಾಗುವ 900 ಪ್ರಕರಣಗಳಲ್ಲಿ 150 ತಾಯಂದಿರಿಗೆ ಹಾಲು ದಾನ ಮಾಡಲು ಮನವೊಲಿಸಲಾಗುತ್ತಿದೆ. ತಾಯಿಯರೊಂದಿಗೆ ಮೊದಲು ಸಮಾಲೋಚಿಸಿ, ಹಾಲಿನ ಪ್ರಮಾಣ ಗುರುತಿಸಿ, ಎದೆಯ ತೊಟ್ಟುಗಳಲ್ಲಿ ಕಂಡುಬರುವ ಸೀಳು, ಚಪ್ಪಟೆ ಹಾಗೂ ತಲೆಕೆಳಗಾದ ತೊಟ್ಟುಗಳ ಸಮಸ್ಯೆಗಳನ್ನು ಪರಿಶೀಲಿಸಿ, ಹಲವು ನೈಸರ್ಗಿಕ ಮಸಾಜ್‌ಗಳನ್ನು ಹೇಳಿಕೊಡಲಾಗುತ್ತದೆ. ನಂತರ ಎಲೆಕ್ಟ್ರಾ
ನಿಕ್ ಬ್ರೆಸ್ಟ್ ಪಂಪ್‌ನ ಸಹಾಯದ ಮೂಲಕ ಹಾಲನ್ನು ಹೊರ ತೆಗೆಯಲಾಗುತ್ತದೆ. ದಾನಿಯ ತಾಯಿ ಹಾಗೂ ತಾಯಿಯ ವಯಸ್ಸಿನ ಎಲ್ಲ ಮಾಹಿತಿಯನ್ನು ರಿಜಿಸ್ಟರ್‌ನಲ್ಲಿ ಬರೆದು, ಶೇಖರಿಸಿದ ಬಾಟಲಿಯ ಮೇಲೆ ಒಂದು ವಿಶೇಷ ಡೋನರ್ ನೀಡಿ, ತೆಗೆದ ಹಾಲನ್ನು ಎಂಎಲ್‌ಗಳಲ್ಲಿ ಬರೆಯಲಾಗುತ್ತದೆ.
* 6 ರಿಂದ 1 ವರ್ಷದವರೆಗೆ ಸಂಗ್ರಹ
ದಾನ ಮಾಡಿದ ತಾಯಿ ಹಾಲಿನಲ್ಲಿರುವ ಪ್ರಮುಖ ಪೋಷಕಾಂಶಗಳು ಮತ್ತು ಪ್ರತಿಕಾಯಗಳನ್ನು ಸಂರಕ್ಷಿಸಲು ಪಾಶ್ಚೀಕರಣಕ್ಕೆ ಒಳಪಡಿಸಲಾಗುತ್ತಿದೆ. 6 ರಿಂದ 1 ವರ್ಷದವರೆಗೆ ಈ ಹಾಲು ಸಂಗ್ರಹಿಸಿಡಲಾಗುತ್ತಿದೆ. ಆರಂಭದಿAದ ಇದುವರೆಗೆ ತಾಯಿ ಹಾಲಿನ ಕೇಂದ್ರಕ್ಕೆ 1215 ತಾಯಂದಿರು ಭೇಟಿ ನೀಡಿದ್ದು, 1 ಲಕ್ಷ ಲೀಟರ್‌ಗೂ ಅಽಕ ತಾಯಿ ಹಾಲನ್ನು ಕೇಂದ್ರದಲ್ಲಿ ಸಂಗ್ರಹಿಸಲಾಗಿದೆ. ಇದರಿಂದ ಸಾವಿರಾರು ನವಜಾತ ಶಿಶುಗಳಿಗೆ ತಾಯಿ ಹಾಲಿನ ಲಾಭ ದೊರಕಿದೆ.
* ತಾಯಂದಿರ ಕಣ್ಣಲ್ಲಿ ಆನಂದಭಾಷ್ಪ
ತಾಯಿ ಹಾಲಿನ ಪ್ರಮಾಣ ಕಡಿಮೆ ಇರುವ ತಾಯಂದಿರನ್ನು ಗುರುತಿಸಿ ಅವರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿ ಅವರ ಮಕ್ಕಳಿಗೆ ಹಾಲು ಪೂರೈಸಲಾಗುತ್ತಿದ್ದು, ಇದರಿಂದ ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡು ಹೆತ್ತ ಕರುಳಿನಲ್ಲಿ ಸಂತೃಪ್ತಿ, ಸಂತೋಷ ಕಾಣಿಸಿಕೊಂಡು ಕಣ್ಣಾಲೆಯಲ್ಲಿ ಆನಂದ ಭಾಷ್ಪ ಜಿನುಗುವಂತಾಗಿದೆ. ತಾಯಿ ಹಾಲಿನಿಂದ ಮಗುವಿಗೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತಿದ್ದು, ಪಚನಕ್ರಿಯೆಯೂ ವೃದ್ಧಿಯಾಗುತ್ತಿದೆ ಎಂದು ತಾಯಂದಿರು ಸಂತಸ ಹಂಚಿಕೊಳ್ಳುತ್ತಿದ್ದಾರೆ.
* ಕೋಟ್-1
ತಾಯಿ ಹಾಲು ಬ್ಯಾಂಕ್ ಯಶಸ್ವಿಯಾಗಿ ಮುನ್ನಡೆದಿದೆ. ಇದೊಂದು ಮಾದರಿ ಬ್ಯಾಂಕ್. ತಾಯಿಗೆ ಹಾಲು ಹೆಚ್ಚಿನ ಪ್ರಮಾಣದಲ್ಲಿದ್ದು, ಮಗು ಐಸಿಯುನಲ್ಲಿದ್ದಾಗ ತಾಯಿಯ ಹಾಲು ಎದೆಯಲ್ಲಿ ಕಟ್ಟಿದ್ದರೆ ಅವರು ಹಾಲನ್ನು ದಾನವಾಗಿ ನೀಡುತ್ತಾರೆ. ಅದನ್ನು ಸಂಗ್ರಹಿಸಿ ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿರುವ ಮಕ್ಕಳಿಗೆ ನೀಡಲಾಗುತ್ತಿದೆ. ತರಬೇತಿ ಪಡೆದ ಆಸ್ಪತ್ರೆ ಸಿಬ್ಬಂದಿ ಪ್ರತಿ ಕೊಠಡಿಯಲ್ಲಿನ ತಾಯಿಯು ಮಗುವಿಗೆ ಹಾಲುಣಿಸುವ ಪ್ರಕ್ರಿಯೆ ಸರಿಯಾಗಿದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಹೊರಗಿನಿಂದ ಬರುವ ರೋಗಿಗಳಿಗೂ ತಾಯಿ ಹಾಲಿನ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
| ಡಾ. ಗಾಯತ್ರಿ ಮಿಸಾಳ, ಸುಶೇನಾ ಹೆಲ್ತ್ -ಫೌಂಡೇಶನ್ ವೈದ್ಯಾಧಿಕಾರಿ
* ಕೋಟ್ -2
ತಾಯಿ ಹಾಲಿನ ಕೇಂದ್ರವನ್ನು ಸುಸೇನಾ -ಫೌಂಡೇಶನ್ ವತಿಯಿಂದ `ಆಶ್ರಯ ಹಸ್ತ' ಎಂಬ ಹೆಸರಿನಲ್ಲಿ ದಾನ ಮಾಡಿದ್ದಾರೆ. ಅವರೇ ಸಂಪೂರ್ಣವಾಗಿ ಕೇಂದ್ರವನ್ನು ಅಭಿವೃದ್ಧಿಪಡಿಸಿದ್ದಾರೆ. 1.65 ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಹಾಲಿನ ಪಾಶ್ಚೀಕರಣ, ಪರಿಶೀಲನೆಯನ್ನು ಕೇಂದ್ರದಲ್ಲಿಯೇ ಮಾಡಿ, ತಾಯಿ ಹಾಲಿನ ಅಗತ್ಯವಿರುವ ಮಕ್ಕಳಿಗೆ ನೀಡಲಾಗುತ್ತದೆ. ಕೇಂದ್ರಕ್ಕೆ ಒಬ್ಬ ವೈದ್ಯಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಬೇರೆ ಖಾಸಗಿ ಆಸ್ಪತ್ರೆಗಳಿಗೂ ಉಚಿತವಾಗಿ ವಿತರಿಸುವ ವ್ಯವಸ್ಥೆ ಮಾಡಲಾಗಿದೆ.
| ಡಾ. ಶಿವಾನಂದ ಮಾಸ್ತಿಹೊಳಿ, ಜಿಲ್ಲಾ ಶಸ್ತ್ರ ಚಿಕಿತ್ಸಕರು, ವಿಜಯಪುರ