ವಿಜಯಪುರ : ಆಡಳಿತಾತ್ಮಕ ಮತ್ತು ಯೋಜನೆ ಸಮರ್ಪಕ ಅನುಷ್ಠಾನದ ಹಿತದೃಷ್ಟಿಯಿಂದ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯ ಒಂದು ಹೊಸ ವಿಭಾಗ ಮತ್ತು ಮೂರು ಉಪವಿಭಾಗ ಕಚೇರಿಗಳನ್ನು ಜಿ¯್ಲೆಯ ತಿಕೋಟಾ ತಾಲೂಕಿನಲ್ಲಿ ಪ್ರಾರಂಭಿಸಲು
ಆದೇಶ ಹೊರಡಿಸಲಾಗಿದೆ ಎಂದು ಜಿ¯್ಲÁ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ತಿಳಿಸಿz್ದÁರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಚಿವರು, ತಿಕೋಟಾದಲ್ಲಿ ಕಚೇರಿಗಳನ್ನು ಪ್ರಾರಂಭಿಸುವAತೆ ಜಲಸಂಪನ್ಮೂಲ ಇಲಾಖೆಗೆ ಈ ಮೊದಲು ಪತ್ರ ಬರೆದಿz್ದÉ. ಸದ್ಯ ನಮ್ಮ ಮನವಿಗೆ ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಸ್ಪಂದಿz್ದÁರೆ.
ನಮ್ಮ ಬೇಡಿಕೆಯಂತೆ ತಿಕೋಟಾ ಪಟ್ಟಣದಲ್ಲಿ ಹೊಸದಾಗಿ ಒಂದು ವಿಭಾಗ ಕಚೇರಿ ಮತ್ತು ಅದರ ಅಡಿ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಉಪವಿಭಾಗ-1 ಮತ್ತು ಉಪವಿಭಾಗ-2 ಹಾಗೂ ಉಪವಿಭಾಗ-3 ತಿಕೋಟಾದಲ್ಲಿ ಹೊಸ ಕಚೇರಿಗಳನ್ನು ಪ್ರಾರಂಭಿಸಲು ಜಲಸಂಪನ್ಮೂಲ ಇಲಾಖೆ ಆದೇಶ ಹೊರಡಿಸಿದೆ.
ಅಲ್ಲದೆ, ಹೊಸ ಕಚೇರಿಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಕಟ್ಟಡ ಮತ್ತಿತರ ಮೂಲ ಸೌಕರ್ಯ ನಿರ್ಮಾಣಕ್ಕಾಗಿ ಒಟ್ಟು 2.50 ಕೋಟಿ ರೂ. ಅನುದಾನ ಮತ್ತು ಕಚೇರಿ ಅಗತ್ಯಕ್ಕನುಗುಣವಾಗಿ ಸಿಬ್ಬಂದಿ ಒದಗಿಸಿ ಆದೇಶ ಹೊರಡಿಸಲಾಗಿದೆ ಎಂದು ಸಚಿವ ಎಂ. ಬಿ. ಪಾಟೀಲರು ಮಾಹಿತಿ ನೀಡಿz್ದÁರೆ.