ತಾಳಿಕೋಟೆಯ ಬ್ಯಾಕೋಡದ ಲಕ್ಕಮ್ಮದೇವಿ ಕಲಾ ಪೋಷಕ ಸಂಘದ ೯ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಕರ್ನಾಟಕ ೫ನೇ ಜಾನಪದ ನೃತ್ಯ ಕಲಾಮೇಳದಲ್ಲಿ ಭರತ ನಾಟ್ಯ ಶಿಕ್ಷಕ ವಿನೋದ ಹಾಗೂ ವಿದ್ಯಾರ್ಥಿನಿ ಸೃಷ್ಟಿಗೆ ಅವಾರ್ಡ್ ನೀಡಿ ಸನ್ಮಾನಿಸಿ, ಗೌರವಿಸಲಾಯಿತು. 
ವಿಜಯಪುರ

ವಿನೋದಕುಮಾರ ಚಿಕ್ಕಮಠ, ಸೃಷ್ಟಿ ಹಿರೇಮಠಗೆ ಪ್ರಶಸ್ತಿ

ವಿನೋದಕುಮಾರ ಚಿಕ್ಕಮಠ, ಸೃಷ್ಟಿ ಹಿರೇಮಠಗೆ ಪ್ರಶಸ್ತಿ
ತಾಳಿಕೋಟೆ : ಬ್ಯಾಕೋಡದ ಲಕ್ಕಮ್ಮದೇವಿ ಕಲಾ ಪೋಷಕ ಸಂಘದ ೯ನೇ ವಾರ್ಷಿಕೋತ್ಸವ ಅಂಗವಾಗಿ ಅಖಿಲ ಕರ್ನಾಟಕ ೫ನೇ ಜಾನಪದ ನೃತ್ಯ ಕಲಾಮೇಳದಲ್ಲಿ ತಾಳಿಕೋಟೆಯ ವಿರಕ್ತೇಶ್ವರ ಭರತನಾಟ್ಯ ತರಬೇತಿ ಸಂಸ್ಥೆ ಶಿಕ್ಷಕ ಮತ್ತು ವಿದ್ಯಾರ್ಥಿನಿಗೆ ನ್ಯಾಷನಲ್ ಅಚೀವ್‌ಮೆಂಟ್ ಗ್ಲೋಬಲ್ ಅವಾರ್ಡ್ ಲಭಿಸಿದೆ.
ಡಾ. ಸಿದ್ರಾಮ ಎಮ್. ನಿಲಜಗಿ ನೇತೃತ್ವದಲ್ಲಿ ಧಾರವಾಡದ ರಂಗಾಯಣ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾಳಿಕೋಟೆಯ ವಿರಕ್ತೇಶ್ವರ ಭರತನಾಟ್ಯ ತರಬೇತಿ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ನೃತ್ಯ ಶಿಕ್ಷಕ ವಿನೋದಕುಮಾರ ಚಿಕ್ಕಮಠ, ಅದೇ ಶಾಲೆ ವಿದ್ಯಾರ್ಥಿನಿ ಸೃಷ್ಟಿ ಕಾಶಿನಾಥ ಹಿರೇಮಠ ಅವರಿಗೆ ನ್ಯಾಷನಲ್ ಅಚೀವ್‌ಮೆಂಟ್ ಗ್ಲೋಬಲ್ ಅವಾರ್ಡ್ ನೀಡಿ ಗೌರವಿಸಲಾಗಿದೆ.