ವಿಜಯಪುರ ನಗರದ ವಿಜಯವಾಣಿ ಕಚೇರಿಯಲ್ಲಿ ಆಯೋಜಿದ್ದ ವಿಜಯವಾಣಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ನಗರದ ಖ್ಯಾತ ಉದ್ಯಮಿಗಳು. 
ವಿಜಯಪುರ

ವಿಜಯವಾಣಿ ವಿಜಯೋತ್ಸವ, ಅದೃಷ್ಟಶಾಲಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ, ಖ್ಯಾತ ಉದ್ಯಮಿಗಳು ಹೇಳಿದ್ದೇನು ಗೊತ್ತಾ?

ಪ್ರಮುಖ ಮುಖ್ಯಾಂಶಗಳು

  • ವಿಜಯವಾಣಿ ವಿಜಯೋತ್ಸವ
  • ಅದೃಷ್ಟಶಾಲಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ
  • ಅದೃಷ್ಠ ನಿಮ್ಮದು ಕೊಡುಗೆ ನಮ್ಮದು
ವಿಜಯಪುರ: ಕನ್ನಡದ ಪ್ರತಿಷ್ಠಿತ ನಂ. 1 ದಿನಪತ್ರಿಕೆಯಾದ ವಿಜಯವಾಣಿಯಿಂದ ದಸರಾ ಹಾಗೂ ದೀಪಾವಳಿ ಪ್ರಯುಕ್ತ ‘ಅದೃಷ್ಠ ನಿಮ್ಮದು ಕೊಡುಗೆ ನಮ್ಮದು’ ಘೋಷವಾಕ್ಯದಡಿ ಪ್ರತಿ ವರ್ಷ ಹಮ್ಮಿಕೊಂಡು ಬರಲಾಗುತ್ತಿರುವ ವಿಜಯೋತ್ಸವ ಕಾರ್ಯಕ್ರಮದ ಲಕ್ಕಿ ಡೀಪ್ ಕಾರ್ಯಕ್ರಮ ಬುಧವಾರ ವಿದ್ಯುಕ್ತವಾಗಿ ನೆರವೇರಿತು.
ನಗರದ ಮನಗೂಳಿ ರಸ್ತೆಯಲ್ಲಿರುವ ವಿಆರ್‌ಎಲ್ ಮತ್ತು ವಿಜಯವಾಣಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಲಕ್ಕಿ ಡೀಪ್ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಉದ್ದಿಮೆದಾರರು ಹಾಗೂ ನೂರಾರು ಗ್ರಾಹಕರು ಪಾಲ್ಗೊಂಡಿದ್ದರು.
ಚೀಟಿ ಎತ್ತುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶರದ್ ರೂಡಗಿ ಅವರು, ವಿಜಯವಾಣಿ ಎಂದರೆ ವಿಶ್ವಾಸಾರ್ಹತೆ. ಜನಪ್ರಿಯತೆ. ಸಮಾಜಮುಖಿ. ಸಮಾಜ ತಿದ್ಧುವ ಸಾಧನ. ಪ್ರೇರಣೆ ಮತ್ತು ಉತ್ಸಾಹದಾಯಕ. ಈ ಪತ್ರಿಕೆಗೆ ವ್ಯಾಪಕ ಪ್ರತಿಕ್ರಿಯೆ ಇದೆ. ಗ್ರಾಹಕರಿಂದ ಸ್ಪಂದನೆ ಇದೆ ಎಂದರು.
ವಿಜಯರತ್ನ ಪ್ರಶಸ್ತಿ ವಿಜೇತ ಖ್ಯಾತ ಉದ್ಯಮಿ ರಾಜು ಬಿಜ್ಜರಗಿ ಮಾತನಾಡಿ, ಉದ್ಯಮಿಗಳ ಪಾಲಿಗೆ ದಸರಾ ಮತ್ತು ದೀಪಾವಳಿ ಎಂದರೆ ಸುಗ್ಗಿಯ ಕಾಲ. ಈ ಸುಗ್ಗಿಯ ಕಾಲದಲ್ಲಿ ವಿಜಯವಾಣಿ ಉದ್ಯಮಿಗಳು, ವ್ಯಾಪಾರಸ್ಥು ಮತ್ತು ಗ್ರಾಹಕರ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತದೆ. ಸಂಪರ್ಕ ಸೇತುವೆಯಂತೆ ವಿಜಯವಾಣಿ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ವಿಜಯವಾಣಿಯ ಎಲ್ಲ ಕಾರ್ಯಕ್ರಮಗಳಲ್ಲಿ ನಮ್ಮ ಪಾಲುದಾರಿಕೆ ಇದೆ ಎಂದರು.
ವಿಜಯಪುರ ಪ್ರತಿ ಕನ್ನಡಿಗರ ಮನೆಯ ಪತ್ರಿಕೆ. ಪ್ರತಿ ದಿನ ಹೊಸ ಹೊಸ ವಿಷಯ ಮತ್ತು ವಿಚಾರ ಹೊತ್ತು ತರುತ್ತಿದ್ದು, ಅದರಲ್ಲೂ ದೇಶ-ವಿದೇಶಗಳ ಸುದ್ದಿ ಅತ್ಯಂತ ಅರ್ಥಪೂರ್ಣವಾಗಿರುತ್ತವೆ. ವಿಜಯವಾಣಿ ಪ್ರಚಾರದಿಂದಾಗಿ ನಮ್ಮ ಉದ್ಯಮದಲ್ಲಿ ಸಾಕಷ್ಟು ಪ್ರಗತಿ ಕಂಡಿದೆ. ಗ್ರಾಹಕರ ಖುಷಿ ಕೂಡ ಇಮ್ಮಡಿಸಿದೆ ಎಂದರು.
ಖ್ಯಾತ ಶಿಕ್ಷಣ ತಜ್ಞ ರಾಜೇಶ ದರಬಾರ್ ಅವರು ಮಾತನಾಡಿ, ನಮ್ಮ ಸಂಸ್ಥೆ ಸದಾ ವಿಜಯವಾಣಿ ಜೊತೆಯಾಗಿರುವುದಾಗಿ ತಿಳಿಸಿದರು.
ಹೊಟೇಲ್ ಉದ್ಯಮಿ ಪ್ರಶಾಂತ ಶೆಟ್ಟಿ ಮಾತನಾಡಿ, ಎಲೆಮರೆಕಾಯಿಯಂತಿದ್ದ ನಮ್ಮನ್ನು ಮುಂಚೂಣಿಗೆ ತಂದು ಪರಚಯಿಸಿದ್ದು ವಿಜಯವಾಣಿ ಪತ್ರಿಕೆ. ನಮ್ಮಂಥ ಉದ್ಯಮಿಗಳು ಬೆಳೆಯಲು ವಿಜಯವಾಣಿ ವೇದಿಕೆ ಒದಗಿಸುತ್ತದೆ. ಆರಂಭದಲ್ಲಿ ಸ್ವಂತ ಲಾಭಕ್ಕಾಗಿ ಉದ್ಯಮ ಅಥವಾ ವ್ಯಾಪಾರ ಆರಂಭಿಸುತ್ತೇವೆ. ಯಾವಾಗ ಮುಖ್ಯವಾಹಿನಿಗೆ ಬರಲಾಗುವುದೋ ಆಗ ಸಮಾಜಮುಖಿಯಾಗುತ್ತೇವೆ. ಹೀಗಾಗಿ ಎಲೆ ಮರೆಯ ಕಾಯಿಯಂತಿದ್ದ ನಮ್ಮನ್ನು ಸಮಾಜಮುಖಿಯಾಗಿಸಿದ್ದು ವಿಜಯವಾಣಿ. ಇಂದು ಸಮಾಜ ನಮ್ಮನ್ನು ಗುರುತಿಸುತ್ತಿದೆ. ಹೀಗಾಗಿ ಸಾಮಾಜಿಕ ಕಾಳಜಿ ಕೂಡ ಬೆಳೆಯುತ್ತಿದೆ. ಸಮಾಜಮುಖಿ ಕೆಲಸ ಮಾಡಲು ವಿಜಯವಾಣಿ ಪ್ರೇರಣೆಯಾಯಿತು. ಹುರಿದುಂಬಿಸಿತು ಎಂದರು.
ವಿಜಯವಾಣಿ ಸ್ಥಾನಿಕ ಸಂಪಾದಕ ಕೆ.ಎನ್. ರಮೇಶ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿಜಯವಾಣಿಯಿಂದ ಕಳೆದ 11 ವರ್ಷಗಳಿಂದ ವಿಜಯೋತ್ಸವ ಆಯೋಜಿಸಿಕೊಂಡು ಬರಲಾಗಿದ್ದು, ಇದೀಗ 12 ನೇ ವರ್ಷ ಯಶಸ್ವಿಯಾಗಿ ನೆರವೇರಿದೆ. ಈ ಯಶಸ್ವಿಗೆ ವ್ಯಾಪಾರಿಗಳು, ಉದ್ಯಮಿಗಳು ಹಾಗೂ ಗ್ರಾಹಕರೇ ಕಾರಣ ಎಂದರು.
ರಾಜ್ಯಾದ್ಯಂತ 400ಕ್ಕೂ ಅಧಿಕ ಪಾಲುದಾರರಿದ್ದು, ವಿಜಯಪುರದಿಂದ 28 ಪಾಲುದಾರರಿದ್ದಾರೆ. 2500ಕ್ಕೂ ಅಧಿಕ ಬಹುಮಾನ ನೀಡಲಾಗುತ್ತಿದೆ. ಸದ್ಯ 165 ಬಹುಮಾನಗಳಿಗೆ ಲಕ್ಕಿಡೀಪ್ ಮಾಡಲಾಗುತ್ತಿದೆ ಎಂದರು.
ಗ್ರಾಹಕರು ಹಾಗೂ ಉದ್ಯಮಿಗಳ ಸಮ್ಮುಖದಲ್ಲಿಯೇ ಚೀಟಿ ಎತ್ತುವ ಮೂಲಕ ಪಾರದರ್ಶಕವಾಗಿ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಯಿತು.
ಹಿರಿಯ ವರ್ತಕರಾದ ವಾಸುದೇವ ಸೋನಾರ ಮತ್ತಿತರರಿದ್ದರು.
ಅಂತಾರಾಷ್ಟ್ರೀಯ ವಿಜಯರತ್ನ ಪ್ರಶಸ್ತಿ ವಿಜೇತ ಖ್ಯಾತ ಉದ್ಯಮಿ ರಾಜು ಬಿಜ್ಜರಗಿ, ಹೊಟೇಲ್ ಉದ್ಯಮಿ ಪ್ರಶಾಂತ ಶೆಟ್ಟಿ ಹಾಗೂ ವಾಸ್ತು ಶಾಸ್ತ್ರಜ್ಞ ಗಿರಿಧರರಾಜು ಕೆ.ಕೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.