ವಿಜಯಪುರದ ವಿಷ್ಣು ಸಹಸ್ರನಾಮ ಭವನದ ಸಾಲಗ್ರಾಮ ಶಿಲಾ ವೆಂಕಟೇಶ್ವರನ ಸನ್ನಿಽಯಲ್ಲಿ ಎಂ.ವಿ. ದೇಶಪಾಂಡೆ ದಂಪತಿಗಳಿAದ ಪವಮಾನ ಹೋಮದ ಪುಣ್ಯಾಹವಾಚನದೊಂದಿಗೆ ಅಽಕ ಮಾಸದ ಕಾರ್ಯಕ್ರಮಗಳು ಆರಂಭಗೊAಡವು.
ವಿಜಯಪುರ : ನಗರ ಹೊರ ವಲಯದ ತೊರವಿ ರಸ್ತೆಯ ವಿಷ್ಣು ಸಹಸ್ರನಾಮ ಭವನದ ಸಾಲಿಗ್ರಾಮ ಶಿಲಾ ವೆಂಕಟೇಶ್ವರ ಸನ್ನಿಧಾನದಲ್ಲಿ ಅಽಕ ಮಾಸದ ಪ್ರಯುಕ್ತ ಭಾನುವಾರ ವಿವಿಧ ಧಾರ್ಮಿಕ ಚಟುವಟಿಕೆಗಳು ಪ್ರಾರಂಭಗೊAಡವು.
ವಿಶ್ವ ಕಲ್ಯಾಣಕ್ಕಾಗಿ ನಿತ್ಯ ಹೋಮ ಹವನ, ಗೌರಿ ಪ್ರತಿಷ್ಠಾಪನೆ ಮತ್ತು ಸುಮಂಗಲಿಯರಿAದ ೩೩ ಹಾಡು ಸೇರಿ ಇತರ ಧಾರ್ಮಿಕ ಕಾರ್ಯಕ್ರಮಗಳು ಮುಂಬರುವ ೧೫ ದಿನಗಳ ಕಾಲ ಶ್ರದ್ಧಾ ಭಕ್ತಿಯಿಂದ ಜರುಗಲಿವೆ. ಮೊದಲ ದಿನ ಎಂ.ವಿ. ದೇಶಪಾಂಡೆ ದಂಪತಿಯಿAದ ಸಂಕಲ್ಪದಲ್ಲಿ ಪವಮಾನ ಹೋಮ, ನರಸಿಂಹ ಮತ್ತು ಶ್ರೀಸೂಕ್ತ ಹೋಮ ಪ್ರಾರಂಭಗೊAಡವು. ಧರ್ಮದರ್ಶಿ ಪಂ. ವೇದನಿಽ ಆಚಾರ್ಯರು ಮತ್ತು ವಿದ್ಯಾರ್ಥಿಗಳು ಹೋಮದ ನೇತೃತ್ವ ವಹಿಸಿದ್ದರು.
ಸಾಕ್ಷತಾ ತಿರುಪತಿಯಂತೆ ಕಂಗೊಳಿಸುವ ವೆಂಕಟೇಶ ದೇವರ ದರ್ಶನ ಪಡೆದು ಅಽಕ ಮಾಸದ ಪ್ರಯುಕ್ತ ನಡೆಯುವ ಕಾರ್ಯಕ್ರಮದಲ್ಲಿ ಸದ್ಭಕ್ತರು ಪಾಲ್ಗೊಳ್ಳುವಂತೆ ದೇವಸ್ಥಾನ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.