ಅವಽ ಪೂರ್ಣಗೊಂಡ ಜಿ.ಪಂ., ತಾ.ಪಂ. ಹಾಗೂ ಗ್ರಾ.ಪಂ. ಚುನಾವಣೆಗಳನ್ನು ಶೀಘ್ರವಾಗಿ ನಡೆಸುವಂತೆ ಒತ್ತಾಯಿಸಿ ಗ್ರಾಮ ಸ್ವರಾಜ ಕರ್ನಾಟಕ ವೇದಿಕೆ ವತಿಯಿಂದ ವಿಜಯಪುರದಲ್ಲಿ ಅಪರ ಜಿಲ್ಲಾಽಕಾರಿ ಡಾ. ಔದ್ರಾಮ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರದೀಪ ಪಾಟೀಲ ಇದ್ದಾರೆ. 
ವಿಜಯಪುರ

ಚುನಾವಣೆಗಳನ್ನು ಶೀಘ್ರವಾಗಿ ನಡೆಸುವಂತೆ ಒತ್ತಾಯ

ವಿಜಯಪುರ: ಜಿ.ಪಂ., ತಾ.ಪಂ. ಹಾಗೂ ಗ್ರಾ.ಪಂ. ಚುನಾವಣೆಗಳನ್ನು ಶೀಘ್ರವಾಗಿ ನಡೆಸುವುದು ಮತ್ತು ಗ್ರಾಮ ಸಭೆಗಳನ್ನು ಕಡ್ಡಾಯವಾಗಿ ನಡೆಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗ್ರಾಮ ಸ್ವರಾಜ ಕರ್ನಾಟಕ ವೇದಿಕೆ ಉಪಾಧ್ಯಕ್ಷ ಪ್ರದೀಪ
ಪಾಟೀಲ ಗುರುವಾರ ಅಪರ ಜಿಲ್ಲಾಽಕಾರಿ ಡಾ. ಔದ್ರಾಮ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ವೇದಿಕೆ ಉಪಾಧ್ಯಕ್ಷ ಪ್ರದೀಪ ಪಾಟೀಲ ಮಾತನಾಡಿ, ಭಾರತದ ಸಂವಿಧಾನದ 73ನೇ ತಿದ್ದುಪಡಿ ಕಾಯ್ದೆ, 1992ರ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಾಂವಿಧಾನಿಕ ಸ್ಥಾನಮಾನ ನೀಡಲಾಗಿದೆ. ಸಂವಿಧಾನದ ಅನುಚ್ಛೇದಗಳು 243 ರಿಂದ 243-ಔ ಸ್ಥಳೀಯ ಸ್ವರಾಜ್ಯ ಸಂಸ್ಥೆಗಳ ರಚನೆ, ಅಽಕಾರ, ಚುನಾವಣೆ ಮತ್ತು ಕಾರ್ಯನಿರ್ವಹಣೆಗೆ ಭದ್ರತೆ ಒದಗಿಸುತ್ತವೆ. ವಿಶೇಷವಾಗಿ,
ಅನುಚ್ಛೇದ 243 ಇ ಪ್ರಕಾರ ಪಂಚಾಯಿತಿಗಳ ಅವಽ ಐದು ವರ್ಷಗಳಾಗಿದ್ದು, ಅವಽ ಮುಗಿಯುವ ಮುನ್ನ ಅಥವಾ ವಿಸರ್ಜನೆಯಾದಲ್ಲಿ ನಿಗದಿತ ಅವಽಯೊಳಗೆ ಚುನಾವಣೆ ನಡೆಸುವುದು ಸಂವಿಧಾನದ ಆಶಯವಾಗಿದೆ ಎಂದರು.
ಅವಽ ಮುಕ್ತಾಯಗೊಂಡ ಜಿ.ಪಂ., ತಾ.ಪಂ. ಹಾಗೂ ಗ್ರಾ.ಪಂ. ಚುನಾವಣೆಗಳನ್ನು ಅನಗತ್ಯ ವಿಳಂಬ ಮಾಡದೇ ಶೀಘ್ರವಾಗಿ ಘೋಷಿಸಿ ನಡೆಸಬೇಕು. ಪ್ರಸ್ತುತ ನೇಮಕಗೊಂಡಿರುವ ಆಡಳಿತಾಽಕಾರಿಗಳು ಕಾನೂನುಬದ್ಧವಾಗಿ ಗ್ರಾಮ ಸಭೆಗಳನ್ನು ಕಡ್ಡಾಯವಾಗಿ ನಡೆಸುವಂತೆ ನಿರ್ದೇಶನ ನೀಡಬೇಕು. ಗ್ರಾಮ ಸಭೆಯ ನಿರ್ಣಯಗಳ ಆಧಾರದ ಮೇಲೆ ಗ್ರಾಮ ಅಭಿವೃದ್ಧಿ ಕ್ರಿಯಾ ಯೋಜನೆಗಳನ್ನು ರೂಪಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಅಲ್ಲದೆ, ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಂವಿಧಾನ ಮತ್ತು ಕಾನೂನಿನ ಪ್ರಕಾರ ನೀಡಲಾಗಿರುವ ಅಽಕಾರಗಳನ್ನು ಸಮರ್ಪಕವಾಗಿ ಜಾರಿಗೊಳಿಸುವ ಜತೆಗೆ ಸ್ಥಳೀಯ ಸ್ವರಾಜ್ಯವನ್ನು ಬಲಪಡಿಸಬೇಕು ಎಂದು ಆಗ್ರಹಿಸಿದರು.