ಇಂಡಿ ಸಮೀಪದ ಲಿಂಗದಳ್ಳಿ ಗ್ರಾಮದ ವಿವಿಧ್ದೋದೇಶ ಗ್ರಾಮೀಣ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷರಾಗಿ ಶಶಿಧರ ಟೆಂಗಳೆ, ಉಪಾಧ್ಯಕ್ಷರಾಗಿ ಮೋತಿಲಾಲ ಜಾಧವ ಅವಿರೋಧ ಆಯ್ಕೆಯಾದರು.
- ಕೃಷಿ ಸಹಕಾರ ಸಂಘ
- ಅಧ್ಯಕ್ಷ-ಉಪಾಧ್ಯಕ್ಷ
ಇಂಡಿ: ತಾಲೂಕಿನ ಲಿಂಗದಳ್ಳಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ಶಶಿಧರ ಟೆಂಗಳೆ ಹಾಗೂ ಉಪಾಧ್ಯಕ್ಷರಾಗಿ ಮೋತಿಲಾಲ ಜಾಧವ ಅವಿರೋಧ ಆಯ್ಕೆಯಾದರು.
ಭಾನುವಾರ ಸಂಘದ ಕಚೇರಿಯಲ್ಲಿ ಚುನಾವಣೆ ನಡೆಯಿತು. ಸಂಘದ ಒಟ್ಟು 12 ಜನ ಸದಸ್ಯರಿದ್ದರು. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದೇ ನಾಮಪತ್ರ ಸಲ್ಲಿಸಿದ್ದರಿಂದಾಗಿ ಅವರನ್ನೇ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸದಸ್ಯರಾಗಿ ಬೋದಿನಸಾಹೇಬ ಧಡೇದ, ಕಾಶೀನಾಥ ಜಾಧವ, ಈರಪ್ಪ ಗೊಟ್ಯಾಳ, ಪ್ರಭಯ್ಯಾ ಹಿರೇಮಠ, ಅಶ್ವಿನಿ ಟೆಂಗಳೆ, ನಾಗವ್ವ ಬೋಳಕೊಟಗಿ, ಬಸಪ್ಪ ಹೂಗಾರ, ಪ್ರಕಾಶ ಇಂಡಿ, ಬಾಬುರಾಯ ಡೊಂಬರ್, ಮಾಳಪ್ಪ ವಾಲೀಕಾರ ಸರ್ವಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಽಕಾರಿ ಸಂತೋಷ ಸದ್ದಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಾಮದ ಮುಖಂಡ ಶ್ರೀಮಂತ ಹಿರೇಕುರಬರ, ಈಶ್ವರಗೌಡ ಪಾಟೀಲ, ವೇಣು ಚವಾಣ್, ಶೇಖರ ಶಿವಶರಣ, ಕಾಶಿನಾಥ ಟೆಂಗಳೆ, ಸೂರ್ಯಕಾಂತ ಹಿರೇಕುರಬರ, ತಮ್ಮಣ್ಣಾ ಪೂಜಾರಿ, ಬುಡ್ಡೇಸಾಬ ಧಡೇದ, ಕಾರ್ಯದರ್ಶಿ ನಿಂಗಪ್ಪ ವಾಲಿಕಾರ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.