ವಿಜಯಪುರದ ಅಖಿಲ ಭಾರತ ವೀರಶೈವ ಲಿಂಗಾಯತ ಸಾಂಸ್ಕೃತಿಕ ಸಭಾಭವನದಲ್ಲಿ ಹಮ್ಮಿಕೊಂಡಿದ್ದ 80ನೇ ಶಿವಾನುಭವ ಗೋಷ್ಠಿಯಲ್ಲಿ ಎಂ.ಎಸ್. ಮದಭಾವಿ ಮಾತನಾಡಿದರು. ವಿ.ಸಿ. ನಾಗಠಾಣ, ಎಸ್.ಕೆ. ಕೊಪ್ಪ, ರವೀಂದ್ರ ಬ್ಯಾಕೋಡ, ಭಾರತಿ ಭುಯ್ಯಾರ, ಮಹಾದೇವ ಹಾಲಳ್ಳಿ, ವಿಠಲ ತೇಲಿ ಮತ್ತಿತರರಿದ್ದಾರೆ. 
ವಿಜಯಪುರ

ಡಾ. ಫ.ಗು. ಹಳಕಟ್ಟಿಯಿಂದ ವಚನದ ಅರಿವು

ವಿಜಯಪುರ : ಡಾ. -À.ಗು. ಹಳಕಟ್ಟಿ ಅವರು ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂಪಾದಿಸಿ, ಪ್ರಕಟಿಸದೇ ಹೋಗಿದ್ದರೆ ವಚನ ಸಾಹಿತ್ಯದ ಸಮಗ್ರ ದರ್ಶನ ನಮಗೆ ಆಗುತ್ತಿರಲಿಲ್ಲ ಎಂದು -À.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಎಂ.ಎಸ್. ಮದಭಾವಿ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಸಾಂಸ್ಕೃತಿಕ ಸಭಾಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾ
ಘಟಕದಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ 80ನೇ ಶಿವಾನುಭವ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ವಚನ ಪಿತಾಮಹ ಡಾ. -À.ಗು. ಹಳಕಟ್ಟಿ ಅವರು ತಮ್ಮ ಸಮಸ್ತ ಬದುಕನ್ನೇ ಶರಣ ಸಾಹಿತ್ಯದ ಪುನರುಜ್ಜೀವನಕ್ಕಾಗಿ ಮೀಸಲಿಟ್ಟು, ಶಿವಾನುಭವ ಪತ್ರಿಕೆ ಮೂಲಕ ಮುವತ್ತೆÊದು ವರ್ಷಗಳ ಕಾಲ ಶರಣ ಸಾಹಿತ್ಯವನ್ನು ಅವ್ಯಾಹತವಾಗಿ ಪ್ರಕಟಿಸಿ ಕನ್ನಡ ಸಾಹಿತ್ಯದ ಶ್ರೀಮಂತಿP ಹೆಚ್ಚಿಸಿದ್ದಾರೆ ಎಂದರು.
ಶಿವಶರಣರ ತತ್ವಗಳ ಉದ್ದೇಶವು ಶಿವನ ಅನುಭವ ಅಂದರೆ ಶಿವನನ್ನು ಕಾಣುವುದು, ಅರಿಯುವುದೇ ಮುಖ್ಯ. ಶಿವಾನುಭವ ಪತ್ರಿಕೆಯನ್ನು ಎಂತಹ ಗಂಡಾAತರ ಬಂದರು ನಿಲ್ಲಿಸದೇ ಪ್ರಕಟಿಸಿದ್ದು ಅವರ ಶರಣ ಶ್ರದ್ಧೆಗೆ ಹಿಡಿದ ಕನ್ನಡಿ. ಪತ್ರಿಕೆಯು ಕನ್ನಡ ಧಾರ್ಮಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಹತ್ವದ ಸ್ಥಾನವನ್ನು ಪಡೆದಿತ್ತು ಎಂದು ತಿಳಿಸಿದರು.
ಮಹಾಸಭೆಯ ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ, ಡಾ. -À.ಗು. ಹಳಕಟ್ಟಿ ಅವರು ಧಾರ್ಮಿಕ, ಸಾಮಾಜಿಕವಾಗಿ ನಿಸ್ವಾರ್ಥದಿಂದ ತೊಡಗಿಸಿ ಕೊಂಡವರು. ಅಲ್ಲದೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದರು ಎಂದರು.
ನಾಡಪ್ರಭು ಕೆಂಪೆಗೌಡ ಪ್ರಶಸ್ತಿಗೆ ಭಾಜನರಾದ ಬಿ.ಎಂ. ಕೊಕರೆ ಅವರನ್ನು ಸನ್ಮಾನಿಸಲಾಯಿತು. ಅಪ್ಪಾಸಾಹೇಬ ಕೋರಿ ಮತ್ತು ನೂತನ ಬ್ಯಾಕೊಡ ವಚನಗೀತೆ ಪ್ರಸ್ತುತ ಪಡಿಸಿದರು. ಬಿ.ಟಿ. ಈಶ್ವರಗೊಂಡ ಸ್ವಾಗತಿಸಿದರು. ಸಂಗಮೇಶ ಬಾದಾಮಿ ನಿರೂಪಿಸಿದರು. ಸಹದೇವ ನಾಡಗೌಡರ ವಂದಿಸಿದರು.
ಎಸ್.ಕೆ. ಕೊಪ್ಪ, ರವೀಂದ್ರ ಬ್ಯಾಕೋಡ, ಭಾರತಿ ಭುಯ್ಯಾರ, ಮಹಾದೇವ ಹಾಲಳ್ಳಿ, ವಿಠಲ ತೇಲಿ, ಮಲ್ಲಿಕಾರ್ಜುನ ಅಮರಣ್ಣವರ, ಕಮಲಾ ಗೆಜ್ಜಿ, ಸಂಗಮೇಶ ಮೇತ್ರಿ, ಸೋಮಶೇಖರ ವಾಲಿ, ಜಗದೀಶ ಮೊಟಗಿ, ಎಸ್.ವೈ. ಶಿವಣಗಿ, ಬಸವರಾಜ (ಅಪ್ಪು) ಇಟ್ಟಂಗಿ, ದೊಡ್ಡಣ್ಣ ಭಜಂತ್ರಿ, ಸುಭಾಸ ಬೆಟಗೇರಿ, ಶಶಿಧರ ಶಿರಹಟ್ಟಿ ಮತ್ತಿತರರಿದ್ದರು.