ವಿಜಯಪುರ ನಗರದ ಟ್ರಯಂಪ್ರೂಶೋರೂಮ್‌ನಲ್ಲಿ ಬಹುನಿರೀಕ್ಷಿತ ಟ್ರಯಂಪ್ ಟ್ರ‍್ಯಾಕರ್ ೪೦೦ ಮೋಟಾರ್ ಸೈಕಲ್‌ನ್ನ ಗಣ್ಯರು ಬಿಡುಗಡೆಗೊಳಿಸಿದರು. ರವೀಂದ್ರ ಬಿಜ್ಜರಗಿ, ಸಂತೋಷ ದೇಸಾಯಿ, ಆನಂದ ರೌತೋದ ಮತ್ತಿತರರಿದ್ದರು.
ವಿಜಯಪುರ: ನಗರದ ಮಾರುಕಟ್ಟೆಗೆ ಬಹು ನಿರೀಕ್ಷಿತ ಟ್ರಯಂಪ್ ಟ್ರ‍್ಯಾಕರ್ ೪೦೦ ಮೋಟಾರ್ ಸೈಕಲ್‌ನ್ನು ಶುಕ್ರವಾರ ನಗರದ ಬಸವೇಶ್ವರ ವೃತ್ತದಲ್ಲಿರುವ ಟ್ರಯಂಪ್ ವಿಜಯಪುರ ಶೋ ರೂಮ್‌ನಲ್ಲಿ ಭರ್ಜರಿಯಾಗಿ ಬಿಡುಗಡೆಗೊಳಿಸಲಾಯಿತು.
ಸಿದ್ಧೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ರವೀಂದ್ರ ಬಿಜ್ಜರಗಿ ಕಾರ್ಯಕ್ರಮ ಉದ್ಘಾಟಿಸಿದರು. ಸಂತೋಷ ದೇಸಾಯಿ, ಆನಂದ ರೌತೋದ, ಡಾ. ಜಮೀರ್ ಬಾಂಟಿ ಹಾಗೂ ಸಂದೀಪ ಬಿಜ್ಜರಗಿ ಉಪಸ್ಥಿತಿ ವಹಿಸಿದ್ದರು.
ಶೋ ರೂಮಿನ ಮಾಲೀಕ ಸಂದೀಪ ಬಿಜ್ಜರಗಿ ನೂತನ ಬೈಕ್ ಕುರಿತು ಮಾಹಿತಿ ನೀಡಿ, ಟ್ರಯಂಪ್ ಟ್ರ‍್ಯಾಕರ್ ೪೦೦ ಬೈಕ್ ೩೫೦ ಸಿಸಿ ಇಂಜಿನ್ ಹೊಂದಿದ್ದು, ೮೭೫೦ ಆರ್‌ಪಿಎಂನಲ್ಲಿ ೪೦ ಪಿಎಸ್ ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಬೈಕ್‌ನಲ್ಲಿ ಸ್ವಿಚೇಬಲ್ ಟ್ರಾಕ್ಷನ್ ಕಂಟ್ರೋಲ್, ರೈಡ್-ಬೈ-ವೈರ್ ತಂತ್ರಜ್ಞಾನ, ಸ್ಲಿಪ್ ಆ್ಯಂಡ್ ಅಸಿಸ್ಟ್ ಕ್ಲಚ್
ಕ್ಲಚ್, ಡ್ಯುಯಲ್ ಬ್ಯಾರೆಲ್ ಎಕ್ಸಾಸ್ಟ್ ಹಾಗೂ ಇಂಜಿನ್‌ನ ಮಷಿನ್ ಫಿನ್ಸ್ ಸೇರಿ ಮುಂತಾದ ಆಧುನಿಕ ವೈಶಿಷ್ಟ್ಯ ಬೈಕ್ ಹೊಂದಿದೆ ಎಂದರು.
ಭಾರತೀಯ ರಸ್ತೆಗಳಿಗಾಗಿ ವಿನ್ಯಾಸಗೊಳಿಸಲಾದ ಪ್ಲಾಟ್-ಟ್ರಾಕ್ ಶೈಲಿಯ ಈ ಬೈಕ್ ವಿಶಾಲ ಹ್ಯಾಂಡಲ್‌ಬಾರ್ ಜತೆಗೆ ಸುಲಭ ಮತ್ತು ಆರಾಮದಾಯಕ ರೈಡಿಂಗ್ ಅನುಭವ ನೀಡಲಿದೆ. ಈ ಬೈಕ್ ಎಲ್ಲೋ, ಬ್ಲ್ಯಾಕ್ ಮತ್ತು ಅಲ್ಯೂಮಿನಿಯಂ ಸಿಲ್ವರ್ ಹೀಗೆ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ ಎಂದು ಅವರು ಮಾಹಿತಿ ನೀಡಿದರು. ಕಿಫಾಯತ್ ಹುಸೇನ್ ನಿರೂಪಿಸಿದರು. ಮಲ್ಲಪ್ಪಗೌಡ ಪೊಲೀಸ್ ಪಾಟೀಲ ವಂದಿಸಿದರು.