ಸಚಿವ ಎಂ.ಬಿ. ಪಾಟೀಲರು ಜೂ.26 ರಂದು ಬೆಳಗ್ಗೆ 9ಕ್ಕೆ ವಿಜಯಪುರ ನಗರದ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಲಿದ್ದಾರೆ
ವಿಜಯಪುರ: ಸಚಿವ ಎಂ.ಬಿ. ಪಾಟೀಲರು ಜೂ.26 ರಂದು ಬೆಳಗ್ಗೆ 9ಕ್ಕೆ ವಿಜಯಪುರ ನಗರದ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಲಿದ್ದಾರೆ.
ಕಳೆದ ವರ್ಷ ಮಳೆಗಾಲದ ಸಂದರ್ಭದಲ್ಲಿ ವಿಜಯಪುರ ನಗರದಲ್ಲಿ ಪ್ರವಾಹ ಉಂಟಾಗಿ ಅನೇಕ ರಸ್ತೆಗಳು ಮತ್ತು ಜನವಸತಿ ಭಾಗಗಳು ನೀರಿನಲ್ಲಿ ಮುಳುಗಡೆಯಾಗಿದ್ದವು.
ಈ ಹಿನ್ನೆಲೆಯಲ್ಲಿ ಆ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದ ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲರ ಸೂಚನೆಯ ಮೇರೆಗೆ ಪ್ರವಾಹ ನಿಯಂತ್ರಣ ನಿಽಯಡಿ ಹಾಗೂ ಮಹಾನಗರಪಾಲಿಕೆ ವಿಜಯಪುರದಿಂದ ಹಲವು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ.
ಹೀಗಾಗಿ ಬೆಳಗ್ಗೆ 9ಕ್ಕೆ ಶಿವಾಜಿ ವೃತ್ತದಲ್ಲಿ ಕೈಗೊಂಡ ಕಾಮಗಾರಿಗಳನ್ನು ವೀಕ್ಷಣೆ ಮಾಡಲಿz್ದÁರೆ. ನಂತರ ಬೆಳಗ್ಗೆ 9.20ಕ್ಕೆ ನವಬಾಗ್‌ನಲ್ಲಿ ಕೈಗೊಂಡಿರುವ ಕಾಮಗಾರಿಗಳು ಮತ್ತು ಬೆಳಗ್ಗೆ 9.40ಕ್ಕೆ ಮನಗೂಳಿ ರಸ್ತೆಯ ಕೋಟೆಗೋಡೆ ಕಂದಕದ ಸ್ವಚ್ಛತೆಗೆ ಕೈಗೊಂಡ ಕಾಮಗಾರಿಗಳನ್ನು ಸಚಿವರು ಪರಿಶೀಲನೆ ನಡೆಸಲಿz್ದÁರೆ ಎಂದು ಸಚಿವರ ಕಚೇರಿ ಪ್ರಕಟಣೆ ತಿಳಿಸಿದೆ.