ಶ್ರೀ ಲಷ್ಮೀ ನರಸಿಂಹ ದೇವರು 
ವಿಜಯಪುರ

ಇಂದು ಲಷ್ಮೀ ನರಸಿಂಹ ದೇವರ ಉತ್ಸವ

ವಿಜಯಪುರ: ಬಸವನಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮದಲ್ಲಿ ಏ. 18ರಿಂದ ಮೇ 3ರವರೆಗೆ ಲಷ್ಮೀ ನರಸಿಂಹ ದೇವರ ಉತ್ಸವ ಸಡಗರ ಸಂಭ್ರಮದಿAದ ನಡೆಯಲಿದೆ.
ಏ. 18ರಂದು ಬೆಳಗ್ಗೆ 9 ಗಂಟೆಗೆ ಶ್ರೀನಿವಾಸಾಚಾರ್ಯ ಜೋಶಿ ಅರ್ಚಕರ ಮನೆಯಿಂದ ವಾದ್ಯ ವೈಭವ ಮತ್ತು ಪಲ್ಲಕ್ಕಿಯ ಜತೆಗೆ ಲಕ್ಷಿ÷್ಮÃ ನರಸಿಂಹ ದೇವರ ಉತ್ಸವ ಮೂರ್ತಿ ದೇವಸ್ಥಾನಕ್ಕೆ ತೆರಳಲಿದ್ದು, ನಂತರ ಗಣಪತಿ ಪೂಜೆ, ಕಲಶಾರೋಹಣದೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದೆ.
ಏ. 18ರಿಂದ ಏ. 20ರವರೆಗೆ ಅನಂತಾಚಾರ್ಯ ಅಕಮಂಚಿ ಅವರಿಂದ ಉದ್ಧವಗೀತಾ, ಏ. 21ರಿಂದ ಏ. 24ರವರೆಗೆ ಸಂಜೀವಾಚಾರ್ಯ ಬುರ್ಲಿ ಅವರಿಂದ ಗೋಪಿಗೀತಾ, ಏ. 26 ಹಾಗೂ ಏ. 26ರಂದು ಕೃಷ್ಣಾಚಾರ್ಯ ಕಾಖಂಡಕಿ ಅವರಿಂದ ಭ್ರಮರಗೀತಾ, ಏ. 29ರಿಂದ ಮೇ 1ರವರೆಗೆ ಅಚ್ಯುತಾಚಾರ್ಯ ಗಲಗಲಿ ಅವರಿಂದ ಶೃತಿಗೀತಾ ವ್ಯಾಸಸುಧಾ ನಡೆಯಲಿದೆ.
ಏ. 29ರಂದು ಸುಮತಿ ಜೋಶಿ, ಏ. 30ರಂದು ರಾಯಚೂರಿನ ಶೇಷಗಿರಿದಾಸ ಅವರಿಂದ ದಾಸವಾಣಿ ಹಾಗೂ ಮೇ 1ರಂದು ಉದಯ ದೇಶಪಾಂಡೆ ಗಾಯನ ಮತ್ತು ಪಾವನಿ ದೇಶಪಾಂಡೆ ಅವಳಿಂದ ಭರತನಾಟ್ಯ ಹಮ್ಮಿಕೊಳ್ಳಲಾಗಿದೆ. ನರಸಿಂಹ ಜಯಂತಿ ದಿನ ಶ್ರೀಹರಿಗೆ ಕನಕಾಭಿಷೇಕ, ಸಹಸ್ರ ಶಂಖ ಕ್ಷೀರಾಭಿಷೇಕ, ತುಲಾಭಾರ, ಹೋಮ, ಹವನಾದಿಗಳು ಜರುಗಲಿವೆ.
ಮೇ 1ರಂದು ರಥಾಂಗ ಹೋಮ ಪ್ರಧಾನ ರಥೋತ್ಸವ, ಮೇ 2ರಂದು ಬೆಳಗ್ಗೆ ಹೋಮಹವನ, ಲಲಿತಾ, ಗೋಪಾಳಕಾವಲಿ ನಂತರ ಮಹನೀಯರಿಗೆ ಆಭಾರ ಮನ್ನಣೆ, ಶೇಷವಸö ಸಮರ್ಪಣೆ, ದಾನಿಗಳಿಗೆ ಆಭಾರ ಮನ್ನಣೆ, ಪಂಡಿತರಿಗೆ ಸನ್ಮಾನ, ಅವಕೃತ ಸ್ನಾನ, ವೇದ ಘೋಷದ ಜತೆಗೆ ನರಸಿಂಹದೇವರ ಪುರ ಪ್ರವೇಶದೊಂದಿಗೆ ಉತ್ಸವ ಸಮಾಪ್ತಿಗೊಳ್ಳಲಿದೆ.
ಉತ್ಸವದಲ್ಲಿ ಪ್ರತಿ ದಿನ ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಮಹಾಪೂಜೆ, ಷೋಡಷೋಪಚಾರ ಮಹಾಪೂಜೆ, ನೈವೇದ್ಯ, ಹಸ್ತೋದಕ, ತೀರ್ಥ ಪ್ರಸಾದ ಮತ್ತು ಸಂಜೆ ಮಂತ್ರಪುಷ್ಪ ಅಷ್ಠಾವಧಾನ ಸೇವೆ, ಪಲ್ಲಕ್ಕಿ ಸೇವೆ, ತೊಟ್ಟಿಲು ಸೇವೆ ಹಾಗೂ ಭಜನೆ ಜರುಗಲಿದೆ ಎಂದು ದೇವಸ್ಥಾನದ ಚಾರಿಟೇಬಲ್ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.