ವಿಜಯಪುರ ನಗರದ ಗಗನ ಮಹಲ್ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿದರು. ಪಾಂಡು ಹ್ಯಾಟಿ, ಸದಾಶಿವ ಬರಟಗಿ, ಬಾಲಪ್ಪಗೌಡ ಲಿಂಗದಳ್ಳಿ ಮತ್ತಿತರರಿದ್ದಾರೆ. 
ವಿಜಯಪುರ

ರೈತರ ಸಮಸ್ಯೆ ಕುರಿತು ಚಿಂತನೆ, ಎಕೆಆರ್‌ಎಸ್ ರಾಜ್ಯ ಸಮಿತಿ ಸಭೆ, ಯಾವಾಗ ಗೊತ್ತಾ?

ಪ್ರಮುಖ ಮುಖ್ಯಾಂಶಗಳು

  • ಎಕೆಆರ್‌ಎಸ್ ರಾಜ್ಯಮಟ್ಟದ ಸಭೆ
  • ಗಗನ ಮಹಲ್‌ನಲ್ಲಿ ಪೂರ್ವಭಾಗಿ ಸಭೆ
  • ರೈತ ಸಮಸ್ಯೆಗಳ ಕುರಿತು ಗಂಭೀರ ಚರ್ಚೆ
ವಿಜಯಪುರ: ನಗರದ ಅಂಬೇಡ್ಕರ್ ಭವನದಲ್ಲಿ ಡಿ. 22 ರಂದು ಬೆಳಗ್ಗೆ 11ಕ್ಕೆ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಸಮಿತಿ ಸಭೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದರು.
ಇಲ್ಲಿನ ಗಗನ ಮಹಲ್ ಆವರಣದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಅಂದಿನ ಸಭೆಯಲ್ಲಿ ರೈತರ ಗಂಭಿರ ಸಮಸ್ಯೆಗಳು ಕುರಿತು ಚರ್ಚಿಸಲಾಗುವುದು. ವಿಮಾ ಸೌಲಭ್ಯ, ಬೆಳೆ ಪರಿಹಾರ, ಜಮೀನಿನ ದಾರಿ ಸಮಸ್ಯೆ, ಸ್ಪಿಂಕ್ಲರ್‌ಗಳ ವಿತರಿಸದೇ ಇರುವುದು, ಕಳಪೆ ಸ್ಪಿಂಕ್ಲರ್ ವಿತರಿಸಿರುವುದು ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚರ್ಚಿಸಲಾಗುವುದು ಎಂದರು.
ಸಭೆ ಬಳಿಯ ಜಿಲ್ಲಾಡಳಿತದ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ರಾಜ್ಯದ ನಾನಾ ಭಾಗಗಳಿಂದ ರೈತರು ಪಾಲ್ಗೊಳ್ಳುವರೆಂದು ಕುಲಕರ್ಣಿ ವಿವರಿಸಿದರು.
ಜಿಲ್ಲಾ ಸಂಚಾಲಕ ಪಾಂಡು ಹ್ಯಾಟಿ, ಜಿಲ್ಲಾ ಸಂಘಟನಾ ಸಂಚಾಲಕ ಸದಾಶಿವ ಬರಟಗಿ, ತಾಳಿಕೋಟಿ ತಾಲೂಕಾಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ರಾಮನಗೌಡ ಹಾದಿಮನಿ, ಗುರುಲಿಂಗಪ್ಪ ಪಡಸಲಗಿ, ಮಲ್ಲಪ್ಪ ಪಡಸಲಗಿ, ಸಂಗಪ್ಪ ಪಡಸಲಗಿ, ದಾವಲಸಾಬ ನದಾಫ್, ಬಸವರಾಜ ಜಂಗಮಶೆಟ್ಟಿ, ಜಯಶ್ರೀ ಜಂಗಮಶೆಟ್ಟಿ, ಪ್ರಭು ಬಸ್ತವಾಡ, ಶಿವಪ್ಪ ಮಾಳಗೊಂಡ, ಹೊನಕೇರೆಪ್ಪ ತೆಲಗಿ, ಶಿವಪ್ಪ ಸುಂಠ್ಯಾಣ, ಬಸಯ್ಯ ಮಠ, ರ‌್ಯಾವಪ್ಪಗೌಡ ಫುಲೇಶಿ ಮತ್ತಿತರರಿದ್ದರು.