ಇಂಡಿ ನಗರದ ಶಿರಶ್ಯಾಡ ಶ್ರೀಮಠದ ಆವರಣದಲ್ಲಿ ಪೂಜ್ಯ ಮುರುಘೇಂದ್ರ ಶಿವಾಚಾರ್ಯ ಶ್ರೀಗಳ ಜನ್ಮ ದಿನೋತ್ಸವ ಕಾರ್ಯಕ್ರಮದ ಅಂಗವಾಗಿ ಅಭಿನವ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀಪತಿಗೌಡ ಬಿರಾದಾರ, ಸುಧಾಕರಗೌಡ ಬಿರಾದಾರ, ಮಂಜುನಾಥ ವಂದಾಲ, ಅಂಜುಟಗಿ ಶ್ರೀಗಳು ಮತ್ತಿತರರಿದ್ದರು.
- ಮಮದಾಪುರದ ವಿರಕ್ತಮಠದ ಮುರುಘೇಂದ್ರ ಶಿವಾಚಾರ್ಯರ ಅಭಿಮತ
- ತರಬೇತಿ ಕಾರ್ಯಾಗಾರ
ಇಂಡಿ: ಮಠಗಳು ನಾಡಿನ ಧಾರ್ಮಿಕ ಸಾಂಸ್ಕೃತಿಕ ಪರಂಪರೆಯ ಕೇಂದ್ರಗಳು, ಸಮಾಜವು ಸನ್ಮಾರ್ಗದಲ್ಲಿ ಸಾಗಲು ಮಠಗಳ ಪಾತ್ರ ಮುಖ್ಯವಾಗಿವೆ. ಶಿರಶ್ಯಾಡದ ಮುರುಘೇಂದ್ರ ಶಿವಾಚಾರ್ಯರು ಉಚಿತ ವಿದ್ಯಾರ್ಥಿ ನಿಲಯ ಕಟ್ಟಿಸುತ್ತಿರುವುದು ಬಡ ವಿದ್ಯಾರ್ಥಿಗಳಿಗೆ ದಾರಿದೀಪ ಎಂದು ಮಮದಾಪುರದ ವಿರಕ್ತಮಠದ ಮುರುಘೇಂದ್ರ ಶಿವಾಚಾರ್ಯರು ಹೇಳಿದರು.
ನಗರದ ಸಿಂದಗಿ ರಸ್ತೆಯ ಶ್ರೀ ಮಠದ ಆವರಣದಲ್ಲಿ ಶಿರಶ್ಯಾಡದ ಅಭಿನವ ಮುರುಘೇಂದ್ರ ಶಿವಾಚಾರ್ಯರ ಜನ್ಮ ದಿನೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮ ಗ್ರಾಮೀಣ ಮಕ್ಕಳ ಉಜ್ವಲ ಭವಿಷ್ಯಕ್ಕೆ ಕೆ.ಎ.ಎಸ್. ಹಾಗೂ ಐ.ಎ.ಎಸ್ ಉನ್ನತ ಶ್ರೇಣಿಯ ತರಬೇತಿ ಕಾರ್ಯಾಗಾರ ಪ್ರತಿ ತಿಂಗಳ ಮಾಸಿಕ ಮತ್ತು ಹುಣ್ಣಿಮೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಚಿಕ್ಕಪಡಸಲಗಿಯ ಶಶಿಕಾಂತ ಗುರೂಜಿ ಮಾತನಾಡಿ, ದೇವರನ್ನು ಕಾಣಲು ನಮ್ಮಲ್ಲಿ ಅರಿವು ಮೂಡಿಸುವ ಮಠಗಳ ಗುರುಗಳು ಅಗತ್ಯ. ಮುರುಘೇಂದ್ರ ಶಿವಾಚಾರ್ಯರರು ಬಡ ವಿದ್ಯಾರ್ಥಿಗಳಿಗೆ ಇಂಡಿಯಲ್ಲಿ ಉಚಿತ ನಿಲಯ ಕಟ್ಟುತ್ತಿದ್ದು ವಿದ್ಯಾರ್ಥಿಗಳಿಗೆ ಶಿಕ್ಷಣ ಜ್ಞಾನ ನೀಡುವುದರ ಜೊತೆಗೆ ಬದುಕಿಗೆ ಮಾರ್ಗ ತೋರುತ್ತಿದ್ದಾರೆ. ಅವರು ತೋರುವ ಮಾರ್ಗದಲ್ಲಿ ಸಮಾಜ ಶಾಂತಿ ನೆಮ್ಮದಿಯಿಂದ ಬಾಳಬೇಕು ಎಂದರು.
ಸತ್ಯಜೀತ ಶಿವಾನಂದ ಪಾಟೀಲ ಮಾತನಾಡಿ, ಮುರುಘೇಂದ್ರ ಶ್ರೀಗಳು ಬಡ ವಿದ್ಯಾರ್ಥಿಗಳಿಗೆ ವಸತಿ ನಿಲಯ ಕಟ್ಟಿಸುತ್ತಿರುವುದು ಶ್ರೇಷ್ಠ ಕಾರ್ಯ. ಇಂತಹ ಮಠಗಳನ್ನು ಬೆಳೆಸಿ ಪರಂಪರೆ ರಕ್ಷಿಸುವ ಕಾರ್ಯ ಭಕ್ತರಿಂದ ಆಗಬೇಕು. ಮುರುಘೇಂದ್ರ ಶ್ರೀಗಳು ಬಂಥನಾಳದ ಸಂಗನಬಸವ ಶ್ರೀಗಳಂತೆ ಬಡ ವಿದ್ಯಾರ್ಥಿಗಳಿಗೆ ನೆರವಾಗುತ್ತಿದ್ದು ಇಂತಹ ಇನ್ನು ಅನೇಕ ಉನ್ನತ ಕಾರ್ಯಗಳನ್ನು ಮಾಡಬೇಕಾಗಿದೆ ಅದಕ್ಕೆ ನಾವೆಲ್ಲರೂ ಸಹಕಾರ ನೀಡಬೇಕಾಗಿದೆ ಎಂದರು.
ಶಾಂತೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ, ಬಿ.ಡಿ.ಪಾಟೀಲ, ಮುಳವಾಡದ ಸಂತೋಷ ನಿಂಬರಗಿ, ದಯಾಸಾಗರ ಪಾಟೀಲ, ಬಾಬುರಾವ ಶ್ರೀಗಳು, ರಾಘವೇಂದ್ರ ಕುಲಕರ್ಣಿ, ವೈ.ಜಿ. ಬಿರಾದಾರ ಮಾತನಾಡಿದರು.
ಶ್ರೀಪತಿಗೌಡ ಬಿರಾದಾರ, ಸುಧಾಕರಗೌಡ ಬಿರಾದಾರ, ಮಂಜುನಾಥ ವಂದಾಲ, ಅಂಜುಟಗಿ ಶ್ರೀಗಳು, ಹೊನವಾಡದ ಬಾಬುರಾವ ಮಹಾರಾಜರು, ಬರಡೋಲದ ಬಾಬುರಾವ ಮಹಾರಾಜರು, ಸಂತೋಷ ಶಹಾಪೇಟ, ವಿರಾಜ ಪಾಟೀಲ, ಅಭಿನವ ದೇವಾನಂದ ಚವಾಣ್, ಸಂಕೇತ ಬಗಲಿ, ಶಿವಶರಣ ಹಣಜಗಿ, ಪ್ರಕಾಶ ಚವಾಣ್, ಪಂಡಿತ ಅವಜಿ , ಅನೀಲ ಪ್ರಸಾದ ಏಳಗಿ ಮತ್ತಿತರರಿದ್ದರು.