ಮುದ್ದೇಬಿಹಾಳ ಕರ್ನಾಟಕ ರಾಜ್ಯ ಮಾದಿಗ ಮತ್ತು ಸಂಬಂಧಿತ ಉಪಜಾತಿಗಳ ಸಂಘಟನೆಗಳ ಒಕ್ಕೂಟ ನೇತೃತ್ವದಲ್ಲಿ ಶುಕ್ರವಾರ ಮುದ್ದೇಬಿಹಾಳ ಬಂದ್ ಮಾಡಿ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರ ವಿರುದ್ಧ ಘೋಷಣೆ ಕೂಗಿ ಉಗ್ರ ಪ್ರತಿಭಟನೆ ನಡೆಸಿ, ತಹಸೀಲ್ದಾರ ಕೀರ್ತಿ ಚಾಲಕ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಬಾಲಚಂದ್ರ ಹುಲ್ಲೂರ, ಆನಂದ ಮುದೂರ, ಮಂಜುನಾಥ ಕುಂದರಗಿ ಮತ್ತಿತರರಿದ್ದರು. 
ವಿಜಯಪುರ

ಮೀಸಲಾತಿ ತಪ್ಪಿಸುವ ಹುನ್ನಾರ

Mallamma K.P
ಒಳ ಮಿಸಲಾತಿ ಅಂಗೀಕಾರದಲ್ಲಿನ ಅನ್ಯಾಯದ ಕುರಿತು ಕರ್ನಾಟಕ ರಾಜ್ಯ ಮಾದಿಗ ಮತ್ತು ಸಂಬಂಧಿತ ಉಪಜಾತಿಗಳ ಸಂಘಟನೆಗಳ ಒಕ್ಕೂಟ ನೇತೃತ್ವದಲ್ಲಿ ಶುಕ್ರವಾರ ಮುದ್ದೇಬಿಹಾಳ ಬಂದ್ ಮಾಡಿ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಉಗ್ರ ಪ್ರತಿಭಟನೆ ನಡೆಸುವುದರ ಜತೆಗೆ ತಹಸೀಲ್ದಾರ್ ಕೀರ್ತಿ ಚಾಲಕ ಅವರ ಮೂಲಕ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಮಾದಿಗ ಸಮಾಜದ ಮುಖಂಡ ತಿಪ್ಪಣ್ಣ ದೊಡಮನಿ ಮಾತನಾಡಿ, ಈಗಾಗಲೇ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾಯ್ದೆ ರೂಪಿಸಿ ರಾಜ್ಯಪಾಲರಿಂದ ಅಂಕಿತ ಪಡೆದಿರುವುದು ಮಾದಿಗ ಸಮುದಾಯದ ೩೫ ವರ್ಷಗಳ ಹೋರಾಟಕ್ಕೆ ದೊರೆತ ಐತಿಹಾಸಿಕ ನ್ಯಾಯವಾಗಿದೆ. ಅದರಂತೆ ಬೆಳಗಾವಿ ಅಽವೇಶನದಲ್ಲಿ ಸಂಪೂರ್ಣ ಅಂಗಿಕಾರಕ್ಕೆ ಅನುಮೋದನೆ ನೀಡಿ -ೆ.೨೬ರಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಯಾವುದೇ ನ್ಯಾಯಾಲಯದ ತೀರ್ಪು ಇಲ್ಲದೆ ಕೇವಲ ೫೬% ಮೀಸಲಾತಿ ಸಮರ್ಥಿತಿಸಿಕೊಳ್ಳದೆ ಕೇವಲ ನ್ಯಾಯಾಲಯದ ತಡೆ ಎನ್ನುವ ನೆಪ ಒಡ್ಡಿ ಒಳ ಮೀಸಲಾತಿ ತಪ್ಪಿಸುವ ಹುನ್ನಾರದಿಂದ ಪ.ಜಾ ೧೫% ಮತ್ತು ಪ.ವ ೩% ಮಿಸಲಾತಿಯಂತೆ ನೇಮಕಾತಿ ಮಾಡಿಕೊಳ್ಳಲು ಮುಂದಾದ ಸರ್ಕಾರದ ನಡೆ ಪರಿಶಿಷ್ಟ ಜಾತಿ ೨ ಮತ್ತು ಪರಿಶಿಷ್ಟ ಪಂಗಡ ೪% ಮೀಸಲಾತಿ ಕಡಿಮೆ ಮಾಡಿ ಪ.ಜಾ ಮತ್ತು ಪ.ವ ಸಮುದಾಯಗಳಿಗೆ ಒದಗಬೇಕಾದ ೩೩೮೭ಕ್ಕು ಹೆಚ್ಚು ಹುದ್ದೆಗಳನ್ನು ಮತ್ತು ವಿಶೇಷವಾಗಿ ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿಯಿಂದ ಲಭಿಸುವ ೩,೫೦೦ಕ್ಕೂ ಹೆಚ್ಚಿನ ಹುದ್ದೆಗಳನ್ನು ತಪ್ಪಿಸುವ ಹುನ್ನಾರದಿಂದ ತೆಗೆದುಕೊಂಡ ಸರ್ಕಾರದ ನಡೆಗೆ ರಾಜ್ಯದ ಸಮಸ್ತ ಮಾದಿಗರು ಬಲವಾಗಿ ಖಂಡಿಸುತ್ತೇವೆ. ಈ ಕೂಡಲೇ ಒಳ ಮೀಸಲಾತಿ ಜಾರಿಗೊಳಿಸುವ ಮೂಲಕ ನಮ್ಮ ಸಮಾಜಕ್ಕೆ ಸೂಕ್ತ ಸ್ಥಾನ ಮಾನ ನೀಡಿ ಗೌರವಿಸಬೇಕು ಇಲ್ಲದಿದ್ದರೇ ಮುಂಬರುವ ದಿನಗಳಲ್ಲಿ ಇಡಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಚ್ಚರಿಕೆ ನೀಡಿದರು.
ಬಾಲಚಂದ್ರ ಹುಲ್ಲೂರ, ಆನಂದ ಮುದೂರ, ಮಂಜುನಾಥ ಕುಂದರಗಿ, ನ್ಯಾಯವಾದಿ ಕೆ.ಬಿ. ದೊಡಮನಿ, ದುರುಗಪ್ಪ ಗರಸಂಗಿ, ಮುತ್ತು ಅಮರಗೋಳ, ಬಸವರಾಜ ಸಿದ್ದಾಪೂರ, ಆನಂದ ದೇವೂರ, ಸುಭಾಷ ಕಾಳಗಿ, ಮಹಾಂತೆಶ ಕಂದಗನೂರು ಮತ್ತಿತರರಿದ್ದರು.