ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಬಿ.ಎಂ. ಪಾಟೀಲ ಪಬ್ಲಿಕ್ (ಸಿಬಿಎಸ್‌ಇ) ಶಾಲೆಯಲ್ಲಿ ನೂತನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವನ್ನು ಸರಸ್ವತಿ ಪೂಜೆಯೊಂದಿಗೆ ನೆರವೇರಿಸಲಾಯಿತು. ದೀಪಾ ಜಂಬೂರೆ, ವಸುಧಾ ನಾರ್ವೆಕರ ಮತ್ತಿತರರಿದ್ದಾರೆ. 
ವಿಜಯಪುರ

ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಅದ್ದೂರಿ

ವಿಜಯಪುರ: ನಗರದ ಬಿಎಲ್‌ಡಿಇ ಸಂಸ್ಥೆಯ ಬಿ.ಎಂ. ಪಾಟೀಲ ಪಬ್ಲಿಕ್ (ಸಿಬಿಎಸ್‌ಇ) ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಸೋಮವಾರ ಅದ್ದೂರಿಯಾಗಿ ನಡೆಯಿತು. ಮಕ್ಕಳು ಶಾಲಾ ವಾಹನದಿಂದ ಕೆಳಗಿಳಿಯುತ್ತಿದ್ದಂತೆಯೇ ಅವರನ್ನು, ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ವೈಭವದಿಂದ ಸ್ವಾಗತಿಸದರಲ್ಲದೇ, ಪ್ರತಿ ಮಗುವಿಗೂ ಶುಭಾಶಯ ಪತ್ರ ನೀಡಿ ಕರತಾಡನದ ಮೂಲಕ ಬರಮಾಡಿಕೊಂಡರು.
ಶಾಲೆಯ ಎಲ್ಲ ತರಗತಿಗಳನ್ನು ಆಕರ್ಷಕವಾಗಿ ಅಲಂಕಾರ ಮಾಡಲಾಗಿತ್ತು.
ಹಿರಿಯ ಕಾರ್ಯ ಸಂಯೋಜಕಿ ದೀಪಾ ಜಂಬೂರೆ ಮತ್ತು ನೂತನ ಉಪ ಪ್ರಾಚಾರ್ಯೆ ವಸುಧಾ ನಾರ್ವೆಕರ ಸರಸ್ವತಿ ಪೂಜೆ ನೆರವೇರಿಸಿ, ಮಕ್ಕಳಿಂದ ದೀಪ ಬೆಳಗಿಸುವ ಮೂಲಕ ಹೊಸ ಶೈಕ್ಷಣಿಕ ವರ್ಷಕ್ಕೆ ಅದ್ದೂರಿ ಚಾಲನೆ ನೀಡಿದರು.
ನೂತನ ಉಪ ಪ್ರಾಚಾರ್ಯೆ ವಸುಧಾ ನಾರ್ವೇಕರ ಮುಂದಿನ ಶೈಕ್ಷಣಿಕ ಕಾರ್ಯ ಚಟುವಟಿಕೆಗಳ ಕುರಿತು ಮಾತನಾಡಿದರು.
ಸಂಗೀತ ಶಿಕ್ಷಕಿ ಸಂತೋಷಿ ಕುಸೂರ ಸರಸ್ವತಿ ಸ್ತೋತ್ರ ಪಠಿಸಿದರು. ಸಾಂಸ್ಕೃತಿಕ ಕಾರ್ಯ ಸಂಯೋಜಕಿ -Àರಾ ಜಾಗಿರದಾರ ಸ್ವಾಗತಿಸಿದರು. ಶಾಲೆಗೆ ಹೊಸದಾಗಿ ಆಗಮಿಸಿದ ಪ್ರತಿ ಶಿಕ್ಷಕರನ್ನು ವಿಶೇಷ ರೀತಿಯಲ್ಲಿ ಪರಿಚಯಿಸಲಾಯಿತು. ವಿಠ್ಠಲ ಬಜೇರಿಯವರ ವಂದಿಸಿದರು.