ವಿಜಯಪುರದ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯದಲ್ಲಿ ರಾಷ್ಟಿçÃಯ ಗ್ರಂಥಪಾಲಕರ ದಿನವನ್ನು ಆಚರಿಸಲಾಯಿತು. ವೈ. ತಮ್ಮಣ್ಣ, ಸವಿತಾ ಕುಲಕರ್ಣಿ, ಭಕ್ತಿ ಮಹೇಂದ್ರಕರ ಮತ್ತಿತರರಿದ್ದಾರೆ. 
ವಿಜಯಪುರ

ಗ್ರಂಥಾಲಯ ನಮ್ಮ ಸಂಸ್ಕೃತಿಯ ಪ್ರತೀಕ

ವಿಜಯಪುರ : ಗ್ರಂಥಾಲಯಗಳು ಕೇವಲ ಪುಸ್ತಕಗಳ ಸಂಗ್ರಹವಲ್ಲ, ಅದು ಜ್ಞಾನ, ವಿಚಾರ ಮತ್ತು ಸಂಸ್ಕೃತಿಯ ಪ್ರತೀಕವಾಗಿವೆ ಎಂದು ಗ್ರಂಥಪಾಲಕಿ ಸವಿತಾ ಕುಲಕರ್ಣಿ ಹೇಳಿದರು.

ನಗರದ ಬಿಎಲ್‌ಡಿಇ ಸಂಸ್ಥೆಯ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯ, ಗ್ರಂಥಾಲಯ ವಿಭಾಗ ಮತ್ತು ಐಕ್ಯೂಎಸಿ ಅಡಿಯಲ್ಲಿ ಡಾ. ಎಸ್.ಆರ್. ರಂಗರಾಥನ್ ಅವರ ಜನ್ಮದಿನದ ನೆನಪಿಗಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಾಷ್ಟಿçÃಯ ಗ್ರಂಥಪಾಲಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಜ್ಞಾನದ ಹಸಿವನ್ನು ನೀಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಮಹಾನ್ ವ್ಯಕ್ತಿಗಳಲ್ಲಿ ಡಾ. ಎಸ್.ಆರ್. ರಂಗರಾಥನ್ ಅವರು ಪ್ರಮುಖರು. ಅವರ ವಿಶೇಷ ಪ್ರಯತ್ನಗಳಿಂದ ದೇಶದಲ್ಲಿ ಗ್ರಂಥಾಲಯಗಳು ಮುನ್ನೆಲೆಗೆ ಬಂದವು ಎಂದು ತಿಳಿಸಿದರು.
ಪ್ರಾಚಾರ್ಯ ವೈ. ತಮ್ಮಣ್ಣ ಮಾತನಾಡಿ, ಗ್ರಂಥಾಲಯಗಳು ವಿದ್ಯಾರ್ಥಿ ಜೀವನದಲ್ಲಿ ಅತಿ ಮುಖ್ಯ ಪಾತ್ರವಹಿಸುತ್ತವೆ. ಇಂದಿನ ಡಿಜಿಟಲ್ ಯುಗದಲ್ಲಿಯೂ ಪುಸ್ತಕಗಳ ಮಹತ್ವ ಕಡಿಮೆಯಾಗಿಲ್ಲ. ಗ್ರಂಥಾಲಯದ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ತಮ್ಮ ಜ್ಞಾನ ಮತ್ತು ವ್ಯಕ್ತಿತ್ವವನ್ನು ವಿಕಸನಗೊಳಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಐಕ್ಯೂಎಸಿ ಸಂಯೋಜಕಿ ಭಕ್ತಿ ಮಹೇಂದ್ರಕರ, ರಶ್ಮಿ ಪಾಟೀಲ, ವಿ.ಎಸ್. ನಂದೀಶ, ದೀಪಾ ಲಗಳಿ, ಎಸ್.ಡಿ. ಪಾಟೀಲ, ವಿದ್ಯಾನಂದ ಮತ್ತಿತರರಿದ್ದರು.