ಇಂಡಿ ನಗರದ ಸರ್ಕಾರಿ ನೌಕರರ ಸಭಾ ಭವನದಲ್ಲಿ ಛಲವಾದಿ ಸಮುದಾಯದ ಮುಖಂಡರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರಶಾಂತ ಕಾಳೆ, ಭೀಮಾಶಂಕರ ಮೂರಮನ, ಮುತ್ತಪ್ಪ ಪೊತೆ ಮತ್ತಿತರರಿದ್ದರು. 
ವಿಜಯಪುರ

ಯಶವಂತರಾಯಗೌಡ ಪಾಟೀಲರ ತೆಜೋವಧೆ ಸಲ್ಲ

ವಿಜಯವಾಣಿ ಸುದ್ದಿಜಾಲ, ಇಂಡಿ
ಶಾಸಕ ಯಶವಂತರಾಯಗೌಡ ಪಾಟೀಲ ಅವರಿಂದ ದಲಿತ ಸಮುದಾಯಕ್ಕೆ ಯಾವುದೇ ಅನ್ಯಾಯ, ಅವಮಾನ ಆಗಿಲ್ಲ. ದಲಿತ ಸಮುದಾಯದ ವ್ಯಕ್ತಿಗೆ ಸಾಮಾನ್ಯ ಮೀಸಲಾತಿಯಲ್ಲಿ ಪುರಸಭೆ ಅಧ್ಯಕ್ಷರನ್ನಾಗಿ ಮಾಡಿದ್ದು, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷರನ್ನಾಗಿ ಮಾಡಿದ್ದು, ಸಮುದಾಯಕ್ಕೆ ಹೆಮ್ಮೆ ತರುವ ವಿಷಯ. ಜೀತೆಂದ್ರ ಕಾಂಬಳೆ ಅವರು ಶಾಸಕರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ಛಲವಾದಿ ಸಮಾಜದ ಮುಖಂಡ ಭೀಮಾಶಂಕರ ಮೂರಮನ ಮತ್ತು ದಲಿತ ಮುಖಂಡ ಮುತ್ತಪ್ಪ ಪೊತೆ ಜಂಟಿಯಾಗಿ ಹೇಳಿದರು.
ನಗರದ ಸರ್ಕಾರಿ ನೌಕರರ ಸಭಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ದಲಿತ ಸಮುದಾಯದ ಕಾಲನಿಗಳಿಗೆ ಸಿಸಿ ರಸ್ತೆ, ಸಮುದಾಯ ಭವನ, ಗ್ರಂಥಾಲಯ ಸೇರಿ ಹಲವು ಅಭಿವೃದ್ಧಿ ಕೆಲಸಗಳು ಮಾಡಿದ್ದಾರೆ. ದಲಿತ ಸಮುದಾಯದವರಿಗಾಗಿ ನಗರದಲ್ಲಿ ಮಂಗಲ ಭವನ ನಿರ್ಮಾಣಕ್ಕೆ ಜಾಗ ಒದಗಿಸಿ, ಒಂದು ಕೋಟಿ ರೂ. ಅನುದಾನ ನೀಡಿದ್ದಾರೆ ಎಂದರು. ದಲಿತ ಮುಖಂಡ ಜಿತೇಂದ್ರ ಕಾಂಬಳೆ ಎನ್ನುವವರು ಒಂದು ಮಗುವಿನ ವಿಷಯ ಮುಂದಿಟ್ಟುಕೊಂಡು ಸಮಾಜದ ಹೆಸರು ಬಳಸಿಕೊಂಡು ಶಾಸಕರ ತೆಜೋವಧೆ ಮಾಡುವುದು ಬಿಡಬೇಕು ಎಂದು ಹೇಳಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಪ್ರಶಾಂತ ಕಾಳೆ ಮಾತನಾಡಿದರು. ಗಣಪತಿ ಬಾಣಿಕೋಲ, ಪ್ರದೀಪ ಮೂರಮನ್, ಮಲ್ಲು ಮಡ್ಡಿಮನಿ ಮತ್ತಿತರರಿದ್ದರು.
ಇಂಡಿ ನಗರದ ಸರ್ಕಾರಿ ನೌಕರರ ಸಭಾ ಭವನದಲ್ಲಿ ಛಲವಾದಿ ಸಮುದಾಯದ ಮುಖಂಡರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರಶಾಂತ ಕಾಳೆ, ಭೀಮಾಶಂಕರ ಮೂರಮನ, ಮುತ್ತಪ್ಪ ಪೊತೆ ಮತ್ತಿತರರಿದ್ದರು.