ಇಂಡಿ ಸಮೀಪದ ಬಬಲಾದ ಗ್ರಾಮದ ಅಲೆಮಾರಿ ಚನ್ನನದಾಸ ಕಾಲನಿಯಲ್ಲಿ 50ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಯ ಭೂಮಿ ಪೂಜೆಯನ್ನು ಪ್ರೀತು ದಶವಂತ ನೆರವೇರಿಸಿದರು. ಭೀಮಾಶಂಕರ ಕನ್ನೂರ, ಬನಸೋಡೆ, ಸಂಜೀವಕುಮಾರ, ಎಸ್ ಡಿ. ಬಿರಾದಾರ, ಶೇಖರ ನಾಯಕ, ಗ್ರಾಪಂ ಅಧ್ಯಕ್ಷ ಸಿದರಾಯಗೌಡ ಬಿರಾದಾರ ಇತರರಿದ್ದರು. 
ವಿಜಯಪುರ

ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ

ಪ್ರಮುಖ ಮುಖ್ಯಾಂಶಗಳು

  • ಪ್ರೀತು ದಶವಂತ ಹೇಳಿಕೆ
  • ಸಿಸಿ ರಸ್ತೆ ಕಾಮಗಾರಿಯ ಭೂಮಿ ಪೂಜೆ
ಹೊರ್ತಿ: ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅಲೆಮಾರಿ ಸಮುದಾಯದ ಜನರಿಗೆ ಆಸರೆಯಾಗಿದ್ದಾರೆ. ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ, ಈ ದಿಶೆಯಲ್ಲಿ ಮಹಾತ್ಮ ಗಾಂಧೀಜಿ ಕನಸು ನನಸಾಗಲೂ ಪ್ರತಿಯೊಬ್ಬರು ಗ್ರಾಮದ ಸ್ವಚ್ಛತೆ ಮತ್ತು ಸರ್ವಾಂಗೀಣ ಅಭಿವೃದ್ಧಿಯಲ್ಲಿ ಎಲ್ಲರ ಸಹಕಾರ ಮುಖ್ಯವಾಗಿದೆ ಎಂದು ಅಲೆಮಾರಿ ಸಮುದಾಯದ ಮುಖಂಡ ಪ್ರೀತು ದಶವಂತ ಹೇಳಿದರು.
ಸಮೀಪದ ಬಬಲಾದ ಗ್ರಾಮದ ಅಲೆಮಾರಿ ಚನ್ನದಾಸರ ಕಾಲನಿಯಲ್ಲಿ ಶಾಸಕರ ಅನುಪಸ್ಥಿತಿಯಲ್ಲಿ ರೂ.50ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ತಾಲೂಕಿನಲ್ಲಿಯೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಚೆನ್ನದಾಸರ ಸಮುದಾಯವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಎಲ್ಲ ರಂಗಗಳಲ್ಲೂ ಹಿಂದುಳಿದ ಸಮುದಾಯವನ್ನು ಎಲ್ಲ ರೀತಿಯ ಸಹಕಾರ ನೀಡಿ ಮುಖ್ಯವಾಹಿನಿಗೆ ತರಲು ಶಾಸಕ ಯಶವಂತರಾಯಗೌಡ ಅವರು ಉದ್ದೇಶ ಹೊಂದಿದ್ದಾರೆ ಎಂದು ಹೇಳಿದರು.
ಎಇಇ ಶಿವಾಜಿ ಬನಸೋಡೆ, ಸಹಾಯಕ ಎಂಜಿನಿಯರ ಸಂಜೀವಕುಮಾರ, ಪಿಡಿಒ ಎಸ್ ಡಿ. ಬಿರಾದಾರ, ಶೇಖರ ನಾಯಕ, ಗ್ರಾಪಂ ಅಧ್ಯಕ್ಷ ಸಿದರಾಯಗೌಡ ಬಿರಾದಾರ, ದುಂಡಪ್ಪ ಸುತಾರ, ನೀಲಕಂಠ ರೂಗಿ, ದೇವರಾಜ ದಶವಂತ, ಸತ್ತೆಪ್ಪ ದಶವಂತ, ರಮೇಶ ಸುತಾರ, ಸಂಜು ಪಾಟೀಲ, ಚಿದಾನಂದ ಜೇವೂರ, ಬಬಲಾದ ಗ್ರಾಮ ಆಡಳಿತಾಧಿಕಾರಿ ಭೀಮಾಶಂಕರ ಕನ್ನೂರ ಇತರರಿದ್ದರು.