ವಿಜಯಪುರದ ಕಸಾಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದತ್ತಿನಿಧಿ ಕಾರ್ಯಕ್ರಮದಲ್ಲಿ ಸಿದ್ರಾಮಪ್ಪ ಉಪ್ಪಿನ ಅವರ ಅಲ್ಲಮನೊಂದಿಗೆ ಅನುಸಂಧಾನ ಎಂಬ ಕೃತಿಯನ್ನು ಗಣ್ಯರು ಬಿಡುಗಡೆಗೊಳಿಸಿದರು. ಮಲ್ಲಿಕಾರ್ಜುನ ಮೇತ್ರಿ, ಎಂ.ಎಸ್. ಮಾಗಣಗೇರಿ, ಶಿಲ್ಪಾ ಭಸ್ಮೆ, ಹಾಸಿಂಪೀರ ವಾಲಿಕಾರ ಮತ್ತಿತರರಿದ್ದಾರೆ. 
ವಿಜಯಪುರ

ಕನ್ನಡ ಸಾಹಿತ್ಯದ ಬೆಳವಣಿಗೆಗೆ ಜೈನರ ಕೊಡುಗೆ ಅಪಾರ

ಪ್ರಮುಖ ಮುಖ್ಯಾಂಶಗಳು

  • ದತ್ತಿನಿಧಿಗಳಿಗೆ ಚಾಲನೆ
  • ಕಸಾಪ ನಗರ ಘಟಕಗಳ ಸಂಯುಕ್ತಾಶ್ರಯ

ವಿಜಯಪುರ: 

ಮಹಾಕವಿ ಪಂಪ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ನಾಗಚಂದ್ರ ವಿಜಯಪುರದ ಕವಿ ಅತ್ಯಂತ ಪ್ರಖ್ಯಾತರಾಗಿದ್ದರು. ಅವರ ರಾಮಚಂದ್ರ ಚರಿತ್ರೆ ಹಾಗೂ ಮಲ್ಲಿನಾಥ ಪುರಾಣ ಶ್ರೇಷ್ಠ ಗ್ರಂಥಗಳಾಗಿದ್ದು, ಒಂಬತ್ತರಿಂದ ಹನ್ನೆರಡನೇ ಶತಮಾನದ ಕಾಲವು ಜೈನ ಸಾಹಿತ್ಯಕ್ಕೆ ಸುವರ್ಣಯುಗವಾಗಿತ್ತು. ಅಂದಿನ ರಾಜರು ಜೈನ ಕವಿಗಳಿಗೆ ರಾಜಾಶ್ರಯ ನೀಡಿದ್ದರಿಂದ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಜೈನರು ಕೊಡುಗೆ ಅಪಾರ ಎಂದು ಸಾಹಿತಿ ಮಲ್ಲಿಕಾರ್ಜುನ ಮೇತ್ರಿ ಹೇಳಿದರು.

ನಗರದ ಕಸಾಪ ಸಭಾಂಗಣದಲ್ಲಿ ಜಿಲ್ಲೆ, ತಾಲೂಕು ಹಾಗೂ ಕಸಾಪ ನಗರ ಘಟಕಗಳ ಸಂಯುಕ್ತಾಶ್ರಯದಲ್ಲಿ ವಿವಿಧ ಮಹನೀಯರ ಸ್ಮರಣಾರ್ಥ ಭಾನುವಾರ ಹಮ್ಮಿಕೊಂಡಿದ್ದ ದತ್ತಿನಿಧಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿ, ಚಡಚಣ ಸಂಗಮೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಎಂ.ಎಸ್. ಮಾಗಣಗೇರಿ ಮಾತನಾಡಿ, ಜೈನ ಋಷಿಗಳು ಮತ್ತು ಕವಿಗಳು ಹಳೆಗನ್ನಡ ಪ್ರಮುಖ ಮಹಾಕಾವ್ಯಗಳು, ವ್ಯಾಕರಣ ಗ್ರಂಥಗಳು ಹಾಗೂ ಧಾರ್ಮಿಕ-ಲೌಕಿಕ ಕಾವ್ಯಗಳನ್ನು ರಚಿಸುವ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದರು. ಅಲ್ಲದೆ, ಅದಕ್ಕೊಂದು ಶಾಸೀಯ ಮತ್ತು ಸಾಂಸ್ಕೃತಿಕ ಗಟ್ಟಿತನ ತಂದುಕೊಟ್ಟರು ಎಂದರು.
ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ. ಆನಂದ ಕುಲಕರ್ಣಿ ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿ, ಆದಿಕವಿ ಪಂಪ, ರನ್ನ, ಪೊನ್ನ, ಜನ್ನ, ನಾಗಚಂದ್ರ, ನಯಸೇನ ಹಾಗೂ ಚಾವುಂಡರಾಯ ಮುಂತಾದ ಕವಿಗಳು. ಸಾಹಿತಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು ಎಂದು ತಿಳಿಸಿದರು.
ಆಲಮೇಲದ ಹಿರಿಯ ಸಾಹಿತಿ ಸಿದ್ರಾಮಪ್ಪ ಉಪ್ಪಿನ ಅವರು ಬರೆದ ಅಲ್ಲಮನೊಂದಿಗೆ ಅನುಸಂಧಾನ ಎಂಬ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಸಾಹಿತಿ ಮಮತಾ ಮುಳಸಾವಳಗಿ ಕೃತಿ ಪರಿಚಯಿಸಿದರು. ನಂತರ ಲೇಖಕ ಸಿದ್ರಾಮಪ್ಪ ಉಪ್ಪಿನ  ಮಾತನಾಡಿದರು.
ಭೀಮನಗೌಡ ಬಿರಾದಾರ, ಅಮೀನಸಾಬ ಹಳ್ಳೂರ, ರಿಯಾನಬೇಗಂ ಹಳ್ಳೂರ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ. ಶೃತಿ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಜಿ.ಎಸ್. ಬಳ್ಳೂರ, ಶಶಿಕಲಾ ನಾಯ್ಕಡಿ, ಶಿವಕುಮಾರ ಉಪ್ಪಿನ, ಬಿ,ಬಿ. ಮಾಡ್ಯಾಳ, ರಾಜಣ್ಣ ಬೋವಿ, ಲತಾ ವಾಲಿಕಾರ (ಗುಂಡಿ), ಶರಣಮ್ಮ ಹಾದಿಮನಿ, ಗಂಗಮ್ಮ ರಡ್ಡಿ, ಸಮೃದ್ಧಿ ಆಕಳವಾಡಿ, ಶ್ರೀಕಾಂತ ನಾಡಗೌಡ, ಬಿ.ವಿ. ಪಟ್ಟಣಶೆಟ್ಟಿ, ಎಂ.ಎನ್. ನಿಂಬಾಳ, ಎಲ್.ಬಿ. ಶೇಖ, ಪ್ರದೀಪ ನಾಯ್ಕಡಿ, ಸಹನಾ ಬಿರಾದಾರ, ಲಕ್ಷ್ಮೀ ಬಿರಾದಾರ, ಬಿಕೆ ಶಿವಲೀಲಾ ಮತ್ತಿತರರಿದ್ದರು.