ವಿಜಯಪುರದ ಕಸಾಪ ಸಭಾಂಗಣದಲ್ಲಿ ಹಿಟ್ಟಿನಹಳ್ಳಿಯಲ್ಲಿ ನಡೆಯಲಿರುವ ಎಂಟನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ಸಭೆಯಲ್ಲಿ ಹಾಸಿಂಪೀರ ವಾಲಿಕಾರ ಮಾತನಾಡಿದರು. ಶಿಲ್ಪಾ ಭಸ್ಮೆ, ಅಭಿಷೇಕ ಚಕ್ರವರ್ತಿ, ಆನಂದ ಕುಲಕರ್ಣಿ ಮತ್ತಿತರರಿದ್ದಾರೆ.
ವಿಜಯಪುರ: ನಗರ ಹೊರ ವಲಯದ ಹಿಟ್ಟಿನಹಳ್ಳಿಯಲ್ಲಿ ಜ.20, 21 ರಂದು ನಡೆಯಲಿರುವ ವಿಜಯಪುರ ತಾಲೂಕು ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರನ್ನಾಗಿ ಸಾಹಿತಿ ಸೋಮಲಿಂಗ ಗೆಣ್ಣೂರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನಗರದ ಕಸಾಪ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲೆ ಹಾಗೂ ತಾಲೂಕು ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ.
ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಸರ್ವಾಧ್ಯಕ್ಷರ ಆಯ್ಕೆ ಪಾರದರ್ಶಕತೆಯಿಂದ ನಡೆದಿದೆ. ಕಸಾಪ ವತಿಯಿಂದ ಪ್ರತಿಭಾವಂತ ಹಾಗೂ ಸಾಹಿತ್ಯ ಕೃಷಿಗೈದವರನ್ನು ಗುರುತಿಸಿ, ಗೌರವಿಸುವ ಪ್ರಾತಿನಿಽಕ ಸಂಸ್ಥೆಯಾಗಿದೆ. ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲರೂ ಸೇರಿ ಯಶಸ್ವಿಗೊಳಿಸೋಣ ಎಂದು ತಿಳಿಸಿದರು.
ಕಸಾಪ ಪದಾಽಕಾರಿಗಳಾದ ಶಿಲ್ಪಾ ಭಸ್ಮೆ, ಅಭಿಷೇಕ ಚಕ್ರವರ್ತಿ, ಆನಂದ ಕುಲಕರ್ಣಿ, ಜಗದೀಶ ಬೋಳಸೂರ, ಕಮಲಾ ಮುರಾಳ, ಅರ್ಜುನ ಶಿರೂರ, ಸಂಗನಬಸಪ್ಪ ರೆಡ್ಡಿ ಮತ್ತಿತರರಿದ್ದರು.
ತಾಲೂಕು ಕಸಾಪ ಗೌರವಾಧ್ಯಕ್ಷ ಬಿ.ಎಂ. ಅಜೂರ, ಶೈಲಾ ಬಳಗಾನೂರ, ಸೋಮಲಿಂಗ ಗೆಣ್ಣೂರ ಅವರ ಹೆಸರು ಸೂಚಿಸಿದರು. ತಾಲೂಕು ಕಸಾಪ ಅಧ್ಯಕ್ಷ ಆನಂದ ಕುಲಕರ್ಣಿ, ಮಹಾದೇವಿ ತೆಲಗಿ ಅನುಮೋದಿಸಿದರು.
ರಾಜೇಶ್ವರಿ ಮೋಪಗಾರ, ವಿಜಯಲಕ್ಷಿ÷್ಮ ಹಳಕಟ್ಟಿ, ಆಶಾ ಬಿರಾದಾರ, ಪ್ರೇಮಾ ಬ್ಯಾಕೋಡ, ಜಿ.ಎಸ್. ಬಳ್ಳೂರ, ಸಂಗನಗೌಡ ಬಿರಾದಾರ, ಮುದಸ್ಸರ ವಾಲಿಕಾರ, ಪೀರಸಾಬ ವಾಲಿಕಾರ, ಸವಿತಾ ದೊಡಮನಿ, ನೀಲಾ ಬಗಲಿ, ಕಮಲಾ ಬಿರಾದಾರ, ಜ್ಯೋತಿ ಪಡನಾಡ ಮತ್ತಿತರರಿದ್ದರು.
ಸುಶೀಲಾಬಾಯಿ ತಳೇವಾಡ ಹಾಗೂ ಮಹಾಂತಮ್ಮ ಇಂಡಿ ಪ್ರಾರ್ಥಿಸಿದರು. ರಿಯಾಜ್ ಪಿಂಜಾರ ನಿರೂಪಿಸಿದರು. ಆನಂದ ಕುಲಕರ್ಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶೈಲಾ ಬಳಗಾನೂರ ವಂದಿಸಿದರು.