ವಿಜಯಪುರದ ಕಸಾಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದತ್ತಿಗೋಷ್ಠಿಯನ್ನು ಗಣ್ಯರು ಉದ್ಘಾಟಿಸಿದರು. ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ರಾಜ್ಯಪಾಲ ಚವಾಣ್ ಶಿವಲೀಲಾ ಮುರಾಳ, ಮತ್ತಿತರರಿದ್ದಾರೆ. 
ವಿಜಯಪುರ

ಕಸಾಪ ಕಾರ್ಯ ಶ್ಲಾಘನೀಯ

ಗಿರೀಶ ಸಗರ
ವಿಜಯಪುರ: ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆಯಾಗಿದ್ದು, ಕನ್ನಡಿಗರ ಸಾಂöಕ ಶಕ್ತಿಯ ಪ್ರತಿರೂಪದಂತಿದೆ.
ಸ್ಥಳೀಯ ಕಸಾಪ ಜಿಲ್ಲಾ ಘಟಕವೂ ಅತ್ಯಂತ ಪ್ರಾಂಜಲ ಮನಸ್ಸಿನಿಂದ ಜ್ಞಾನ ದಾಸೋಹ ಕಾರ್ಯದ ಮೂಲಕ ನಿರಂತರವಾಗಿ ದತ್ತಿಗೋಷ್ಠಿ ಹಮ್ಮಿಕೊಳ್ಳುವ ಮೂಲಕ ಈಡೀ ಕನ್ನಡ ನಾಡಿಗೆ ಚಿರಪರಿಚಿತವಾಗಿದೆ ಎಂದು ಜಿ.ಪಂ. ಮಾಜಿ ಸದಸ್ಯ ರಾಜ್ಯಪಾಲ ಚವಾಣ್ ಹೇಳಿದರು.
ನಗರದ ಕಸಾಪ ಸಭಾಂಗಣದಲ್ಲಿ ವಿವಿಧ ಮಹನೀಯರ ಸ್ಮರಣಾರ್ಥ ಭಾನುವಾರ ಹಮ್ಮಿಕೊಂಡಿದ್ದ ದತ್ತಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಜಿಲ್ಲೆಯಲ್ಲಿ ಕಸಾಪ ಅತ್ಯಂತ ಕ್ರಿಯಾಶೀಲವಾಗಿ ಸಾಹಿತ್ಯದ ಚಟುವಟಿಕೆಗಳನ್ನು ಏರ್ಪಡಿಸುವ ಮೂಲಕ ನಾಡು-ನುಡಿಯ ಗೌರವ ಹೆಚ್ಚಿಸುತ್ತಿರುವ ಕಾರ್ಯ ಶ್ಲಾಘನೀಯ. ವಿಶ್ವ ತಾಯಂದಿರ ದಿನಾಚರಣೆ ನಿಮಿತ್ತ ನಡೆದ ಇಂದಿನ ದತ್ತಿಗೋಷ್ಠಿ ಅತ್ಯಂತ ವೈವಿಧ್ಯಮಯವಾಗಿ ಮೂಡಿಬಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಚಡಚಣ ಸಂಗಮೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎಂ.ಎಸ್. ಮಾಗಣಗೇರಿ ಮಾತನಾಡಿ, ದತ್ತಿದಾನಿಗಳ ತ್ಯಾಗದ -Àಲವಾಗಿ ಇಟ್ಟ ದತ್ತಿಗೆ ಪ್ರತಿವಾರವೂ ಸಹ ನಾವು ಸಾಕ್ಷಿಯಾಗಿ ಜÁ್ಞನ ದಾಸೋಹ ಪಡೆದುಕೊಳ್ಳುವಲ್ಲಿ ನಿಜವಾಗಿಯೂ ಕನ್ನಡ ಸಾಹಿತ್ಯ ಪರಿಷತ್ತಿನ ಪಾತ್ರ ಅನುಪಮವಾದದು ಎಂದು ತಿಳಿಸಿದರು.
ಅರ್ಜುಣಗಿ ಸರ್ಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕಿ ಸವಿತಾ ಝಳಕಿ ವಿಶ್ವ ತಾಯಂದಿರ ದಿನಾಚರಣೆ ಕುರಿತು ವಿಶೇಷ ಉಪನ್ಯಾಸ ನೀಡಿ, ಉಪನಿಷತ್ತಿನ ವಾಣಿಯಂತೆ ತಾಯಿಯನ್ನು ದೇವರೆಂದು ಆರಾಽಸಿ, ಪೂಜಿಸುವ ಸನಾತನ ಸಂಸ್ಕೃತಿ ನಮ್ಮದು. ನಮ್ಮೆಲ್ಲರ ಸಹನಾಮೂರ್ತಿಯೇ ತಾಯಿ. ಬತ್ತಲಾರದ ಗಂಗೆಯAತೆ ತಾಯಿಯ ಪ್ರೀತಿ ಎಂದಿಗೂ ಕಡಿಮೆಯಾಗಲು ಸಾಧ್ಯವಿಲ್ಲ ಎಂದರು.
ತಾಳಿಕೋಟೆಯ ಜಾನಪದ ಸಾಹಿತಿ ಶಿವಲೀಲಾ ಮುರಾಳ ಜನಪದ ಸಾಹಿತ್ಯದಲ್ಲಿ ಗರತಿಯ ಜೀವನ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ವಿಕಾಸ ಖೇಡ, ಎಂ.ಡಿ. ಹೆಬ್ಬಿ, ಶಿವಕುಮಾರ ಬಾಗಿ, ಶಶಿಕಲಾ ಸ್ಥಾವರಮಠ, ಅರ್ಜುನ ಶಿರೂರ ಮಾತನಾಡಿದರು. ಸುನಂದಾ ಕೋರಿ ಪ್ರಾರ್ಥಿಸಿದರು. ಮಾಧವ ಗುಡಿ ಸ್ವಾಗತಿಸಿದರು. ಅಭಿಷೇಕ ಚಕ್ರವರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಶಿಕಲಾ ನಾಯ್ಕೋಡಿ ಗೀತ ಗಾಯನ ಮಾಡಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಶೋಭಾ ಬಡಿಗೇರ ವಂದಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಜಿ.ಎಸ್. ಬಳ್ಳೂರ, ವಿಜಯಲಕ್ಷಿ÷್ಮ ಹಳಕಟ್ಟಿ, ಭಾಗೀರಥಿ ಸಿಂಧೆ, ಬಿ.ಎಂ. ಆಜೂರ, ಮಹಾದೇವ ಮೋಪಗಾರ, ಕೆ.ಎಸ್. ಹಣಮಾಣಿ, ಶ್ರೀಕಾಂತ ನಾಡಗೌಡ, ಸುಜ್ಞಾನಿ ಪಾಟೀಲ, ಬಸನಗೌಡ ಬಿರಾದಾರ, ಆಶಾ ಬಿರಾದಾರ, ಪರಮಾನಂದ ದೇವಣಗಾಂವ, ಮಲ್ಲಿಕಾರ್ಜುನ ಕೆಳಗಡೆ, ಬಿ.ಎಸ್. ಕೋನರೆಡ್ಡಿ, ಮಹಾದೇವಿ ತೆಲಗಿ, ಮಲ್ಲಮ್ಮ ಹರಿಜನ, ಮುತ್ತವ್ವ ಹರಿಜನ, ಸವಿತಾ ಹಾದಿಮನಿ, ಟಿ.ಸಿ. ನಾಟೀಕಾರ, ಸಿದ್ದು ಬೀಳಗಿ, ಅನಸೂಯಾ ಬಡಿಗೇರ, ಮಹಾನಂದಾ ಕಾಂಬಳೆ, ಶೇಖವ್ವ ಹರಿಜನ, ಪ್ರದೀಪ ಕತಕನಹಳ್ಳಿ ಮತ್ತಿತರರಿದ್ದರು.