ವಿಜಯಪುರ ನಗರದಲ್ಲಿ ‘ಬಿಜಾಪುರ, ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳ’ದಂಗವಾಗಿ ನಡೆದ ಶಿಕ್ಷಕ ದಂಪತಿ ಜಾಥಾ ಗಮನ ಸೆಳೆಯಿತು. 
ವಿಜಯಪುರ

ಗುಮ್ಮಟ ನಗರಿಯಲ್ಲಿ ಗಮನ ಸೆಳೆದ ಶಿಕ್ಷಕ ದಂಪತಿ ಜಾಥಾ, ಜ್ಯೋತಿಬಾ ಫುಲೆ ಭಾವಚಿತ್ರ ಪ್ರದರ್ಶನ

ಪ್ರಮುಖ ಮುಖ್ಯಾಂಶಗಳು

  • ರಾಜ್ಯಮಟ್ಟದ ಬೃಹತ್ ಪುಸ್ತಕ ಮೇಳ
  • ಡಾ.ಅಂಬೇಡ್ಕರ್ ಜಯಂತಿ ಹಿನ್ನೆಲೆ
  • ಮೇ ಸಾಹಿತ್ಯ ಬಳಗದ ಸಹಯೋಗ
  • ದಲಿತ-ಪ್ರಗತಿಪರ ಸಂಘಟನೆಗಳ ಸಾಥ್
ವಿಜಯಪುರ: ನಗರದ ದರಬಾರ್ ಪ್ರೌಢ ಶಾಲೆ ಮೈದಾನದಲ್ಲಿ ಮೇ ಸಾಹಿತ್ಯ ಮೇಳ ವಿಜಯಪುರ ಬಳಗ, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ‘ಬಿಜಾಪುರ, ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳ’ದ ಎರಡನೇ ದಿನವಾದ ಶನಿವಾರದಂದು ಶಿಕ್ಷಕ ದಂಪತಿ ಮಹಾತ್ಮ ಜ್ಯೋತಿಬಾ ಫುಲೆ ಭಾವಚಿತ್ರದೊಂದಿಗೆ ಜಾಥಾ ನಡೆಸಿದರು.
ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಬಿ.ಎಚ್. ನಾಡಗಿರಿ, ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಹೊಸಮನಿ, ಹೊನಮಲ್ಲಗೌಡ ಸಾರವಾಡ, ಎಸ್.ಎಂ. ಡೋಣಿ, ಆಶಾ ಕಟ್ಟಿಮನಿ, ನೀಲಾಂಬಿಕಾ ಬಿರಾದಾರ, ರಶ್ಮಿ ಗುಣಕಿ, ವಿಜಯಶ್ರೀ ಬಿಜಾಪುರ, ಹಣಮಂತ ಮಮದಾಪುರ, ಸಲೀಂ ಕಲಾದಗಿ ಜಾಥಾಕ್ಕೆ ಚಾಲನೆ ನೀಡಿದರು.
ಜಾಥಾದಲ್ಲಿ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಮತ್ತು ದೇಶದ ಮೊದಲ ಶಿಕ್ಷಕ ದಂಪತಿ ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾ ಫುಲೆ ದಂಪತಿಗೆ ಜಯಘೋಷ ಮೊಳಗಿದವು.
ಶಿಕ್ಷಕ ದಂಪತಿ ದ್ರೌಪತಿ ನಾಗರಾಜ ಹೊನಸೂರೆ, ಶೋಭಾ ಮಲ್ಲಿಕಾರ್ಜುನ ಕನ್ನೂರ, ಸಾವಿತ್ರಿ ದೇವರಾಜ ಶೃಂಗೇರಿ, ಸಾವಿತ್ರಿ ಗಣಪತಿ ಚವಾಣ್, ರೇಣುಕಾ ಶಿವಪ್ಪ ಚಲವಾದಿ, ಜಯಶ್ರೀ ಸಿದ್ರಾಮಪ್ಪ ತದ್ದೇವಾಡಿ, ನೇತ್ರಾವತಿ ವಿಶ್ವನಾಥ ಮೇತ್ರಿ, ಶಿಲ್ಪಶ್ರೀ ನಿಜು ಮೇಲಿನಕೇರಿ, ವೈಶಾಲಿ ವಿಜಯಾನಂದ ಮುದ್ದೇಬಿಹಾಳ, ವಿಜಯಲಕ್ಷ್ಮಿ ಜಗದೀಶ ಹುಲ್ಯಾಳ, ಎಲ್.ಟಿ. ಕೊಣ್ಣೂರ, ಎಸ್.ಎ. ಬಿರಾದಾರ, ಎಸ್.ಎಸ್. ಕುಲಕರ್ಣಿ, ಕೆ.ಎಚ್. ಪೂಜಾರಿ ಭಾಗವಹಿಸಿದ್ದರು.
ಬಸವರಾಜ ಸೂಳಿಬಾವಿ, ಅನಿಲ ಹೊಸಮನಿ, ಸುರೇಶ ಘೊಣಸಗಿ, ಚೆನ್ನು ಕಟ್ಟಿಮನಿ, ಸುರೇಶ ಬಿಜಾಪುರ, ವೈ.ಎಸ್. ಗುಣಕಿ, ವೈ.ಎಚ್. ಲಂಬು, ದೊಡ್ಡಣ್ಣ ಭಜಂತ್ರಿ, ಅನಿಲ ಇಕ್ಕಡೆ , ಚಂದ್ರಶೇಖರ ಹೊಸಮನಿ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ, ಗುರುರಾಜ ಹಂದ್ರಾಳ, ಶರಣು ಕಿರಣಗಿ, ಸಂಘರ್ಷ ಹೊಸಮನಿ ಇತರರಿದ್ದರು.