ವಿಜಯಪುರ ನಗರದ ಬಿಜ್ಜರಗಿ ಶೋರೂಮಿನಲ್ಲಿ ಟಾಟಾ ಸಿಯೆರಾ ಇವಿ ಕಾರ್‌ನ್ನು ಗಣ್ಯರು ಬಿಡುಗಡೆಗೊಳಿಸಿದರು. ರಮೇಶಚಂದ್ರ ಟಿ. ಉತ್ತರಕರ, ರಾಜು ಬಿಜ್ಜರಗಿ, ಅಖಿಲೇಶ ಬಿಜ್ಜರಗಿ ಮತ್ತಿತರರಿದ್ದಾರೆ. 
ವಿಜಯಪುರ

ಟಾಟಾ ಸಿಯೆರಾ ಇವಿ ವಾಹನ ಮಾರುಕಟ್ಟೆಗೆ ಬಿಡುಗಡೆ

ವಿಜಯಪುರ : ಬಹುನಿರೀಕ್ಷಿತ ಹಾಗೂ ಹೊಸ ತಲೆಮಾರಿನ ಪ್ರೀಮಿಯಂ ಇಲೆಕ್ಟಿçಕ್ ಕಾರು ಟಾಟಾ ಸಿಯೆರಾ ಇವಿ ವಾಹನವನ್ನು ಬಿಜ್ಜರಗಿ ಗ್ರೂಪ್ ಆ-ï ಕಂಪನೀಸ್ ಅತ್ಯಂತ ಯಶಸ್ವಿ ಮತ್ತು ಭವ್ಯ ರೋಡ್‌ಶೋ ಮೂಲಕ ಅಽಕೃತವಾಗಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.

ಭಾರತೀಯ ವಾಯುಪಡೆಯ ನಿವೃತ್ತ ಅಽಕಾರಿ ರಮೇಶಚಂದ್ರ ಟಿ. ಉತ್ತರಕರ ವಾಹನ ಬಿಡುಗಡೆಗೊಳಿಸಿದರು. ಸಂಸ್ಥೆಯ ಮಾಲೀಕರಾದ ರಾಜು ಬಿಜ್ಜರಗಿ ಮತ್ತು ಅಖಿಲೇಶ ಬಿಜ್ಜರಗಿ ಉಪಸ್ಥಿತರಿದ್ದರು.
ಟಾಟಾ ಮೋಟಾರ್ಸ್ನ ಭವಿಷ್ಯದ ಇಲೆಕ್ಟಿçಕ್ ಸಾರಿಗೆಯ ದೂರದೃಷ್ಟಿಯನ್ನು ಬಿಂಬಿಸುವ ಈ ಸಿಯೆರಾ ಇವಿ ವಾಹನ ಪ್ರೀಮಿಯಂ ಮತ್ತು ಪರಿಸರಸ್ನೇಹಿ ಎಸ್‌ಯುವಿ ವಿಭಾಗದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದೆ.
ಕಾರಿನ ವಿನ್ಯಾಸ, ತಂತ್ರe್ಞÁನ ಮತ್ತು ಅತ್ಯುತ್ತಮ ಕಾರ್ಯಕ್ಷಮತೆಯ ಮೈಲಿಗಲಾಗಿದೆ. ಹೊಸ ತಲೆಮಾರಿನ ಟಾಟಾ ಸಿಯೆರಾ ಇವಿ ತನ್ನ ಸಾಂಪ್ರದಾಯಿಕ ಲೆಜೆಂಡರಿ ವಿನ್ಯಾಸದೊಂದಿಗೆ ಅಲ್ಟಾç-ಮಾಡರ್ನ್ ತಂತ್ರe್ಞÁನವನ್ನು ಮೇಳೈಸಿದ್ದು, ಗ್ರಾಹಕರಿಗೆ ಅದ್ಭುತ ಚಾಲನಾ ಅನುಭವವನ್ನು ನೀಡುತ್ತದೆ.
ಆಕರ್ಷಕ ವಿನ್ಯಾಸ ಮತ್ತು ಆಡಿಯೋ : ಸಿಯೆರಾ ಇವಿ ವಾಹನದಲ್ಲಿ ಹೊರೈಜನ್ ವ್ಯೂ ಟ್ರಿಪಲï ಸ್ಕಿçÃನ್ ಇನೋಟೈನ್‌ಮೆಂಟ್ ಮತ್ತು ಡಾಲ್ಬಿ ಅಟ್ಮಾಸ್ ಸಹಿತ 12 ಜೆಬಿಎಲï ಬ್ಲ್ಯಾಕ್ ಸ್ಪೀಕರ್‌ಗಳು ಹಾಗೂ ಸೋನಿಕ್ಸ್ಹಾ-್ಟï ಸೌಂಡ್‌ಬಾರ್ ಒಳಗೊಂಡ `ಥಿಯೇಟರ್ ಪ್ರೋ' ಧ್ವನಿ ವ್ಯವಸ್ಥೆ ಹೊಂದಿದೆ.
ಬ್ಯಾಟರಿ ಪ್ಯಾಕ್: ಪ್ರತಿ ಬಾರಿ ಚಾರ್ಜ್ ಮಾಡಿದಾಗ ಗರಿಷ್ಠ 535 ಕಿಮೀ.ವರೆಗೆ ಮೈಲೇಜ್ ನೀಡುತ್ತದೆ.