ಸಿಂದಗಿ ನಗರದ ಪ್ರೇರಣಾ ಪಬ್ಲಿಕ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಶುಭಕೋರುವ ಸಮಾರಂಭವನ್ನು ಆಲಮೇಲದ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು ಉದ್ಘಾಟಿಸಿದರು. ಡಾ. ಬಿ.ಜಿ. ಸಜ್ಜನ, ಎಂ.ಎ. ಜುಮನಾಳ, ಎಂ.ಸಿ. ಸಿಂದಗಿ ಮತ್ತಿತರರಿದ್ದರು.
ಸಿಂದಗಿ: ವಿದ್ಯಾರ್ಥಿಗಳು ತಮ್ಮ ಕರ...ಉರ...ಶಿರ ಶುದ್ಧವಾಗಿಟ್ಟುಕೊಂಡು ಸಮಾಜಕ್ಕೆ ದೊಡ್ಡ ಕೊಡುಗೆ ನೀಡಬೇಕು ಎಂದು ಆಲಮೇಲ ವಿರಕ್ತಮಠದ ಮ.ನಿ.ಪ್ರ. ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮೀಜಿ ಹೇಳಿದರು.
ನಗರದ ಹೊರವಲಯದಲ್ಲಿನ ಪ್ರೇರಣಾ ಪಬ್ಲಿಕ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಎಸ್‌ಎಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ವಿದ್ಯೆ ಆರಿಯಬೇಕು, ಮಾದಕ ವ್ಯಸನ ವಿದ್ಯಾರ್ಥಿಗಳಾಬೇಡಿ ಎಂದು ಸಲಹೆ ನೀಡಿದರು.
ಗ್ರಾಮೀಣಾಭಿವೃದ್ಧಿ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಽಕಾರಿ ಡಾ. ಬಿ.ಜಿ. ಸಜ್ಜನ ಮಾತನಾಡಿ, ವಿಜಯಪುರದ ಅಂಜುಮನ್ ಬಾಲಕಿಯರ ಪಪೂ ಕಾಲೇಜಿನ ಪ್ರಾಚಾರ್ಯ ಎಂ.ಎ. ಜುಮನಾಳ ಮಾತನಾಡಿ, ವಿದ್ಯೆ ಕಲಿಸಿದ ಗುರು, ಹೆತ್ತ ತಂದೆ-ತಾಯಿ, ಧರ್ಮಗುರುಗಳನ್ನು ಎಂದಿಗೂ ಮರೆಯಬಾರದು. ಶ್ರಮವಹಿಸಿ ವಿದ್ಯಾರ್ಜನೆ ಮಾಡಿ, ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಿನ ಯಶಸ್ಸು ತಮ್ಮದಾಗಿಸಿಕೊಳ್ಳಬೇಕು ಎಂದರು.
ಸAಸ್ಥೆ ಅಧ್ಯಕ್ಷರು ಆರ್.ಡಿ. ಕುಲಕರ್ಣಿ ಮತ್ತಿತರರಿದ್ದರು.