ವಿಜಯಪುರದ ಎಕ್ಸಲಂಟ್ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಪ್ರಮಾಣ ವಚನ ಸಮಾಂಭ ನಡೆಯಿತು. ಶಿವಾನಂದ ಚವಾಣ, ಎಂ.ಐ. ಬಿರಾದಾರ, ರಾಜಶೇಖರ ಕೌಲಗಿ ಮತ್ತಿತರರಿದ್ದಾರೆ.
ವಿಜಯಪುರ: ಪ್ರಪಂಚದ¯್ಲೆÃ ಶ್ರೇಷ್ಠ ಸಂವಿಧಾನ ನಮ್ಮದು. ಸಂವಿಧಾನವು ನಮ್ಮ ನಾಯಕರನ್ನು ಆಯ್ಕೆ ಮಾಡುವ ಹಕ್ಕನ್ನು ಭಾರತದ ದೇಶದ ಪ್ರತಿಯೊಬ್ಬರಿಗೂ ನೀಡಿದೆ. ಅಂತಹ ಅಪರೂಪದ ಅವಕಾಶ ನಾವೆಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನ್ಯಾಯವಾದಿ ಶಿವಾನಂದ ಚವಾಣ್ ಹೇಳಿದರು.
ಇಲ್ಲಿನ ಆದರ್ಶನಗರ ಬಡಾವಣೆಯ ಎಕ್ಸಲಂಟ್ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ಪ್ರಮಾಣ ವಚನ ಸಮಾಂಭದಲ್ಲಿ ಮಾತನಾಡಿದ ಅವರು, ಆಯ್ಕೆಯಾದ ವಿದ್ಯಾರ್ಥಿಗಳು ತಾಳ್ಮೆ ಮತ್ತು ಶಿಸ್ತು ಅಳವಡಿಸಿಕೊಳ್ಳುವುದು ಅತ್ಯವಶ್ಯಕ ಎಂದರು.
ಮುಖ್ಯ ಶಿಕ್ಷಕ ಎಂ.ಐ. ಬಿರಾದಾರ ಮಾತನಾಡಿ, ಮತದಾನ ಪ್ರತಿಯೊಬ್ಬ ಪ್ರe್ಞÁವಂತ ಪ್ರಜೆಯ ಪಾಲಿನ ಆದ್ಯ ಕರ್ತವ್ಯ. ಸಂವಿಧಾನವು ನಮಗೆ ನೀಡಿದ ಪವಿತ್ರವಾದ ಹಕ್ಕು ಚಲಾಯಿಸಲು ಯಾವುದೆ ಪ್ರಭಾವ ಮತ್ತು -Àಲಾಪೇಕ್ಷೆಗೆ ಒಳಗಾಗಬಾರದು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ನಿರ್ದೇಶಕ ರಾಜಶೇಖರ ಕೌಲಗಿ ಮಾತನಾಡಿ, ಶಾಲಾ ಸಂಸತ್ತಿನ ಚುಣಾವಣೆಗಳನ್ನು ನಡೆಸುವದರಿಂದ ಸಹಜವಾಗಿ ವಿದ್ಯಾರ್ಥಿಗಳಲ್ಲಿ ಚುನಾವಣಾ ವ್ಯವಸ್ಥೇಯ ಕಲ್ಪನೆ ಸಾಕಾರ ಗೊಳ್ಳುತ್ತದೆ. ಅಲ್ಲದೆ, ವಿದ್ಯಾರ್ಥಿಗಳಿಗೆ ಜವಾಬ್ದಾರಿ ನೀಡುವದರಿಂದ ಅವರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವ ಉz್ದÉಶವು ಈಡೇರುತ್ತದೆ ಎಂದು ತಿಳಿಸಿದರು.
ಎಂ.ಎಚ್. ಹುಗ್ಗೇನವರ ಚುನಾವಣೆಯ ವ್ಯವಸ್ಥೆಯ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು. ಲಕ್ಷಿ÷್ಮÃ ಬಿರಾದಾರ, ಜಯಶ್ರೀ ಗುಡ್ಡದ, ಎಸ್.ಎಸ್. ಅವರಾಽ ಪಿ.ಬಿ. ಖೇಡಗಿ ಉಪಸ್ಥಿತಿ ವಹಿಸಿದ್ದರು.
ವಿದ್ಯಾರ್ಥಿ ಶ್ರೇಯಸ ಸಾವಳಗಿ ಪ್ರಧಾನಿಯಾಗಿ, ಸ್ವಾತಿ ಗದ್ದನಕೇರಿ (ಉಪ ಪ್ರಧಾನಿ) ಸಂಜೀವಿನಿ ಮುರುಡಿ (ಶಿಕ್ಷಣ ಮತ್ತು ಸಂಸ್ಕೃತಿ ಮಂತ್ರಿ) ಅಲೋಕ ಬಿರಾದಾರ (ಸ್ವಚ್ಚತಾ ಮಂತ್ರಿ) ರೂಪಾಲಿ ರಾಠೋಡ (ಪ್ರವಾಸ ಮಂತ್ರಿ), ಚಿನ್ಮಯ ಬಂಡಿ (ಶಿಸ್ತುಪಾಲನಾ ಮಂತ್ರಿ) ಹಾಗೂ ಅಭಿಷೇಕ ಬಳ್ಳೋಳ್ಳಿ (ಕ್ರೀಡಾ ಮತ್ತು ಆರೋಗ್ಯ ಮಂತ್ರಿ) ಆಗಿ ಪ್ರಮಾಣ ವಚನ ಸ್ವಿಕರಿಸಿದರು.