ರೇವತಗಾಂವ ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೫ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ನೆರವೇರಿತು. ಸಿಆರ್‌ಪಿ ಪ್ರಕಾಶ, ಶಶಿಕಲಾ ಪತ್ತಾರ, ಗೀತಾ ದಾಬೆ ಮತ್ತಿತರರಿದ್ದರು. 
ವಿಜಯಪುರ

ವಿದ್ಯಾರ್ಥಿಗಳು ದಿನ ಪತ್ರಿಕೆ ಓದಿ

ರೇವತಗಾಂವ: ಸ್ಪರ್ಧಾತ್ಮಕ ಪರೀಕ್ಷೆಗಳು ನಮ್ಮ ಬದುಕನ್ನು ಬದಲಿಸುತ್ತವೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳು ನಿಗದಿತ ವಿಷಯಗಳ ಜತೆಗೆ ನಿಯಮಿತವಾಗಿ ದಿನ ಪತ್ರಿಕೆಗಳನ್ನು ಓದಬೇಕು. ನಿಮ್ಮ ಶಿಕ್ಷಕರಿಂದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೂ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಶ್ಲಾಘನೀಯ ಎಂದು ಸಿಆರ್‌ಪಿ ಪ್ರಕಾಶ ತಳವಾರ ಹೇಳಿದರು.
ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ ೫ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದು ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಅನಿವಾರ್ಯವಾಗಿದ್ದು, ವಿದ್ಯಾರ್ಥಿಗಳು ತಮ್ಮ ದೈನಂದಿನ ಪಠ್ಯಗಳ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಸದಾಶಿವ ಪೂಜಾರಿ ಶಿಕ್ಷಕರ ಪರಿಶ್ರಮ, ಅವರ ಕೊಡುಗೆ ಅಪಾರವಾಗಿದ್ದು. ಅಂಥಹ ಶಿಕ್ಷಕರನ್ನು ಪಡೆದ ತಾವುಗಳು ಭಾಗ್ಯವಂತರು ಎಂದರು.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ಅಂಜಲಿ ದಾಭೆ, ಸ್ವಾತಿ ದಾಭೆ, ಸ್ವಾತಿ ಬೆಳ್ಳನವರ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.
ಶಿಕ್ಷಕಿ ಶಶಿಕಲಾ ಪತ್ತಾರ, ಪ್ರೇಮಾ ಧಾಬೆ, ಗೀತಾ ದಾಬೆ, ಎಸ್.ಎಲ್.ಕೊಂಕಣಿ, ಎಂ.ಆರ್.ಹಾವಿನಾಳ, ಎಸ್.ಎ.ಮಾಳಿ, ಮರೆಪ್ಪ ದಾಭೆ, ಮಂಜು ಮತ್ತಿತರರಿದ್ದರು.