ಸಿಂದಗಿ ನಗರದ ಎಚ್.ಜಿ. ಕಾಲೇಜಿನಲ್ಲಿ ಶಾಸಕ ಅಶೋಕ ಮನಗೂಳಿ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ನಿರ್ದೇಶಕ ಬಿ.ಜಿ. ನೆಲ್ಲಗಿ, ಪ್ರಾಚಾರ್ಯ ಎ.ಆರ್. ಹೆಗ್ಗನದೊಡ್ಡಿ, ಎಸ್.ಎ. ಪಾಟೀಲ, ಎಂ.ಎನ್. ಅಜ್ಜಪ್ಪ, ಎಸ್.ಪಿ. ಬಿರಾದಾರ, ಎ.ಎ. ಹಾಲಪ್ಪನವರ ಇತರರಿದ್ದರು.
- ಶಾಸಕ ಅಶೋಕ ಮನಗೂಳಿ
- ವಿದ್ಯಾರ್ಥಿಗಳನ್ನು ಸನ್ಮಾನಿಸಿ,
ಸಿಂದಗಿ: ಶಿಕ್ಷಣದ ಜತೆಗೆ ಕೌಶಲ ಮುಖ್ಯ. ಕಲಿಕೆಯೊಂದಿಗೆ ಕೌಶಲವನ್ನು ರೂಢಿಸಿಕೊಳ್ಳಬೇಕು. ವೈಜ್ಞಾನಿಕವಾಗಿ ಮುಂದುವರಿಯುತ್ತಿರುವ ಶಿಕ್ಷಣದ ಗುಣಮಟ್ಟ ಸುಧಾರಿಸಿದರೂ, ಸಂಸ್ಕಾರದ ಕೊರತೆ ಕಾಣುತ್ತಿದೆ. ಭವಿಷ್ಯದ ಭಾರತದಲ್ಲಿ ವಿದ್ಯಾರ್ಥಿಗಳಿಗೆ ಕೌಶಲ ಅತ್ಯಗತ್ಯವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ನಗರದ ತಾಶಿಪ್ರ ಮಂಡಳಿಯ ಎಚ್.ಜಿ. ಪದವಿಪೂರ್ವ ಕಾಲೇಜಿನ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಅವರು ಮಾತನಾಡಿದರು. ಓದುವ ಹಂತದಲ್ಲಿಯೇ ವಿದ್ಯಾರ್ಥಿಗಳು, ಏಕಾಗ್ರತೆ, ದೃಢ ವಿಶ್ವಾಸದ ಜತೆಗೆ ಓದು ಪ್ರಮುಖ ಹವ್ಯಾಸವಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದರು.
ಹೆಚ್ಚು ಅಂಕಗಳಿಸಿದ ಕಾಲೇಜಿನ ವಿದ್ಯಾರ್ಥಿನಿ ಭಾಗ್ಯಶ್ರೀ ಬಾಗೇವಾಡಿ, ಲಕ್ಷ್ಮೀ ಸಾಲೋಡಗಿ, ಪೃಥ್ವಿ ಹಿರೇಮಠ, ಅಂಬಿಕಾ ಬಿರಾದಾರ, ನೀಲಕಂಠ ಬಿರಾದಾರ, ಭಾಗ್ಯಜ್ಯೋತಿ ನಾಯ್ಕೋಡಿ, ಪ್ರಕಾಶ ತಿಳಗೂಳ ಸೇರಿ ಸುಮಾರು 35ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಶಾಸಕ ಮನಗೂಳಿ ಸನ್ಮಾನಿಸಿದರು. ಸಂಸ್ಥೆ ನಿರ್ದೇಶಕ ಬಿ.ಜಿ. ನೆಲ್ಲಗಿ, ಪ್ರಾಚಾರ್ಯ ಎ.ಆರ್. ಹೆಗ್ಗನದೊಡ್ಡಿ, ಡಾ. ಅಂಬರೀಶ ಬಿರಾದಾರ, ಎಸ್.ಎ. ಪಾಟೀಲ, ಎಂ.ಎನ್. ಅಜ್ಜಪ್ಪ, ಎಸ್.ಪಿ. ಬಿರಾದಾರ, ಎ.ಎ. ಹಾಲಪ್ಪನವರ, ಮುಕ್ತಾಯಕ್ಕ ಕತ್ತಿ, ಎ.ಆರ್. ಸಿಂದಗಿಕರ, ಸಿದ್ದಲಿಂಗ ಕಿಣಗಿ, ಸತೀಶ ಬಸರಕೋಡ, ಡಾ. ಎಸ್.ಎಸ್. ಚವಾಣ್, ಜ್ಯೋತಿ ಚೆನ್ನೂರ, ಎಸ್.ಎಸ್. ಪಾಟೀಲ, ವಿದ್ಯಾರ್ಥಿಗಳ ಪಾಲಕರು, ಸಿಬ್ಬಂದಿ ಇದ್ದರು.