ಇಂಡಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಿಡ್ನಿ ದಿನ ಆಚರಿಸಲಾಯಿತು.
ಇಂಡಿ: ಆರೋಗ್ಯವಂತ ಶರೀರಕ್ಕೆ ಆರೋಗ್ಯಯುತ ಆಹಾರ ಸೇವನೆ ಅತೀ ಮುಖ್ಯ. ಕೆಲಸದ ಒತ್ತಡದಲ್ಲಿ ಸರಿಯಾದ ಸಮಯಕ್ಕೆ ಊಟ-ತಿಂಡಿ ಮಾಡದೆ ಇದ್ದರೆ ಅನಾರೋಗ್ಯಕ್ಕೆ ತುತ್ತಾಗುವುದು ಅನಿವಾರ್ಯವಾಗುತ್ತದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ರಾಜೇಶ ಕೋಳೆಕರ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಿಡ್ನಿ ವಿಶ್ವ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಧೂಮಪಾನ, ಅಽಕ ಸಕ್ಕರೆ ಸೇವನೆ, ಅಧಿಕ ಉಪ್ಪಿನಾಂಶ ಆಹಾರ ಸೇವನೆ, ಜಡ ಜೀವನಶೈಲಿ, ಅಽಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಗಣನೀಯ ಏರಿಕೆ ಕಿಡ್ನಿ ಸಮಸ್ಯೆಗೆ ಪ್ರಮುಖ ಕಾರಣ ಎಂದರು.
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ರಾಮಕೃಷ್ಣ ಇಂಗಳೆ ಮಾತನಾಡಿ, ಹೃದಯ ಮತ್ತಿತರ ಅಂಗಾಂಗಗಳ ಬಗ್ಗೆ ಕಾಳಜಿ ತೋರುತ್ತೇವೆ. ಆದರೆ, ಕಿಡ್ನಿಯ ಆರೋಗ್ಯವನ್ನು ನಿರ್ಲಕ್ಷಿಸುತ್ತೇವೆ. ಕಿಡ್ನಿಯ ಆರೋಗ್ಯದ ಬಗ್ಗೆ ಅರಿವು ಅಗತ್ಯ. ಕಿಡ್ನಿ ದಾನದ ಬಗ್ಗೆ ತಿಳಿವಳಿಕೆ ಹೊಂದಿರಬೇಕು ಮತ್ತು ಅದರ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ಡಾ. ಸಂತೋಷ ಪವಾರ, ಡಾ. ರವಿ ಭತಗುಣಕಿ, ಚಿದಾನಂದ ಅರಗೆ, ಚಂದ್ರಾಮ ಮೇಡೇದಾರ, ಹನುಮಂತಗೌಡ ಪಾಟೀಲ, ಪ್ರವೀಣ ಮಾಡಕರ, ರಾಜು ನಾಯಕ, ಮಲ್ಲಿಕಾರ್ಜುನ ಸಿಂಗೆ, ಶ್ರೀಕೃಷ್ಣ ಸಲಗೊಂಡ, ಆನಂದ ಮಠ, ಪುಂಡಲೀಕ ಹೊಸಮನಿ, ಬಾಗೇಶ ತಳವಾರ, ಸಂದೀಪ ಚವಾಣ್, ಶಾಂತು ಹೊಸಮನಿ, ಸಚೀನ ಹರಿಜನ ಮತ್ತಿತರರಿದ್ದರು.