ಇಂಡಿಯ ದಾನಮ್ಮದೇವಿ ದೇವಸ್ಥಾನದ ದೀಪೋತ್ಸವ ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಅನೀಲ ಪ್ರಸಾದ ಏಳಗಿ, ಪೂಜಾ ಏಳಗಿ ದಂಪತಿಯನ್ನು ಸನ್ಮಾನಿಸಲಾಯಿತು. ಶಿರಶ್ಯಾಡ ಹಿರೇಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರ, ಆಳೂರ ಶಂಕರಾನAದ ಶಿವಾಚಾರ್ಯ, ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ಇತರರಿದ್ದರು.
ಇಂಡಿ : ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ಸಮಾಜಕ್ಕೆ ಏನನ್ನು ಕೊಟ್ಟಿದ್ದೇವೆ ಎಂಬುದು ಮುಖ್ಯವಾಗುತ್ತದೆ ಎಂದು ಶಿರಶ್ಯಾಡ ಹಿರೇಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಹೇಳಿದರು.
ಪಟ್ಟಣದ ದಾನಮ್ಮದೇವಿ ದೇವಸ್ಥಾನದಲ್ಲಿ ಬುಧವಾರ ಸಂಜೆ ದಾನಮ್ಮದೇವಿಯ 4ನೇ ವರ್ಷದ ಜಾತ್ರ‍್ಯೋತ್ಸವದಂಗವಾಗಿ ಹಮ್ಮಿಕೊಂಡಿದ್ದ ಬಾಲ ಮುತ್ತೆÊದೆಯರಿಗೆ ಉಡಿ ತುಂಬುವ, ದೀಪೋತ್ಸವ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರು ದೇಶಾಭಿಮಾನ, ಧರ್ಮಾಭಿಮಾನವನ್ನು ಬೆಳೆಸಿಕೊಳ್ಳಬೇಕು. ಕೇವಲ ದೊಡ್ಡ ಮಾತುಗಳನ್ನಾಡದೇ ಗುಣದಲ್ಲೂ ದೊಡ್ಡಸ್ತಿಕೆ ಹೊಂದಿರಬೇಕು. ಚಂಚಲ ಮನಸ್ಸನ್ನು ಶಾಂತವಾಗಿಡಲು ಅಧ್ಯಾತ್ಮ ಸಹಕಾರಿಯಾಗಿದೆ ಎಂದು ಹೇಳಿದರು.
ಆಳೂರ ಶಂಕರಾನಂದ ಶಿವಾಚಾರ್ಯರು ಮಾತನಾಡಿ, ಪ್ರತಿಫಲಾಪೇಕ್ಷೆ ಇಲ್ಲದೆ ಮರವೂ ಕಡಿಯಲು ಬಂದವನಿಗೂ ಹೇಗೆ ನೆರಳು ನೀಡುವುದೋ ಹಾಗೆ ಮನುಷ್ಯ ಬದುಕಿನಲ್ಲಿ ನಿಸ್ವಾರ್ಥ ಸೇವೆ ಮಾಡಿದರೆ ಅವನ ಬದುಕು ಉಜ್ವಲಗೊಳ್ಳುತ್ತದೆ ಎಂದರು.
ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ, ರಾಘವೇಂದ್ರ ಕುಲಕರ್ಣಿ, ವೈ.ಜಿ. ಬಿರಾದಾರ ಮಾತನಾಡಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಅನೀಲ ಪ್ರಸಾದ ಏಳಗಿ, ಪೂಜಾ ಏಳಗಿ ದಂಪತಿಯನ್ನು ಸನ್ಮಾನಿಸಲಾಯಿತು.
ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ನೀಲಕಂಠಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಡಿ.ಡಿ. ಮಡಗೊಂಡ, ಅನಂತ ಜೈನ, ಪಶು ವೈದ್ಯಾಧೀಕಾರಿ ಡಾ. ಲಕ್ಷ್ಮೀಶ ಕಟ್ಟಿಮನಿ, ಅನೀಲಗೌಡ ಬಿರಾದಾರ, ಮುದುಕು ಕುಂಬಾರ, ಬಾಳು ಮುಳಜಿ, ಅರವಿಂದ ಹಂಜಗಿ, ರಾಜಶೇಖರ ತಾಂಬೆ, ಮಲ್ಲಿಕಾರ್ಜುನ ಬಿರಾದಾರ, ಸಂಗಮೇಶ ಕಕ್ಕಳಮೇಲಿ, ಶೈಲೇಶ ಬೀಳಗಿ, ಜಗದೀಶ ಕ್ಷತ್ರಿ, ಬಾಬು ಹಂಜಗಿ, ರವಿಗೌಡ ಪಾಟೀಲ, ಮುರಳೀಧರ ಭಜಂತ್ರಿ, ನಿಖಿಲ ಭಜಂತ್ರಿ, ಸ್ಪಂದನಾ ಭಜಂತ್ರಿ, ಅರ್ಚಕ ದಾನಯ್ಯ ಶಾಸ್ತ್ರೀ ಇತರರಿದ್ದರು.