ವಿಜಯಪುರದ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತೊಗರಿ ಬೆಳೆಯಲ್ಲಿ ಉತ್ಪಾದನಾ ತಾಂತ್ರಿಕತೆಗಳ ಕಾರ್ಯಾಗಾರದಲ್ಲಿ ತೊಗರಿ ಬೆಳೆಯ ಕುರಿತ ತಾಂತ್ರಿಕ ಹಸ್ತ ಪ್ರತಿಗಳನ್ನು ಗಣ್ಯರು ಬಿಡುಗಡೆಗೊಳಿಸಿದರು. ಪಿ.ಎಲ್. ಪಾಟೀಲ, ಶಿವನಗೌಡ ಪಾಟೀಲ, ಅಶೋಕ ಸಜ್ಜನ ಮತ್ತಿತರರಿದ್ದಾರೆ. 
ವಿಜಯಪುರ

ತೊಗರಿ ಬಿತ್ತನೆಯಲ್ಲಿ ವಿಶೇಷ ತಾಂತ್ರಿಕತೆ ಅಳವಡಿಸಲಿ

ವಿಜಯಪುರ: ಆಹಾರ ಪದ್ಧತಿಯಲ್ಲಿ ದ್ವಿದಳ ಧಾನ್ಯಗಳಿಗೆ ಅಗ್ರಸ್ಥಾನವಿದೆ. ಅಕ್ಕಡಿ ಕಾಳಿಲ್ಲದ ಊಟಿಲ್ಲ, ಅಷ್ಟರ ಮಟ್ಟಿಗೆ ತೊಗರಿಯೂ ನಮ್ಮ ನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿದೆ. ದ್ವಿದಳ ಧಾನ್ಯಗಳು ನಮ್ಮ ಜೀವನಕ್ಕೆ ಬೇಕಾದ ಅಗತ್ಯ ಪೋಷಕಾಂಶ ನೀಡುತ್ತವೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿ ಪಿ.ಎಲ್. ಪಾಟೀಲ ಹೇಳಿದರು.

ಜಿಲ್ಲಾಡಳಿತ, ಜಿ.ಪಂ., ಕೃಷಿ ಇಲಾಖೆ, ಧಾರವಾಡ ಕೃಷಿ ವಿಶ್ವವಿದ್ಯಾಲಯ, ವಿಜಯಪುರದ ಕೃಷಿ ತಂತ್ರಜ್ಞರ ಸಂಸ್ಥೆ ಮತ್ತು ಜಿಲ್ಲಾ ಕೃಷಿಕ ಸಮಾಜದ ಸಹಯೋಗದಲ್ಲಿ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತೊಗರಿ ಬೆಳೆಯಲ್ಲಿ ಉತ್ಪಾದನಾ ತಾಂತ್ರಿಕತೆಗಳ ಕಾರ್ಯಾಗಾರ-೨೦೨೬ ಉದ್ದೇಶಿಸಿ ಅವರು ಮಾತನಾಡಿದರು.

ಬೇಳೆ ಕಾಳುಗಳಲ್ಲಿ ಸಾಕಷ್ಟು ಪೌಷ್ಟಿಕಾಂಶದ ಜತೆಗೆ ಬಹಳಷ್ಟು ವಿಟ್ಯಾಮಿನ್‌ಗಳಿವೆ. ಊಟದಲ್ಲಿ ಬೇಳೆ ಕಾಳುಗಳ ಅಗತ್ಯವಿದೆ. ಆರೋಗ್ಯವಂತರಾಗಲು ಅಕಡಿ ಕಾಳು ತಿನ್ನಬೇಕು. ರಕ್ತ ಚಲನವಲನ ಹಾಗೂ ಹೃದಯ ಸಂಬAಽ ಕಾಯಿಲೆಗಳ ನಿಯಂತ್ರಣಕ್ಕೆ ಬೇಳೆ ಕಾಳು ಬೇಕು ಎಂದು ಅವರು ತಿಳಿಸಿದರು.

ಬೇಳೆ ಕಾಳುಗಳಿಂದ ಅಜೀರ್ಣತೆ ಆಗುವುದಿಲ್ಲ, ಅದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಬೇಳೆ ಕಾಳುಗಳು ಕೃಷಿಗೆ ಮುಖ್ಯವಾಗಿ ಪರಿಸರ ಸ್ನೇಹಿ ಬೆಳೆಗಳಾಗಿದ್ದು, ಅಕ್ಕಡಿಕಾಳುಗಳನ್ನು ಯಥೇಚ್ಛವಾಗಿ ಬೆಳೆಯಬೇಕು. ರಾಜ್ಯದಲ್ಲಿ ವಿಜಯಪುರ ಮತ್ತು ಕಲಬುರಗಿ ಜಿಲ್ಲೆಯಲ್ಲಿ ತೊಗರಿಯನ್ನು ಅತ್ಯಽಕ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಹೀಗಾಗಿ, ತೊಗರಿ ಬಿತ್ತನೆಯಲ್ಲಿ ವಿಶೇಷ ತಾಂತ್ರಿಕತೆ ಅಳವಡಿಸಿಕೊಂಡು ಬೇಳೆ ಹಾಗೂ ಎಣ್ಣೆಕಾಳು ಬೆಳೆದು ಸ್ವಾವಲಂಬಿ ಜೀವನ ಸಾಽಸಬಹುದಾಗಿದೆ ಎಂದು ಅವರು ಸಲಹೆ ನೀಡಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಶೇ.೬೦ರಷ್ಟು ರೈತರು ತೊಗರಿ ಬೆಳೆಯುತ್ತಿದ್ದಾರೆ. ವಾತಾವರಣಕ್ಕೆ ಹೊಂದಿಕೊAಡು ಎಕರೆಗೆ ಒಂದು ಕ್ವಿಂಟಾಲ್ ಹೆಚ್ಚುವರಿಯಾಗಿ ಇಳುವರಿ ಬರುವಂತೆ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ತೊಗರಿ ಇಳುವರಿ ಹೆಚ್ಚಿಸುವ ಕಾರ್ಯತಂತ್ರಗಳ ಕುರಿತು ಅರಿತುಕೊಳ್ಳಬೇಕು ಎಂದು ತಿಳಿಸಿದರು.

ನಾಗಠಾಣ ಹೋಬಳಿಯ ಗೂಗದಡ್ಡಿಯ ಪ್ರಗತಿಪರ ರೈತ ಸುರೇಶ ಮಾಗಿ ಮಾತನಾಡಿ, ಪ್ರತಿಯೊಬ್ಬ ರೈತರು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದರು. ಬಳಿಕ ರೈತರಿಂದ ಕೇಳಿಬಂದ ಪ್ರಶ್ನೆಗಳಿಗೆ ಸುರೇಶ ಅವರು ಉತ್ತರಿಸಿದರು. ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದ ಆರ್.ಎಂ. ಹೂಗಾರ ತೊಗರಿ ಬೆಳೆಯಲ್ಲಿ ತಾಂತ್ರಿಕತೆ ಕುರಿತು ವಿವರಿಸಿದರು. ತಾಂತ್ರಿಕ ಹಸ್ತ ಪ್ರತಿಗಳನ್ನು ಬಿಡುಗಡೆಗೊಳಿಸಲಾಯಿತು.

ಸಂಶೋಧನಾ ನಿರ್ದೇಶಕ ಅಶೋಕ ಸಜ್ಜನ, ಶಿವನಗೌಡ ಬಿರಾದಾರ, ಎಸ್.ಬಿ. ಜಗಿನವರ. ಎಂ.ಎA. ಜಮಾದಾರ ಉಪಸ್ಥಿತಿ ವಹಿಸಿದ್ದರು.

ಕಲ್ಬುರ್ಗಿಯ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ರಾಜು ತೆಗ್ಗಳ್ಳಿ, ಕಲ್ಬುರ್ಗಿಯ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಮಲ್ಲಿಕಾರ್ಜುನ ಕೆಂಗನಾಳ, ಪ್ರಗತಿಪರ ರೈತರಾದ ಮನಗೂಳಿಯ ಪೃಥ್ವಿರಾಜ್ ಸಿಂಗ್ ಹಜೇರಿ, ಉಪ ಕೃಷಿ ನಿರ್ದೇಶಕ ಶರಣಗೌಡ ರಂಗನಗೌಡ, ಎಸ್.ಜಿ. ರಾಧಾಕೃಷ್ಣ, ಚಂದ್ರಕಾAತ ಪವಾರ ಮತ್ತಿತರರಿದ್ದರು.