ರಬಕವಿಯ ಶ್ರೀ ಕಾಳಿಕಾ ದೇಗುಲದಲ್ಲಿ ಸೋಮವಾರ ಸಂಜೆ ನಡೆದ ರಬಕವಿ ಬಣಜಿಗ ಸಮಾಜದ ಸರ್ವ ಸಾಧಾರಣ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ಗಿರೀಶ ಮುತ್ತೂರ ಮಾತನಾಡಿದರು. ಬಸವರಾಜ ತೆಗ್ಗಿ, ಚಂದ್ರಶೇಖರ ಹುಲಗಬಾಳಿ, ಬಸವರಾಜ ಕುಂಚನೂರ, ಉದಯಕುಮಾರ ಜಿಗಜಿನ್ನಿ ಇತರರಿದ್ದರು.
ರಬಕವಿ/ಬನಹಟ್ಟಿ : ಯಾವುದೇ ಸಮಾಜ ಸಂಘಟನೆಯಲ್ಲಿ ಬಲಿಷ್ಠವಾಗಬೇಕಾದಲ್ಲಿ ಗ್ರಾಮೀಣ, ನಗರ, ತಾಲೂಕು ಸೇರಿ ರಾಜ್ಯಮಟ್ಟದಲ್ಲೂ ಸದಸ್ಯತ್ವ ಬಲ ಹೆಚ್ಚಿಸಿಕೊಳ್ಳುವುದು ಅಗತ್ಯವೆಂದು ರಬಕವಿ ಬಣಜಿಗ ಸಮಾಜದ ಅಧ್ಯಕ್ಷ ಗಿರೀಶ ಮುತ್ತೂರ ಹೇಳಿದರು.
ರಬಕವಿ ವಿದ್ಯಾನಗರದ ಶ್ರೀ ಕಾಳಿಕಾ ದೇವಾಲಯದ ಸಮುದಾಯ ಭವನದಲ್ಲಿ ಸೋಮವಾರ ಸಂಜೆ ನಡೆದ ಬಣಜಿಗ ಸಮಾಜದ ಸರ್ವ ಸಾಧಾರಣ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯಮಟ್ಟದಲ್ಲಿ ವೈಯಕ್ತಿಕವಾಗಿ ಸದಸ್ಯತ್ವವಾದರೆ ಸರ್ಕಾರದ ಸೌಲಭ್ಯಗಳು ನೇರವಾಗಿ ಅರ್ಹರಿಗೆ ದೊರಕಲು ರಾಜ್ಯ ಘಟಕ ಕೆಲಸ ನಿರ್ವಹಿಸಲು ಅನುವಾಗುತ್ತದೆ.
ಸದ್ಯ ರಾಜ್ಯ ಘಟಕದಲ್ಲಿ ಕೇವಲ 600 ಸದಸ್ಯರು ಮಾತ್ರವಿದ್ದು, ಗ್ರಾಮ ಸೇರಿ ಎಲ್ಲ ಪ್ರದೇಶಗಳ ಬಣಜಿಗರು ಸದಸ್ಯತ್ವ ಪಡೆದು ರಾಜ್ಯ ಘಟಕಕ್ಕೆ ಬಲ ತುಂಬಬೇಕಿದೆ. 18 ವಯಸ್ಸಿನ ಸಮಾಜದ ಸ್ತ್ರೀ- ಪುರುಷರು ವಿವಿಧ ಶ್ರೇಣಿಯ ಶುಲ್ಕ ಪಾವತಿಸಿ ಸದಸ್ಯತ್ವ ಹೊಂದಬೇಕು. ಆ ಮೂಲಕ ನಮ್ಮ ಶಕ್ತಿ ಹೆಚ್ಚಿಸಿಕೊಂಡು ಸರ್ಕಾರದ ಸೌಲಭ್ಯ ಪಡೆಯಲು ನೆರವಾಗುತ್ತದೆ ಎಂದರು.
ಸAಘಟನೆಯಿAದಾಗುವ ಪ್ರಯೋಜನಗಳು ಮತ್ತು ಸಮಾಜದಲ್ಲಿ ಎಲ್ಲರೂ ಸಹಮತದ ಪಾಲ್ಗೊಳ್ಳುವಿಕೆಯಿಂದ ಕಟ್ಟಕಡೆಯ ವ್ಯಕ್ತಿಗೂ ಸಮಾಜ ನೆರವಾಗಲು ಸಾಧ್ಯವಾಗುತ್ತದೆ ಎಂದು ಸಮಾಜದ ಮುಖಂಡರು ಸಭೆಯಲ್ಲಿ ತಿಳಿಸಿದರು.
ಬಸವರಾಜ ತೆಗ್ಗಿ, ಚಂದ್ರಶೇಖರ ಹುಲಗಬಾಳಿ, ಬಸವರಾಜ ಕುಂಚನೂರ, ಉದಯಕುಮಾರ ಜಿಗಜಿನ್ನಿ, ಪ್ರಭಾಕರ ಢಪಳಾಪುರ, ಗಜಾನನ ತೆಗ್ಗಿ, ರವಿ ಮುತ್ತೂರ, ಅಶೋಕ ಕೋತೀನ, ಅಂದಾನಿ ಮುತ್ತೂರ, ಬಸವರಾಜ ತೊರಲಿ, ಸಿರೀಶ ಶೇಠೆ, ನೀಲಕಂಠ ಮುತ್ತೂರ, ಶಾಂತವೀರ ಪರಮಶೆಟ್ಟಿ ಮತ್ತಿತರರು ಇದ್ದರು. ಖಜಾಂಚಿ ಶಿವಾನಂದ ಮುತ್ತೂರ ವಾರ್ಷಿಕ ಲೆಕ್ಕ-ಪತ್ರ ಮಂಡಿಸಿದರು.