ವಿಜಯಪುರದ ಸಿದ್ಧೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮೈಸೂರ ಸ್ಯಾಂಡಲ್ ಸೋಪು ಉತ್ಪಾದನಾ ಘಟಕದ ಮಾರುಕಟ್ಟೆ ಪ್ರಧಾನ ವ್ಯವಸ್ಥಾಪಕ ಕೆ.ಎಸ್. ಗಂಗಪ್ಪ ಮಾತನಾಡಿದರು. ಆರ್. ಸುಷ್ಮಾ ಇದ್ದಾರೆ. 
ವಿಜಯಪುರ

ಜಾತ್ರೆಯಲ್ಲಿ ಸೋಪ್ ಮೇಳ ಆಯೋಜನೆ

ವಿಜಯಪುರ: ಉತ್ತರ ಕರ್ನಾಟಕದ ಪ್ರಮುಖ ಜಾತ್ರೆಯಾದ ಸಿದ್ಧೇಶ್ವರ ಸಂಕ್ರಮಣ ಜಾತ್ರಾ ಮಹೋತ್ಸವದ ಅಂಗವಾಗಿ ಜ. 11 ರಿಂದ ಜ. 20 ರವರೆಗೆ ನಗರದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಶಿವಾನುಭವ ಮಂಟಪದಲ್ಲಿ `ಸೋಪ್ ಮೇಳ' ಶೀರ್ಷಿಕೆಯಡಿ ಮೈಸೂರು ಸ್ಯಾಂಡಲ್ ಸೋಪು ಹಾಗೂ ವಿವಿಧ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ ಎಂದು ಮೈಸೂರ ಸ್ಯಾಂಡಲ್ ಸೋಪು ಉತ್ಪಾದನಾ ಘಟಕದ ಮಾರುಕಟ್ಟೆ ಪ್ರಧಾನ ವ್ಯವಸ್ಥಾಪಕ ಕೆ.ಎಸ್. ಗಂಗಪ್ಪ ಹೇಳಿದರು.
ಮೇಳಕ್ಕೆ ಈಗಾಗಲೇ ಪೂರಕ ಸಿದ್ಧತೆಗಳು ನಡೆದಿವೆ. ಪ್ರತಿ ದಿನ ಬೆಳಗ್ಗೆ 9.30 ರಿಂದ ರಾತ್ರಿ 9 ರವರೆಗೆ ಮೇಳ ನಡೆಯಲಿದ್ದು, ಜನರನ್ನು ಮೇಳಕ್ಕೆ ಆಕರ್ಷಸುವ ನಿಟ್ಟಿನಲ್ಲಿ ಮೈಸೂರು ಅರಮನೆಯ ದರ್ಬಾರ್ ಹಾಲ್‌ನ ವೈಭವ ಸೃಷ್ಟಿಸಲಾಗಿದೆ. ಗ್ರಾಹಕರು ವಿಶೇಷ ರಿಯಾಯಿತಿ ದರದಲ್ಲಿ ತಮಗೆ ಬೇಕಾದ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಮೈಸೂರು ಸ್ಯಾಂಡಲï ಸೋಪು ಹಾಗೂ ಉತ್ಪನ್ನಗಳು ಗ್ರಾಹಕರ ಜನಪ್ರಿಯತೆ ಪಡೆದುಕೊಂಡ ಬ್ರ‍್ಯಾಂಡ್ ಆಗಿದೆ. ಅಲ್ಲದೆ, ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ಮೈಸೂರು ಸ್ಯಾಂಡಲï ಮೊದಲಾದ ಉತ್ಪನ್ನ ಉತ್ಪಾದಿಸುವ ಘಟಕ ಮೂರು ಬಾರಿ ಸಾರ್ವಜನಿಕ ಶ್ರೇಷ್ಠತೆಗಾಗಿ ಮುಖ್ಯಮಂತ್ರಿ ರತ್ನ ಪ್ರಶಸ್ತಿಯೂ ಸೇರಿ ಹಲವು ಪ್ರಶಸ್ತಿಗಳನ್ನು ಪಡೆದಿದೆ. ಸಂಸ್ಥೆಯ ಶ್ರೀಗಂಧದೆಣ್ಣೆ ಸೇರಿ ಸಾಬೂನು, ಮಾರ್ಜಕ, ಸೌಂದರ್ಯವರ್ಧಕ, ಆಗರಬತ್ತಿ ಹಾಗೂ ಇನ್ನಿತರ ಸುಮಾರು 50ಕ್ಕೂ ಅಽಕ ಉತ್ಪನ್ನಗಳನ್ನು ತಯಾರಿಸುತ್ತಿದೆ ಎಂದು ತಿಳಿಸಿದರು.

ಲಾಭದತ್ತ ದಾಪುಗಾಲು

ಬಹುರಾಷ್ಟ್ರೀಯ ಸಂಸ್ಥೆಗಳ ತೀವ್ರ ಪೈಪೋಟಿಯ ನಡುವೆಯೂ ಸಂಸ್ಥೆಯು ಅಽಕ ವಹಿವಾಟು ನಡೆಸುವ ಮೂಲಕ ವರ್ಷದಿಂದ ವರ್ಷಕ್ಕೆ ಪ್ರಗತಿಯತ್ತ ಸಾಗುತ್ತಿದೆ. 2023-24 ನೇ ಸಾಲಿನಲ್ಲಿ 1571.00 ಕೋಟಿ ರೂ. ವಹಿವಾಟು ನಡೆಸಿ ಅಂದಾಜು ನಿವ್ವಳ 362.00 ಕೋಟಿ ರೂ.ಗಳ ದಾಖಲೆ ಲಾಭ ಗಳಿಸಿದೆ. 2024-25 ಆರ್ಥಿಕ ವರ್ಷದಲ್ಲಿ ಉತ್ಪನ್ನಗಳ ಮಾರಾಟದಲ್ಲಿ ಎಲ್ಲ ರಾಜ್ಯಗಳಲ್ಲಿ ಉತ್ತಮ ಪ್ರಗತಿ ತೋರುತ್ತಿದ್ದು ವಹಿವಾಟು 1787.25 ಕೋಟಿ ರೂ.ಗಳಾಗಿದ್ದು, ಶೇ.14 ರಷ್ಟು ಪ್ರಗತಿಯೊಂದಿಗೆ ನಿವ್ವಳ ಲಾಭ 451.04 ಕೋಟಿ ರೂ. ಗಳಿಸಿದೆ. ಪ್ರಸಕ್ತ ವರ್ಷ 2025-26 ಕ್ಕೆ ಇದೇ ಪ್ರಗತಿ ಮುಂದುವರೆದಿದ್ದು ಸಂಸ್ಥೆಯು ಡಿಸೆಂಬರ್ 2025 ರವರೆಗೆ 1484.70 ಕೋಟಿ ರೂ. ವಹಿವಾಟು ನೆಡೆಸಿದೆ ಎಂದರು.
ಅಽಕಾರಿಗಳಾದ ಆರ್. ಸುಷ್ಮಾ, ವಿಜಯಮಹಾಂತೇಶ ಕಾಮತ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.