ಸಿಂದಗಿ ನಗರದಲ್ಲಿ ಲಿಂ. ಶಾಂತವೀರ ಪಟ್ಟಾಧ್ಯಕ್ಷರ 46ನೇ ಗುರು ಸ್ಮರಣೆ ನಿಮಿತ್ತ ರಜತ ಮೂರ್ತಿ ಮೆರವಣಿಗೆ ನಡೆಯಿತು. 
ವಿಜಯಪುರ

ಲಿಂ. ಶಾಂತವೀರ ಪಟ್ಟಾಧ್ಯಕ್ಷರ ರಜತ ಮೂರ್ತಿ ಮೆರವಣಿಗೆ

ಸಿಂದಗಿ : ನಗರದ ಪ್ರಮುಖ ಬೀದಿಗಳಲ್ಲಿ ಹಿರೇಮಠದ ವತಿಯಿಂದ ಲಿಂ. ಶಾಂತವೀರ ಪಟ್ಟಾಧ್ಯಕ್ಷರ 46ನೇ ಗುರು ಸ್ಮರಣೆ ನಿಮಿತ್ತ ಶುಕ್ರವಾರ ರಜತ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ ನಡೆಯಿತು.
ಮೆರವಣಿಗೆ ಶಾಂತೇಶ್ವರ ಮಠದಿಂದ ಆರಂಭಗೊAಡು, ಹಳೆಯ ಬಜಾರ್, ಶರಣ ನೂಲಿ ಚಂದಯ್ಯನವರ ವೃತ್ತ, ಟಿಪ್ಪು ವೃತ್ತದ ಮೂಲಕ ತೋಂಟದ ಲಿಂ. ಡಾ. ಸಿದ್ಧಲಿಂಗ ಮಹಾಸ್ವಾಮಿಗಳ ರಸ್ತೆ ಮಾರ್ಗ, ಸ್ವಾಮಿ ವಿವೇಕಾನಂದ ವೃತ್ತ, ನೀಲಗಂಗಾದೇವಿ ದೇವಸ್ಥಾನ ಮಾರ್ಗವಾಗಿ ಶ್ರೀಮಠಕ್ಕೆ ತಲುಪಿತು.
ಮಾರ್ಗ ಮಧ್ಯೆ ಶ್ರೀಮಠದ ಭಕ್ತರು, ಪಟ್ಟಾಧ್ಯಕ್ಷರ ರಜತ ಮೂರ್ತಿಗೆ ಆರತಿ ಎತ್ತಿ ಪ್ರಸಾದ ನೀಡಿ ಭಕ್ತಿ ಮೆರೆದರು. ಮಹಿಳೆಯರು ಪಲ್ಲಕ್ಕಿ ಹೊತ್ತು ಪುನೀತರಾದರು.
ಮೆರವಣಿಗೆಯಲ್ಲಿ ಕೆಂಚಬಸವ ಶಿವಾಚಾರ್ಯರು, ರೇವಣಸಿದ್ಧ ಶಿವಾಚಾರ್ಯರು, ಶಿವಾನಂದ ಶಿವಾಚಾರ್ಯರು, ಚನ್ನಬಸವ ದೇವರು, ಶಿವಪ್ರಸಾದ ದೇವರು, ಲಿಂಗದೇವರು ಮೆರವಣಿಗೆಯ ಸಾರಥ್ಯ ವಹಿಸಿದ್ದರು.
ಪ್ರೊ. ಶಾಂತೂ ಹಿರೇಮಠ, ಅಶೋಕ ಕುಲಕರ್ಣಿ, ಗಿರೀಶ ನಾಗೂರ, ಸಿದ್ಧಲಿಂಗ ಪತ್ತಾರ, ಗಂಗಾಧರ ಹಿರೇಮಠ, ರವಿ ಗೌಸಾನೆ, ಶಾಂತವೀರ ಹಿರೇಮಠ, ಗಂಗಯ್ಯ ಚಿಕ್ಕಪ್ಪಯ್ಯನಮಠ, ಸದಾನಂದ ಕುಂಬಾರ, ಸಂತೋಷ ಬಮ್ಮಣ್ಣಿ ಮತ್ತಿತರರಿದ್ದರು.