ಕಲಕೇರಿ ಸಮೀಪದ ಅಸ್ಕಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆಯ ವಾತ್ಸಲ್ಯ ಯೋಜನೆಯಡಿ ಮಂಜೂರಾಗಿದ್ದ ಮನೆಯನ್ನು ನಿರ್ಮಿಸಿ ಲಾನುಭವಿಯಾದ ಅಸ್ಕಿ ಗ್ರಾಮದ ಪ್ಯಾಟಿ ಈರಮ್ಮನವರಿಗೆ ವಾತ್ಸಲ್ಯ ಮನೆ ಹಸ್ತಾಂತರಿಸಲಾಯಿತು. ತಾಲ್ಲೂಕು ಯೋಜನಾಧಿಕಾರಿ ಬಿನೋಯಿ, ಸಂಗನಗೌಡ ವನಕಿಹಾಳರು, ಸಿ.ಎಂ.ಟಕ್ಕಳಕಿ ಮತ್ತಿತರರಿದ್ದರು.
- ಜಿಲ್ಲಾ ನಿರ್ದೇಶಕ ಮೋಹನ್ ನಾಯ್ಕ ಅಭಿಮತ
- ಧರ್ಮಸ್ಥಳ ಗ್ರಾಮಾಭಿವೃದ್ಧಿ ವಾತ್ಸಲ್ಯ ಮನೆ ಹಸ್ತಾಂತರ
ಕಲಕೇರಿ: ಡಾ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಅಮ್ಮನವರ ಆಶಾದಾಯಕ ಕಾರ್ಯಕ್ರಮವಾದ ವಾತ್ಸಲ್ಯ ಮನೆ ರಚನೆ, ಫಲಾನುಭವಿಗಳಿಗೆ ಮಾಸಾಶಾನ, ನಿರ್ಗತಿಕರಿಗೆ, ಸೂರಿಲ್ಲದವರಿಗೆ ಆಶ್ರಯ ಒದಗಿಸುವ ನಿಟ್ಟಿನಲ್ಲಿ ಪೂಜ್ಯರು ವಾತ್ಸಲ್ಯ ಮನೆ ರಚನೆ ಮಾಡಿದ್ದಾರೆ ಎಂದು ಧರ್ಮಸ್ಥಳ ಸಂಘದ ಜಿಲ್ಲಾ ನಿರ್ದೇಶಕ ಮೋಹನ್ ನಾಯ್ಕ ತಿಳಿಸಿದರು.
ಸಮೀಪದ ಅಸ್ಕಿ ಕಾರ್ಯಕ್ಷೇತ್ರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಯೋಜನೆಯಡಿ ಮಂಜೂರಾಗಿದ್ದ ಮನೆಯನ್ನು ನಿರ್ಮಿಸಿ ಲಾನುಭವಿಯಾದ ಅಸ್ಕಿ ಗ್ರಾಮದ ಪ್ಯಾಟಿ ಈರಮ್ಮನವರಿಗೆ ವಾತ್ಸಲ್ಯ ಮನೆ ಹಸ್ತಾಂತರಿಸಿ ಮಾತನಾಡಿದರು.
ಈ ಯೋಜನೆ ಅಡಿಯಲ್ಲಿ ಸುಮಾರು 18000 ವಾತ್ಸಲ್ಯ ಫಲಾನುಭವಿಗಳಿಗೆ ಪ್ರತಿ ತಿಂಗಳು ಒಂದು ಸಾವಿರ ಮಾಸಾಶನ ಬರುತ್ತಿದ್ದು, ಸುಮಾರು 800 ವಾತ್ಸಲ್ಯ ಮನೆ ರಚನೆ ಮಾಡಿದ್ದು ಫಲಾನುಭವಿಗಳು ನೆಮ್ಮದಿಯ ಜೀವನ ನಡೆಸಲು ಪೂಜ್ಯರು ದಾರಿ ಮಾಡಿ ಕೊಟ್ಟಿದ್ದಾರೆ. ಇಷ್ಟೇ ಅಲ್ಲದೇ ಪೂಜ್ಯರು ಕೆರೆ ಹೂಳೆತ್ತುವುದು, ಸುಜ್ಞಾನ ಶಿಷ್ಯ ವೇತನ, ಜ್ಞಾನ ದೀಪ ಶಿಕ್ಷಕರ ನೇಮಕಾತಿ ಸೇರಿದಂತೆ ಹಲವಾರು ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ದಾರಿ ದೀಪವಾಗಿದ್ದಾರೆ ಎಂದರು.
ಕೆರೆ ಸಮಿತಿಯ ಅಧ್ಯಕ್ಷ ಜಲಪುರ ಸಿದ್ದನಗೌಡ ಬಸನಗೌಡ ಬಿರಾದಾರ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಅವಣ್ಣ ಬಿರಾದಾರ ಮಾತನಾಡಿ, ಸರ್ಕಾರ ಮಾಡದಂತಹ ಹಲವು ಯೋಜನೆಗಳನ್ನು ಪೂಜ್ಯರು ಜಾರಿಗೊಳಿಸುತ್ತಿದ್ದು, ಮಕ್ಕಳಿಲ್ಲದರಿಗೆ ನಿರ್ಗತಿಕರಿಗೆ ವಾತ್ಸಲ್ಯ ಅಂದರೆ ತಾಯಿಯ ಮಮತೆ, ಕರುಣೆಯ ಪ್ರತಿರೂಪವೇ ವಾತ್ಸಲ್ಯ ಮನೆಯಾಗಿದೆ. ಫಲಾನುಭವಿಗಳು ಈ ಯೋಜನೆಯನ್ನು ಸದುಪಯೋಗಪಡಿಸಿಕೊಂಡರೆ ಸುಂದರ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.
ತಾಲ್ಲೂಕು ಯೋಜನಾಧಿಕಾರಿ ಬಿನೋಯಿ, ಎಸ್‌ಡಿಎಮ್‌ಸಿ ಅಧ್ಯಕ್ಷ ಸಂಗನಗೌಡ ವನಕಿಹಾಳರು, ಪಿಕೆಪಿಎಸ್ ಮಾಜಿ ಅಧ್ಯಕ್ಷ ಸಿ.ಎಮ್.ಟಕ್ಕಳಕಿ, ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ವಿಶ್ವನಾಥ ಕಾಶಿನಾಥ ತಳವಾರ, ಗ್ರಾಪಂ ಸದಸ್ಯರಾದ ಅಯ್ಯಪ್ಪ ಮುಗುಳಿ, ರೇವಣಸಿದ್ಧ ಕವಡಿಮಠ, ಗಣ್ಯರಾದ ಶಾಂತಯ್ಯ ಚನ್ನಬಸಯ್ಯ ಹಿರೇಮಠ, ಎಂ.ಕೆ.ಇಂಚಗೇರಿ, ರೇವಣಸಿದ್ಧಪ್ಪ ಹಂಚಲಿ, ಬಾಲಪ್ಪಗೌಡ ಬಿರಾದಾರ, ಬಸವರಾಜ ಪಡಶೆಟ್ಟಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಆಶಾ ಮತ್ತಿತರರಿದ್ದರು.