ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ದಲಿತ ಗರ್ಭಿಣಿ ಹೆಣ್ಣು ಮಗಳನ್ನು ಕೊಲೆಗಡುಕರನ್ನು ಕಠಿಣ ಶಿಕ್ಷೆಗೆ ಗುರುಪಡಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ಪದಾಽಕಾರಿಗಳು ವಿಜಯಪುರದಲ್ಲಿ ಜಿಲ್ಲಾಽಕಾರಿ ಕಚೇರಿಗೆ ಮನವಿ ಸಲ್ಲಿಸಿದರು. ಮುತ್ತು ಭೋವಿ, ರಾಜೇಶ್ವರಿ ಮಠಪತಿ, ಪಂಡಿತ ಖಂಡಗಳೆ ಮತ್ತಿತರರಿದ್ದಾರೆ.
- ವಿವಿಧ ಸಂಘಟನೆ
- ಜಿಲ್ಲಾಧಿಕಾರಿಗೆ ಮನವಿ
ವಿಜಯಪುರ: ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ದಲಿತ ಗರ್ಭಿಣಿ ಹೆಣ್ಣು ಮಗಳನ್ನು ಕೊಲೆಗೈದ ತಂದೆಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ಬಿಜಾಪುರ ನಗರ ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟ, ಅನೌಪಚಾರಿಕ ಶಿಕ್ಷಣ ಸಂಸ್ಥೆ, ವಿಜಯಪುರ ಜನ ವೇದಿಕೆ ಹಾಗೂ ವಿಜಯಪುರ ನಗರ ಸ್ವಂ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟ ಸಹ ಸಂಘಟನೆಗಳ ಪದಾಧಧಿಕಾರಿಗಳು ಶುಕ್ರವಾರ ಜಿಲ್ಲಾಽಕಾರಿ ಕಚೇರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಹುಬ್ಬಳ್ಳಿ ತಾಲೂಕಿನ ಇನಾಂ ಮೀರಾಪೂರ ಗ್ರಾಮದಲ್ಲಿ ಒಂದು ವರ್ಷದ ಹಿಂದೆ ದಲಿತ ಯುವಕನೊಬ್ಬ ಲಿಂಗಾಯತ ಹೆಣ್ಣು ಮಗಳನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದ. 2025 ಡಿ. 21 ರಂದು ಹೆಣ್ಣು ಮಗಳ ತಂದೆಯೇ 7 ತಿಂಗಳ ಗರ್ಭಿಣಿ ಮಗಳನ್ನೇ ಕೊಲೆಗೈದಿದ್ದಾನೆ. ಕೊಲೆಗಡುಕ ತಂದೆ ಹಾಗೂ ಅಪರಾಧದಲ್ಲಿ ಭಾಗಿಯಾದ ಜನರಿಗೆ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಮತ್ತು ಯುವಕನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಮಿತಿ ಒಕ್ಕೂಟದ ಅಧ್ಯಕ್ಷ ಮುತ್ತು ಭೋವಿ, ಮಹಿಳಾ ಒಕ್ಕೂಟ ಅಧ್ಯಕ್ಷೆ ರಾಜೇಶ್ವರಿ ಮಠಪತಿ, ಪಂಡಿತ ಖಂಡಗಳೆ, ಮೀನಾಕ್ಷಿ ಕಾಲೆಬಾಗ, ಶೀಲಾ ಮಾದರ, ರೇಣುಕಾ ಸಮಗೊಂಡ, ರಿಯಾನಾ ನದಾಫ, ಇದಾಯತ ನದಾಫ, ಕಾಮಿನಿ ಕಸಬೆ, ರೇಣುಕಾ ಕೊಟ್ಯಾಳ, ಮೀನಾಕ್ಷಿ ಸಿಂಗೆ ಮತ್ತಿತರರಿದ್ದರು.